Karna Serial: ನಿತ್ಯಾಗೆ ಕರ್ಣನ ಮೇಲೆ ಲವ್​ ಆಗೋಯ್ತು; ನಿಧಿ-ಕರ್ಣ ಮದುವೆಯಾಗಿದ್ದು ಕನಸಾ?

Published : Apr 27, 2026, 05:53 PM IST

ಕರ್ಣ ಸೀರಿಯಲ್‌ನಲ್ಲಿ, ನಿತ್ಯಾ ತಾನು ಕರ್ಣನನ್ನು ಪ್ರೀತಿಸುತ್ತಿರುವ ವಿಷಯವನ್ನು ತಂಗಿ ನಿಧಿಗೆ ತಿಳಿಸುತ್ತಾಳೆ. ಆದರೆ, ಕರ್ಣನನ್ನು ಪ್ರೀತಿಸುತ್ತಿದ್ದ ನಿಧಿ, ಅಕ್ಕನ ಸಂತೋಷಕ್ಕಾಗಿ  ಪ್ರೀತಿ ತ್ಯಾಗ ಮಾಡಲು ನಿರ್ಧರಿಸುತ್ತಾಳೆ. ಮುಂಬರುವ ಪ್ರೋಮೋ ಮದುವೆಯ ಟ್ವಿಸ್ಟ್‌ನ ಸುಳಿವು ನೀಡಿದ್ದು, ಕಥೆ ಏನಾಗಲಿದೆ?

PREV
16
ಲವ್​ ವಿಷ್ಯ ಬಹಿರಂಗವಾಗಲೇ ಇಲ್ಲ!

ಕರ್ಣ ಸೀರಿಯಲ್​ (Karna Serial) ಇದೀಗ ರೋಚಕ ಹಂತ ತಲುಪಿದೆ. ನಿತ್ಯಾ ಮತ್ತು ಕರ್ಣ ಇನ್ನು ತಮ್ಮ ಪ್ರೀತಿಯ ಗುಟ್ಟನ್ನು ಸೀಕ್ರೇಟ್​ ಆಗಿ ಇಟ್ಟರೆ ಪ್ರಯೋಜನವಿಲ್ಲ ಎಂದು ಅದನ್ನು ಹೇಳುವ ಮನಸ್ಸು ಮಾಡಿದ್ದಾರೆ. ಅದರಂತೆಯೇ, ನಿಧಿ ಈ ವಿಷಯವನ್ನು ಅಕ್ಕ ನಿತ್ಯಾಗೆ ಹೇಳಲು ಬಂದಿದ್ದಾಳೆ.

26
ಕರ್ಣನ ಮೇಲೆ ನಿತ್ಯಾಗೆ ಲವ್​

ಆದರೆ, ಅದೇ ವೇಳೆ ನಿತ್ಯಾ ಕೂಡ ನನಗೆ ಒಂದು ವಿಷ್ಯ ನಿನ್ನ ಬಳಿ ಮಾತನಾಡಬೇಕು ಎಂದಿದ್ದಾಳೆ. ನೀನು ಮೊದಲು ಹೇಳು ಎಂದಾಗ ನಿತ್ಯಾ ತನ್ನ ಜೀವನದಲ್ಲಿ ಒಬ್ಬರ ಪ್ರವೇಶ ಆಗಿದೆ ಎನ್ನುತ್ತಾಳೆ. ಇದನ್ನು ಕೇಳಿ ನಿಧಿಗೆ ಸಿಕ್ಕಾಪಟ್ಟೆ ಖುಷಿಯಾಗಿ ಯಾರದು ಎಂದು ಪ್ರಶ್ನಿಸುತ್ತಾಳೆ.

