ಚಕ್ಕಂದ ವಿಡಿಯೋ ಹಾಕ್ತಾನಂತೆ ಬೋ***; ಹಣದ ಹಿಂದೆ ಬಿದ್ದ ವರುಣ್ ಆರಾಧ್ಯ ಹಿಗ್ಗಾಮುಗ್ಗಾ ಟ್ರೋಲ್!

First Published | Sep 11, 2024, 5:10 PM IST

ಮತ್ತೆ ಶುರುವಾಯ್ತು ವರುಣ್ ಆರಾಧ್ಯ ಕುಚೇಷ್ಟೆ. ಹಣದ ಹಿಂದೆ ಬಿದ್ದ ಹೀರೋ ಈಗ ಮತ್ತೆ ಝೀರೋ......... 
 

ಯೂಟ್ಯೂಬ್ ಸ್ಟಾರ್, ರೀಲ್ಸ್ ಕಿಂಗ್, ಕಿರುತೆರೆ ನಟ ವರುಣ್ ಆರಾಧ್ಯ ಮತ್ತೆ ಟ್ರೋಲಿಗೆರಿಗೆ ಆಹಾರವಾಗಿದ್ದಾರೆ. ಕೆಲಸವಿಲ್ಲದೆ ಹಣ ಮಾಡುವುದು ಇವನಿಂತ ಕಲಿಯಬೇಕು ಎಂದು ಟ್ರೋಲ್ ಮಾಡುತ್ತಿದ್ದಾರೆ. 

ಹಲವು ವರ್ಷಗಳಿಂದ ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ದುಬಾರಿ ವಸ್ತುಗಳನ್ನು ಕೊಡಿಸಿ ಮದುವೆ ಮಟ್ಟಕ್ಕೂ ಹೋಗಿದ್ದರು. 

Tap to resize

ಹಣ ಆಸೆಗೆ ವರುಣ್ ಆರಾಧ್ಯ ವರ್ಷಾ ಕಾವೇರಿ ಜೊತೆ ಬ್ರೇಕಪ್ ಮಾಡಿಕೊಂಡು ಶ್ರೀಮಂತ ಹುಡುಗಿ ಹಿಂದೆ ಬಿದ್ದಿದ್ದಾನೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿತ್ತು. 

ಅಲ್ಲಿಂದ ದೊಡ್ಡ ಮಟ್ಟದಲ್ಲಿ ಇವರಿಬ್ಬರ ಬ್ರೇಕಪ್‌ ಸುದ್ದಿ ಆಗಿತ್ತು. ಇಬ್ಬರು ಅವರವರ ಪಾಡಿಗೆ ಜೀವನ ನಡೆಸುತ್ತಿದ್ದಾರೆ ಅಂದುಕೊಂಡರೆ ವರುಣ್ ಆರಾಧ್ಯ ಮತ್ತೆ ಕುಚೇಷ್ಟೆ ಶುರು ಮಾಡಿದ್ದಾರಂತೆ.

ಕೆಲವು ದಿನಗಳಿಂದೆ ವರ್ಷ ಕಾವೇರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ವರುಣ್ ಆರಾಧ್ಯ ಕೂಡ ತಮ್ಮ ಸಾಧನೆಗೆ ನೆಗೆಟಿವ್ ಕಾಮೆಂಟ್ ಅಡ್ಡ ಬರುವುದಿಲ್ಲ ಎನ್ನುವಂತೆ ಪೋಸ್ಟ್ ಹಾಕುತ್ತಿದ್ದಾರೆ. 

ಆದರೆ ಅಸಲಿ ಸತ್ಯ ಬೇರೆನೇ ಇದೆ. ಸೀರಿಯಲ್ ನಂತರ ವರುಣ್ ಆರಾಧ್ಯ ದುಡಿಮೆ ನಿಂತುಬಿಟ್ಟಿದೆ. ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತಾಯಿ ಮನೆ ನಡೆಸುತ್ತಿದ್ದರೂ ವರುಣ್ ಶೋಕಿ ಕಡಿಮೆ ಆಗಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು. 

 ಈಗ ದುಡಿಮೆ ಇಲ್ಲದ ಕಾರಣ ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ  ಹಾಕುತ್ತಿದ್ದಾನೆ ಎಂದು ಎಲ್ಲೆಡೆ ನೆಗೆಟಿವ್ ಆಗಿ ಟ್ರೋಲ್ ಆಗುತ್ತಿದ್ದಾರೆ. 

ದುಡ್ಡಿರುವ ಹುಡುಗಿಯರ ಜೊತೆ ಚಕ್ಕಂದ ಆಡಿ ಬಿಟ್ಟು ಹೋಗುವಂತೆ ಮಾಡುವುದು ಆಮೇಲೆ ಮತ್ತೆ ಅವರಿಗೆ ಮೆಸೇಜ್ ಅಥವಾ ಕಾಲ್ ಮಾಡಿ ಬೆಸರಿ ಹಾಕುವ ಕೆಲಸ ಮಾಡುತ್ತಿದ್ದಾನೆ ***** ಎಂದು ಕೆಟ್ಟ ಪದಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. 

ವರುಣ್ ಆರಾಧ್ಯ ಇಷ್ಟು ದಿನ ಕಟ್ಟಿಕೊಂಡಿದ್ದ ಇಮೇಜ್‌ ಕೇವಲ ಒಂದೆರಡು ಟ್ರೋಲ್ ಪೇಜ್‌ಗಳಿಂದ ಡಮಾರ್ ಆಗಿದೆ. ಅಷ್ಟೇ ಅಲ್ಲ ವರುಣ್ ಆರಾಧ್ಯ ಫಾಲೋವರ್ಸ್‌ ಕಡಿಮೆ ಮಾಡಬೇಕು ಎಂದು ಕೆಲವರು ಪಣತೊಟ್ಟಿದ್ದಾರೆ. 

Latest Videos

click me!