ನಂದನ ಕಾಳಜಿಗೆ ಕರಗಿದ ಕೇಶವ, ಅಪ್ಪ ಮಗನ ಪ್ರೀತಿ ನೋಡಿ ವೀಕ್ಷಕರು ಭಾವುಕ

Published : Apr 28, 2026, 12:42 PM IST

Nandagokula Serial : ಹೆಸರಿಗೆ ತಕ್ಕಂತೆ ಮತ್ತೆ ನಂದನ ಮನೆ ನಂದಗೋಕುಲವಾಗ್ತಿದೆ. ಅಪ್ಪನ ಪ್ರೀತಿ ಕೇಶವನಿಗೆ ಅರ್ಥವಾಗಿದೆ. ಮೀನಾ ಜೊತೆ ಬೇರೆ ಮನೆ ಮಾಡ್ಬೇಕೆಂದಿದ್ದ ಕೇಶವ ಮನಸ್ಸು ಬದಲಿಸಿದ್ದಾನೆ. 

PREV
17
ಒಂದಾದ ಅಪ್ಪ - ಮಗ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ನಂದಗೋಕುಲ ಸೀರಿಯಲ್ ವೀಕ್ಷಕರ ಕಣ್ಣಂಚಲ್ಲಿ ನೀರು ತರಿಸಿದೆ. ಅಪ್ಪನ ಪ್ರೀತಿ ಕೊನೆಗೂ ಎಲ್ಲರ ಮುಂದೆ ಪ್ರಕಟವಾಗಿದೆ. ನಂದನ ಮನೆ ಒಡೆದೇ ಹೋಯ್ತು ಎಂದುಕೊಂಡಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲ ಸೀರಿಯಲ್ ನಂತೆ ಅದೇ ಜಗಳ, ಗಲಾಟೆ ಅಂತ ಬೇಸರಗೊಳ್ಳಲು ವೀಕ್ಷಕರಿಗೆ ಅವಕಾಶ ಸಿಗಲಿಲ್ಲ. ಮತ್ತೆ ಒಗ್ಗಟ್ಟಿನ ಮನೆಯಲ್ಲಿ ಪ್ರೀತಿ ಕಾಣಿಸ್ತಿದೆ.

27
ಅಪ್ಪನ ಪ್ರೀತಿ

ನಂದ, ಮೀನಾಗೆ ಬೈದ್ಮೇಲೆ ಕೇಶವನ ಕೋಪ ಜಾಸ್ತಿಯಾಗಿತ್ತು. ಅಪ್ಪನ ಮೇಲೆ ಅಸಮಾಧಾನಗೊಂಡಿದ್ದ ಕೇಶವ. ಮೀನಾಗೆ ಎಲ್ಲಿ ಪ್ರೀತಿ, ಗೌರವ ಸಿಗ್ತಿಲ್ವೋ ಅಲ್ಲಿ ಇರೋದು ಬೇಡ ಅಂದ್ಕೊಂಡಿದ್ದ. ಬೇರೆ ಮನೆ ಮಾಡುವ ಪ್ರಸ್ತಾಪವನ್ನೂ ಮೀನಾ ಮುಂದಿಟ್ಟಿದ್ದ. ಆದ್ರೆ ಈಗ ಅಪ್ಪನ ಪ್ರೀತಿ ಏನು ಎಂಬುದು ಕೇಶವನಿಗೆ ಅರ್ಥವಾಗಿದೆ.

37
ಮುಂದುವರೆದಿದ್ದ ಮುನಿಸು

ಕೇಶವನ ಮಾತಿಗೆ ಮೀನಾ ಒಪ್ಪಿಗೆ ನೀಡಿರಲಿಲ್ಲ. ಮನೆ ಒಡೆಯುವ ಆಲೋಚನೆ ಆಕೆಗಿರಲಿಲ್ಲ. ಈ ಮಧ್ಯೆ ನಂದ, ಮೀನಾ ಕ್ಷಮೆ ಕೂಡ ಕೇಳಿದ್ದ. ಇದ್ರಿಂದ ಮೀನಾ ಖುಷಿ ಡಬಲ್ ಆಗಿತ್ತು. ಆದ್ರೆ ಕೇಶವನ ಮನಸ್ಸು ಬದಲಿಸುವ ಪ್ರಯತ್ನ ನಿರಂತರವಾಗಿ ನಡೆದಿತ್ತು. ಕೇಶವ ಮಾತ್ರ ಕೋಪದಲ್ಲಿಯೇ ಇದ್ದ. ಅಷ್ಟೇ ಅಲ್ಲ, ಅಪ್ಪನ ಬೈಕ್ ತಿರಸ್ಕರಿಸಿ ನಡೆದು ಅಂಗಡಿಗೆ ಹೋಗಿದ್ದ. ಆದ್ರೆ ನಂದನ ಪ್ರತಿ ಬೈಗುಳದಲ್ಲೂ ಪ್ರೀತಿ ಅಡಗಿತ್ತು. ಕಾಳಸಜಿಯಿತ್ತು. ಇದು ಕೇಶವನಿಗೆ ಅರ್ಥವಾಗಿರಲಿಲ್ಲ.

47
ಕೇಶವನಿಗೆ ಅರ್ಥವಾಯ್ತು ಅಪ್ಪನ ಮನಸ್ಸು

ಯಾವಾಗ್ಲೂ ಅಮ್ಮ ಪ್ರೀತಿಗೆ ಅಪ್ಪ ಬೈಗುಳಕ್ಕೆ ಎಂಬುದು ಅಲಿಖಿತ ನಿಯಮ. ಇದನ್ನು ಅನೇಕರು ಅರ್ಥಮಾಡಿಕೊಳ್ಳೋದಿಲ್ಲ. ಅಮ್ಮನ ಒಡಲಲ್ಲಿ ಪ್ರೀತಿ ಇದ್ರೂ ಮಕ್ಕಳ ಭವಿಷ್ಯಕ್ಕಾಗಿ ಅಪ್ಪ ಕಟುವಾಗಿರ್ತಾನೆ. ಮಕ್ಕಳನ್ನು ಬೈದು, ತಿದ್ದುವ ಪ್ರಯತ್ನ ಮಾಡ್ತಾನೆ. ಅದಕ್ಕೆ ನಂದ ಕೂಡ ಹೊರತಾಗಿಲ್ಲ. ಅವನ ಪ್ರೀತಿ ವೀಕ್ಷಕರಿಗೆ ಕಾಣ್ತಿತ್ತೇ ವಿನಃ ಕೇಶವನಿಗೆ ಕಾಣ್ತಿರಲಿಲ್ಲ. ಈಗ ಕೇಶವನ ಕಣ್ಣಿಗೂ ಅಪ್ಪನ ಪ್ರೀತಿ ಕಾಣಿಸಿದೆ.

57
ಅಂಗಡಿಯಲ್ಲಿ ನಡೆದಿದ್ದೇನು?

ಕೇಶವ, ಕೆಲ್ಸ ಮಾಡುವಾಗ ಕೈಗೆ ಗಾಯ ಮಾಡ್ಕೊಂಡಿದ್ದಾನೆ. ಚಾಕು ಕೈಗೆ ತಾಗ್ತಿದ್ದಂತೆ ಕೇಶವ, ಅಪ್ಪ ಅಂತ ಕೂಗಿಕೊಂಡಿದ್ದಾನೆ. ಮಗನ ಕೂಗು ಕೇಳಿ ಓಡಿ ಬಂದ ನಂದ, ಬ್ಯಾಂಡೇಜ್ ಮಾಡಿ ಕಾಳಜಿ ತೋರಿಸಿದ್ದಾನೆ. ಮಗನಿಗೆ ಬೈತಾನೇ ಪ್ರೀತಿ ತೋರಿಸಿದ್ದಾನೆ. ಗ್ರಾಹಕರೊಬ್ಬರು ಬಂದಾಗ ಕೇಶವನ ಗಮನ ಬೇರೆಕಡೆ ಇತ್ತು. ಗ್ರಾಹಕ, ಕೇಶವನಿಗೆ ಬೈತಿದ್ದಂತೆ, ಆತ ಈ ಅಂಗಡಿ ಮಾಲೀಕ, ಅವನಿಗೆ ಯಾಕೆ ಬೈತೀರಿ ಅಂತ ನಂದ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

67
ಅಪ್ಪನನ್ನು ತಬ್ಬಿಕೊಂಡ ಕೇಶವ

ಅಪ್ಪನ ಈ ಒಳ ಪ್ರೀತಿ ಅಂತೂ ಕೇಶವನಿಗೆ ಅರ್ಥವಾಗಿದೆ. ತಪ್ಪು ನಿರ್ಧಾರ ತೆಗೆದುಕೊಳ್ತಿದ್ದೆ ಎಂಬ ಸತ್ಯ ಅರಿವಾಗಿದೆ. ಅಪ್ಪನನ್ನು ತಬ್ಬಿ ಕ್ಷಮೆ ಕೇಳಿದ್ದಾನೆ. ಅಪ್ಪನ ನೆರಳಿನಲ್ಲಿ ಆರಾಮವಾಗಿರ್ತೇನೆ ಎಂದಿದ್ದಾನೆ. ಇದು ಮೀನಾ ಹಾಗೂ ಗಿರಿಜಾಗೆ ಖುಷಿ ನೀಡಿದೆ. ಇದು ಗಾಜಿನ ಮನೆಯಲ್ಲ ನಂದಗೋಕುಲ ಅಂತ ಮೀನಾ ಸಂತೋಷದಿಂದ ಹೇಳಿದ್ದಾಳೆ.

77
ವೀಕ್ಷಕರ ಖುಷಿ

ಪ್ರೋಮೋ ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ಇಂಥ ಸೀರಿಯಲ್ ಅಗತ್ಯವಿದೆ ಎಂದಿದ್ದಾರೆ. ಅಪ್ಪನ ಪ್ರೀತಿಯನ್ನು ಮಕ್ಕಳು ಅರ್ಥ ಮಾಡ್ಕೊಳ್ಬೇಕಿದೆ, ಇಂಥ ಅಪ್ಪ, ಸೊಸೆ, ಅಮ್ಮ, ಮಕ್ಕಳು ಸಿಗೋದೇ ಅಪರೂಪ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories