ರೇಷ್ಮಾ ನಾಟಕಕ್ಕೆ ತೆರೆ ಎಳೆದ ಆರಾಧನಾ… ಅಂತರಪಟ ಸೀರಿಯಲ್ ನೋಡಿದ್ದಕ್ಕೂ ಸಾರ್ಥಕ ಎಂದ ವೀಕ್ಷಕರು

First Published | Sep 11, 2024, 1:46 PM IST

ಅಂತರಪಟ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ಟ್ವಿಸ್ಟ್ ಸಿಕ್ಕಿದ್ದು, ರೇಷ್ಮಾಳನ್ನು ಹಸೆಮಣೆಯವರೆಗೂ ಕರೆದುಕೊಂಡು ಬಂದ ಆರಾಧನಾ, ಆಕೆಯ ನಾಟಕಕ್ಕೆ ತೆರೆ ಎಳೆದಿದ್ದಾರೆ. 
 

ಅಂತರಪಟ (Antarapata) ಧಾರಾವಾಹಿಯಲ್ಲಿ ಕಳೆದು ಒಂದು ತಿಂಗಳಿನಿಂದ ಬರೀ ಗೋಳಿನ ಕಥೆಯೇ ಪ್ರಸಾರವಾಗುತ್ತಿತ್ತು. ಧೈರ್ಯವಂತೆಯಾಗಿದ್ದ ಆರಾಧನಾ ಯಾವಾಗ್ಲೂ ಅಳುಮುಂಜಿ ತರ ಅಳುತ್ತಾ, ಗೋಳಾಡುತ್ತಾ, ಶತ್ರುಗಳ ಎದುರು ಸೋಲನ್ನು ಅನುಭವಿಸುತ್ತಾ ಬರೋದೇ ಪ್ರಸಾರವಾಗುತ್ತಿತ್ತು. 
 

ಪ್ರತಿದಿನ ಗೋಳಿನ ಕಥೆಯನ್ನು ನೋಡಿ ನೋಡಿ ವೀಕ್ಷಕರು, ಒಂದು ಸಲ ಈ ಸೀರಿಯಲ್ ನಿಲ್ಲಿಸಿ, ಇಲ್ಲಾಂದ್ರೆ ಕಥೆಯನ್ನು ಚೆಂಜ್ ಮಾಡಿ, ಆರಾಧನಾ ಮತ್ತು ಸುಶಾಂತ್ ಮತ್ತೆ ಒಂದಾಗುವಂತೆ ಮಾಡಿ, ಇಬ್ಬರ ಜಗಳ, ವ್ಯಥೆ ನೋಡಿ ನೋಡಿ ಸಾಕಾಗಿದೆ ಎನ್ನುತ್ತಿದ್ದರು. ಇದೀಗ ಕಥೆಯಲ್ಲಿ ಮಹಾ ತಿರುವು ದೊರೆತಿದ್ದು, ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. 
 

Tap to resize

ತಾನು ಸುಶಾಂತ್ ಮಗುವಿಗೆ ತಾಯಿಯಾಗ್ತಿದ್ದೇನೆ ಎನ್ನುತ್ತಾ ಮನೆಗೆ ಬಂದಿರುವ ರೇಷ್ಮಾಳನ್ನು ಆರಾಧನಾ ಸ್ವೀಕರಿಸಿ, ಮನೆಯಲ್ಲಿ ಇರೋದಕ್ಕೆ ಜಾಗ ಕೊಟ್ಟು, ಆಕೆಗೆ ಬೇಕಾದ ಎಲ್ಲಾ ಆರೈಕೆಗಳನ್ನು ಮಾಡುತ್ತಿದ್ದಳು, ಸುಶಾಂತ್, ಇದೆಲ್ಲಾ ಸುಳ್ಳು ರೇಷ್ಮಾಳನ್ನು ನಂಬಬೇಡ ಅಂದ್ರೂ ಆರಾಧನಾ ಅವನ ಮಾತೇ ಕೇಳಿರಲಿಲ್ಲ. 
 

ಕೊನೆಗೆ ರೇಷ್ಮಾಗೆ ಡಿಎನ್’ಎ ಟೆಸ್ಟ್ ಕೂಡ ಮಾಡಲಾಯಿತು, ಆವಾಗ್ಲೂ ಅಷ್ಟೇ ರೇಷ್ಮಾ ಮತ್ತು ಅಮಲಾ ಕುತಂತ್ರದಿಂದಾಗಿ ಟೆಸ್ಟ್ ರಿಪೋರ್ಟ್ ನಲ್ಲಿ ಸುಶಾಂತ್, ರೇಷ್ಮಾ ಮಗುವಿನ ತಂದೆ ಅನ್ನೋದನ್ನು ಸಹ ಸಾಬೀತು ಪಡಿಸಿದ್ದರು. 
 

ಕೊನೆಗೆ ಆರಾಧನಾ ಸೋತು ತಾನು ಮನೆ ಬಿಟ್ಟು ಹೋಗೋದಾಗಿ ತಿಳಿಸಿ, ಅದಕ್ಕೂ ಮುನ್ನ ತನ್ನದೊಂದು ಕೊನೆಯ ಆಸೆ ಎಂಬಂತೆ, ರೇಷ್ಮಾ ಮತ್ತು ಸುಶಾಂತ್ ಮದುವೆ ಮಾಡಲು ನಿರ್ಧರಿಸಿದ್ದಳು. ಅದಕ್ಕಾಗಿ ಮನೆಯವರನ್ನು ಎದುರು ಹಾಕಿದಳು. ಸುಶಾಂತ್ ತಾನು ಯಾವತ್ತೂ ರೇಷ್ಮಾ ಮದುವೆ ಆಗೋದೆ ಇಲ್ಲ ಎಂದು ಹೇಳಿದ್ರೂ ಪಟ್ಟು ಬಿಡದ ಆರಾಧನಾ ಇಬ್ಬರ ಮದುವೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ತಾಳೆ. 
 

ಇತ್ತ ಕಡೆ ಮದುವೆ ದಿನ ಎಲ್ಲಾ ಶಾಸ್ತ್ರಗಳನ್ನು ಮಾಡಿ, ಇನ್ನೇನು ರಾಜ್ ರೇಷ್ಮಾಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ರಾಮಾಚಾರಿ ಎಂಟ್ರಿಯಾಗಿ ಎಲ್ಲಾ ಸತ್ಯ ಬಿಚ್ಚಿ ಕೊಳ್ಳುತ್ತೆ. ರೇಷ್ಮಾ ಹೊಟ್ಟೆಲಿ ಬೆಳಿತಿರೋದು ನಂದ ಮಗು ಅನ್ನೋದು, ರೇಷ್ಮಾ ಈ ಮೊದಲು ಕೊಟ್ಟಿದ್ದು ಸುಳ್ಳು ರಿಪೋರ್ಟ್ ಅನ್ನೋದೆಲ್ಲಾ ಸಾಬೀತಾಗುತ್ತೆ. ಇದನ್ನ ನೋಡಿ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. 
 

ಸೂಪರ್ ಸೂಪರ್ ಆರಾಧನ ಕೊನೆಗು ಗೆದ್ದು ಸಾಧಿಸಿಬಿಟ್ಟೇ, ಆರಾಧನ ಅಭಿಮಾನಿಗಳು ಖುಷಿಪಡೋ ಸಮಯ ಬಂದಾಯ್ತು. ಅಬ್ಬಾ ಎಂತ ಟ್ವಿಸ್ಟ್ ಕೊಟ್ಟ ಆರಾಧನಾ, ಇಷ್ಟು ದಿನ ಸೀರಿಯಲ್ ನೋಡಿದ್ದಕ್ಕೂ ಸಾರ್ಥಕ ಆಯ್ತು. ಸೂಪರ್ ಎಂಡಿಂಗ್, ಸಖತ್ತಾಗಿದೆ, ಎಕ್ಸಲೆಂಟ್ ಅಂತೆಲ್ಲಾ ಜನರು ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. 
 

Latest Videos

click me!