36
ನಿಧಿಗೆ ಶಾಕ್​

ಆಗ ನಿತ್ಯಾ ತೆಗೆದುಕೊಂಡಿದ್ದು ಕರ್ಣನ ಹೆಸರನ್ನು! ಇದನ್ನು ಕೇಳಿ ನಿಧಿಗೆ ಶಾಕ್ ಆಗುತ್ತದೆ. ನಿತ್ಯಾ ತಾನು ಕರ್ಣನನ್ನು ತುಂಬಾ ಪ್ರೀತಿಸ್ತಾ ಇದ್ದೇನೆ. ಅವರ ಗುಣ ನನಗೆ ಇಷ್ಟವಾಯಿತು. ನಾನು ಅವರನ್ನು ಪ್ರೀತಿಸ್ತಾ ಅವರಿಗೆ ಮೋಸ ಮಾಡುತ್ತಿದ್ದೆನೋ ಎಂದು ಎನ್ನಿಸುವುದೂ ಉಂಟು. ಆದರೆ ಇದರಲ್ಲಿ ತಪ್ಪೇನಿಲ್ಲ ಎಂದೂ ಅನ್ನಿಸುತ್ತಿದೆ ಎನ್ನುತ್ತಾಳೆ.

46
ತ್ಯಾಗಕ್ಕೆ ರೆಡಿಯಾದ ನಿಧಿ

ಇದನ್ನು ಕೇಳಿ ನಿಧಿ ಕುಸಿದು ಹೋಗುತ್ತಾಳೆ. ತಾನು ಹೇಳಲು ಬಂದಿರುವ ವಿಷಯವನ್ನು ಅಕ್ಕನಿಗೆ ಅವಳು ಹೇಳುವುದೇ ಇಲ್ಲ. ಸದಾ ಅಕ್ಕನ ಶ್ರೇಯಸ್ಸನ್ನೇ ಬಯಸುವ ಆಕೆ ಅಕ್ಕನಿಗಾಗಿ ಕರ್ಣನನ್ನು ಬಿಟ್ಟುಕೊಡಲು ರೆಡಿಯಾಗಿದ್ದಾಳೆ.

56
ನಿಧಿ-ಅರ್ಜುನ್ ಮದುವೆ

ಇದಾಗಲೇ ಕರ್ಣ ಸೀರಿಯಲ್​ ಪ್ರೊಮೋದಲ್ಲಿ ನಿಧಿ ಮತ್ತು ಅರ್ಜುನ್​ ಮದುವೆ ಎಂಬಂತೆ ತೋರಿಸಲಾಗಿದೆ. ತಾಳಿ ಕಟ್ಟುವ ಸಮಯದಲ್ಲಿ, ನಿತ್ಯಾ ಅಲ್ಲಿಗೆ ಬಂದು ಕರ್ಣ ಮತ್ತು ನಿಧಿ ಪ್ರೀತಿಸ್ತಾ ಇರುವ ವಿಷಯ ತಿಳಿಸುತ್ತಾಳೆ. ತನ್ನ ತಾಳಿಯನ್ನು ಕಿತ್ತು ಹಾಕುವ ಆಕೆ, ತಮ್ಮ ಮದುವೆಯೇ ಆಗಿಲ್ಲ. ಇದು ತೇಜಸ್​ ಮಗು ಎನ್ನುತ್ತಾಳೆ.

66
ಇನ್ನೇನಿದೆ ಟ್ವಿಸ್ಟ್​?

ಇದರ ಪ್ರೊಮೋ ಇದಾಗಲೇ ವಾಹಿನಿ ಬಿಡುಗಡೆ ಮಾಡಿದೆ. ಹೀಗೇನಾದರೂ ಆದರೆ, ಸೀರಿಯಲ್​ ಮುಗಿದೇ ಬಿಡುತ್ತದೆ. ಈಗಿನ ಪ್ರೊಮೋದಲ್ಲಿ ಸದ್ಯ ನಿತ್ಯಾ ತನ್ನ ಪ್ರೀತಿಯನ್ನು ನಿಧಿ ಎದುರು ಹೇಳಿಕೊಂಡಿದ್ದಾಳೆ. ಹಾಗಿದ್ದರೆ ಮದುವೆಯ ಪ್ರೊಮೋ ತೋರಿಸಿದ್ದು ಅದು ಕನಸಾ ಅಥವಾ ಸೀರಿಯಲ್​ನಲ್ಲಿ ಇನ್ನೇನು ಟ್ವಿಸ್ಟ್​ ಇದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories