ವರ್ತೂರು ಸಂತೋಷ್​ ಘೋಷಿಸಿರೋ 10 ಲಕ್ಷ ಬಹುಮಾನ ಪಡೆಯುವ Bigg Boss 12 ಸ್ಪರ್ಧಿ ಯಾರು? ಷರತ್ತೇನು?

Published : Nov 25, 2025, 12:16 PM IST

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ಮುಂಬರುವ ಬಿಗ್​ಬಾಸ್​ 12ರ ಎರಡನೇ ರನ್ನರ್​ ಅಪ್​ಗೆ 10 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಈ ಹಣವನ್ನು ಬಿಗ್​ಬಾಸ್​ ವೇದಿಕೆಯಲ್ಲೇ ನೀಡಲು ಅವಕಾಶ ನೀಡಬೇಕೆಂಬ ಷರತ್ತು ವಿಧಿಸಿದ್ದು, ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

PREV
17
ಬಿಗ್​ಬಾಸ್​ 10ರ ವರ್ತೂರು ಸಂತೋಷ್‌

ಬಿಗ್​ಬಾಸ್​ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್​ ಒಬ್ಬರು. ನಾಲ್ಕನೆಯ ರನ್ನರ್​ ಅಪ್​ ಆಗಿ ಹೊರಬಂದವರು ಇವರು. ಆದರೆ ವರ್ತೂರು ಧರಿಸಿದ್ದ ಹುಲಿಯ ಉರುಗಿನ ಪೆಂಡೆಂಟ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಬಿಗ್​ಬಾಸ್​ 10ರ ಟಿಆರ್​ಪಿ ಕೂಡ ಹೆಚ್ಚಿಸಿದ್ದವರಲ್ಲಿ ಇವರೂ ಒಬ್ಬರಾಗಿದ್ದರು! ಕಾನೂನು ಮೀರಿ ಹುಲಿಯ ಉಗುರು ಧರಿಸಿದ್ದು ಗಲಾಟೆಗೆ ಕಾರಣವಾಗಿ ಕೊನೆಗೆ ಏನೇನೋ ತಿರುವುಗಳನ್ನೂ ಪಡೆದುಕೊಂಡು ಜೈಲಿಗೂ ಹೋಗಿ ಬಂದರು ವರ್ತೂರು.

27
ವೈಯಕ್ತಿಕವಾಗಿಯೂ ಚರ್ಚೆ

ವರ್ತೂರು ಫೇಮಸ್​ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್​ ಇರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.

37
ವಿವಾದದಲ್ಲಿ ವರ್ತೂರು

ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್​ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.

47
ಬಿಗ್‌ಬಾಸ್‌ 12ರ ರನ್ನರ್‌ ಅಪ್‌ಗೆ ಗಿಫ್ಟ್‌

ಈ ಬಾರಿಯ ಬಿಗ್​ಬಾಸ್​ನ ಅರ್ಥಾತ್​ ಬಿಗ್​ಬಾಸ್​ 12ನೇ ಸಂಚಿಕೆಯ ರನ್ನರ್​ ಅಪ್​ಗೆ 10 ಲಕ್ಷ ಘೋಷಣೆಯನ್ನು ಇದಾಗಲೇ ವರ್ತೂರು ಸಂತೋಷ್​ ಮಾಡಿದ್ದಾರೆ. ಆದರೆ ಇದೀಗ ಅದಕ್ಕೊಂದು ಷರತ್ತನ್ನೂ ವಿಧಿಸಿದ್ದಾರೆ. ಅದೇನೆಂದರೆ, 2ನೇ ರನ್ನರ್​ ಅಪ್​ಗೆ ತಾವು ಈ ಬಹುಮಾನವನ್ನು ಕೊಡುವುದಾಗಿ ವರ್ತೂರು ಹೇಳಿದ್ದಾರೆ.

57
ವರ್ತೂರು ಹೇಳಿದ್ದೇನು?

ಯಶಸ್​ ಟಾಕೀಸ್​ ಚಾನೆಲ್​ನಲ್ಲಿ ಮಾತನಾಡಿರುವ ವರ್ತೂರು ಸಂತೋಷ್​ (Bigg Boss varthur santhosh), ಕೊನೆಯ ಕ್ಷಣದವರೆಗೆ ಬಂದು, ಗೆಲುವು ಸಾಧಿಸಿಲ್ಲ ಎಂದರೆ ತುಂಬಾ ನೋವಾಗುತ್ತದೆ. ಆದ್ದರಿಂದ 2ನೇ ರನ್ನರ್​ ಅಪ್​ಗೆ ಹಣವನ್ನು ನೀಡಲು ಆಸೆ ಪಟ್ಟಿದ್ದೇನೆ ಎಂದಿದ್ದಾರೆ.

67
ಷರತ್ತೇನು?

ಆದರೆ ಇದಕ್ಕೊಂದು ಷರತ್ತನ್ನೂ ಅವರು ವಿಧಿಸಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ ವೇದಿಕೆಯ ಮೇಲೆ ನನ್ನನ್ನು ಕರೆಯಬೇಕು. ಅಲ್ಲಿಯೇ 2ನೇ ರನ್ನರ್​ ಅಪ್​ಗೆ ಹಣವನ್ನು ನೀಡುತ್ತೇನೆ. ಒಂದು ವೇಳೆ ಬಿಗ್​ಬಾಸ್​​ ವೇದಿಕೆ ಮೇಲೆ ನನ್ನನ್ನು ಕರೆದಿಲ್ಲ ಎಂತಾದರೆ, ರನ್ನರ್​ ಅಪ್​ಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ ಎನ್ನುವ ಮೂಲಕ, ವೇದಿಕೆಯ ಮೇಲೆ ಕರೆದರಷ್ಟೇ ಹಣವನ್ನು ಕೊಡುವುದಾಗಿ ಹೇಳಿದ್ದಾರೆ.

77
ನೆಟ್ಟಿಗರ ಅಸಮಾಧಾನ

Bigg Bossನಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಸಾಕಷ್ಟು ಹಣವನ್ನು ನೀಡುತ್ತಾರೆ, ಜೊತೆಗೆ ಅವರಿಗೆ ಹಲವು ಸೌಲಭ್ಯಗಳೂ ಸಿಗುತ್ತವೆ. ಹಾಗಿರುವಾಗ ಪ್ರಚಾರಕ್ಕಾಗಿ ಹೀಗೆ ಮಾಡುವ ಬದಲು ಅದೇ 10 ಲಕ್ಷ ರೂಪಾಯಿಗಳನ್ನು ಬಡವರ ಮಕ್ಕಳ ಶಿಕ್ಷಣಕ್ಕೋ ಅಥವಾ ಇನ್ನಾವುದಕ್ಕಾದರೂ ಕೊಟ್ಟು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಹಲವು ಕಮೆಂಟಿಗರು ತಿಳಿಸಿದ್ದಾರೆ. ಇಂಥ ಕೆಲಸ ಮಾಡಿದರೆ ಪುಣ್ಯ ಬರುತ್ತದೆ, ಅದನ್ನು ಬಿಟ್ಟು ಹಣ ಗಳಿಸುವವರಿಗೇ ಮತ್ತೆ ಹಣ ಕೊಡುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

Read more Photos on
click me!

Recommended Stories