ಮತ್ತೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕಾರ್ತಿಕ್ ಮಹೇಶ್… ಈ ಬಾರಿ ಸ್ಪರ್ಧಿಯಾಗಿ ಅಲ್ಲ, ನಿರೂಪಕನಾಗಿ ಎಂಟ್ರಿ

Published : Sep 11, 2024, 11:40 AM ISTUpdated : Sep 11, 2024, 11:46 AM IST

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಇದೀಗ ಹೊಸ ಜವಾಬ್ಧಾರಿಯನ್ನು ಹೊತ್ತಿದ್ದು, ಮತ್ತೆ ಕನ್ನಡ ಕಿರುತೆರೆಗೆ ನಿರೂಪಕನಾಗಿ ಎಂಟ್ರಿ ಕೊಟ್ತಿದ್ದಾರೆ.   

PREV
17
ಮತ್ತೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕಾರ್ತಿಕ್ ಮಹೇಶ್… ಈ ಬಾರಿ ಸ್ಪರ್ಧಿಯಾಗಿ ಅಲ್ಲ, ನಿರೂಪಕನಾಗಿ ಎಂಟ್ರಿ

ಬಿಗ್ ಬಾಸ್ ಸೀಸನ್ 10ರ (Bigg Boss Season 10) ವಿನ್ನರ್ ಆಗಿ, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರ್ತಿಕ್ ಮಹೇಶ್ ಅದರ ಜೊತೆ ಜೊತೆಗೆ ಮತ್ತೊಂದು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಅದು ಸ್ಪರ್ಧಿಯಾಗಿ ಅಲ್ಲ, ಆದರೆ ನಿರೂಪಕನಾಗಿ. 
 

27

ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ಕಾರ್ತಿಕ್ ಮಹೇಶ್ (Karthik Mahesh), ಬಿಬಿಕೆ10 ಗೆ ಬರೋದಕ್ಕೂ ಮೊದಲು ಅಂತರಪಟ ಧಾರವಾಹಿಯಲ್ಲಿ ನಾಯಕಿ ಆರಾಧನಾ ಗೆಳೆಯನಾಗಿ ನಟಿಸಿದ್ದರು. ಅಲ್ಲಿ ಅವರ ಪಾತ್ರದ ಅಂತ್ಯವಾದ ಬಳಿಕ ಬಿಬಿಕೆ 10ರಲ್ಲಿ ಭಾಗವಹಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೀಗ ಸಿನಿಮಾಗಳಲ್ಲೂ ನಟಿಸುತ್ತಿರುವ ಕಾರ್ತಿಕ್, ಅವುಗಳ ಮಧ್ಯೆ ಹೊಸ ರಿಯಾಲಿಟಿ ಶೋಗೆ ನಿರೂಪಕರಾಗಲಿದ್ದಾರೆ.
 

37

ಹೌದು, ಕಾರ್ತಿಕ್ ಮಹೇಶ್ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸೆಲೆಬ್ರಿಟಿಗಳೇ ತುಂಬಿರುವಂತಹ, ಅದರಲ್ಲೂ ಬಿಗ್ ಬಾಸ್ ಸೀಸನ್ 10ರ ಕಂಟೆಸ್ಟ್ ಗಳೇ ತುಂಬಿರುವ ಸುವರ್ಣ ಸೆಲೆಬ್ರಿಟಿ ಲೀಗ್ (Suvarna Celebrity League) ರಿಯಾಲಿಟಿ ಶೋವನ್ನು ಕಾರ್ತಿಕ್ ಮಹೇಶ್ ನಿರ್ವಹಿಸಲಿದ್ದಾರೆ. ಅಂದರೆ ಆಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 
 

47

'ಸುವರ್ಣ ಸೆಲೆಬ್ರಿಟಿ ಲೀಗ್' ರಿಯಾಲಿಟಿ ಶೋ ಇದೇ ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ. ಕಳೆದ ಒಂದು ತಿಂಗಳಿನಿಂದ ಈ ರಿಯಾಲಿಟಿ ಶೋ ಪ್ರೋಮೋ ವಿಭಿನ್ನ ರೀತಿಯಲ್ಲಿ ಪ್ರಸಾರವಾಗುತ್ತಿದ್ದು, ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯಾವ ರೀತಿಯ ಶೋ ಇದಾಗಲಿದೆ? ಇಲ್ಲೂ ಜಿದ್ದಾ ಜಿದ್ದಿ ನಡೆಯುತ್ತಾ ಎನ್ನುವ ಕುತೂಹಲ ಶುರುವಾಗಿದೆ. 
 

57

ಸೆಲೆಬ್ರಿಟಿ ಲೀಗ್ ನಲ್ಲಿ ಎರಡು ತಂಡಗಳಿದ್ದು, ವಿನಯ್ ಗೌಡ ಹಾಗೂ ಚಂದು ಗೌಡ ಎರಡು ತಂಡವನ್ನು ಲೀಡ್ ಮಾಡಲಿದ್ದಾರೆ.  ತನಿಷಾ ಕುಪ್ಪಂಡ, ನಮ್ರತಾ ಗೌಡ, ಬುಲೆಟ್ ರಕ್ಷಕ್, ಪ್ರಿಯಾಂಕಾ ಶಿವಣ್ಣ, ಆಸೆ ಧಾರಾವಾಹಿ ನಟರಾದ ಪ್ರಿಯಾಂಕಾ, ನಿನಾದ್ ಹರಿತ್ಸ, ಗೌರಿಶಂಕರ ಧಾರಾವಾಹಿಯ ಅಭಿಜ್ಞಾ ಭಟ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
 

67

ಪ್ರೊಮೋದಲ್ಲಿ ಎರಡು ತಂಡದ ಎದುರಾಳಿಗಳು ಪವರ್ ಫುಲ್ ಡೈಲಾಗ್ ಹೇಳುವ ಮೂಲಕ ಒಬ್ಬರಿಗೊಬ್ಬರು ಫೈಟ್ ಕೊಡುತ್ತಿದ್ದಾರೆ. ಒಂದು ತಂಡದ ಲೀಡರ್ ಆಗಿರುವ ವಿನಯ್ (VInay Gowda) ಎದುರಾಳಿಗಳ ಹುಟ್ಟಡಗಿಸೋಕೆ ಆನೆ ಬರ್ತಿದೆ, ತನ್ನ ದಂಡಿನ ಜತೆಗೆ ಹುಷಾರು ಎಂದರೆ, ಆಟ ಯಾವುದೇ ಇರಲಿ, ಎದುರಾಳಿ ಯಾರೇ ಬರಲಿ ಅಖಾಡಕ್ಕೆ ನಮ್ಮ ಟೀಮ್‌ ಇಳಿದ ಮೇಲೆ ಗೆಲುವು ನಮ್‌ ಟೀಮ್‌ನದ್ದೆ ಎಂದು ಚಂದು ಗೌಡ (Chandu Gowda)  ಖಡಕ್ ಡೈಲಾಗ್ ಹೇಳಿದ್ದಾರೆ. 
 

77

ಇನ್ನು ಎರಡು ಟೀಮ್ ಗಳನ್ನು ಮುನ್ನಡೆಸುವ ಲೀಡರ್ ಆಗಿ, ನಿರೂಪಕನಾಗಿ ಎಂಟ್ರಿ ಕೊಟ್ಟಿರುವ ಕಾರ್ತಿಕ್ ಮಹೇಶ್, ಈ ದುನಿಯಾದಲ್ಲಿ ಒಟ್ಟು ಮೂರು ತರ ಜನ ಇರ್ತಾರೆ, ಒಬ್ರು ರೂಲ್ಸ್‌ನ ಫಾಲೋ ಮಾಡೋರು, ಇನ್ನೊಬ್ಬರು ರೂಲ್ಸ್‌ನ ಬ್ರೇಕ್‌ ಮಾಡೋರು. ಮೂರನೆಯವನು ನಾನು ರೂಲ್ಸ್‌ನ ಸೆಟ್‌ ಮಾಡೋನು ಎಂದಿದ್ದಾರೆ. ಇದೆಲ್ಲವನ್ನೂ ನೋಡಿ, ವೀಕ್ಷಕರಲ್ಲಿ ಈ ರಿಯಾಲಿಟಿ ಶೋ ಹೇಗಿರಬಹುದು ಎನ್ನುವ ಕುತೂಹಲ ತುಂಬಾನೆ ಹೆಚ್ಚಾಗಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories