Published : May 06, 2025, 01:48 PM ISTUpdated : May 07, 2025, 12:41 PM IST
ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ವಾಣಿ ಚೆನ್ನರಾಯಪಟ್ಟಣ ಅವರು ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಕಡುಬಡತನದ ಹಿನ್ನೆಲೆಯಿಂದ ಬಂದ ವಾಣಿ, ಕಾಮಿಡಿ ಕಿಲಾಡಿಗಳಲ್ಲಿ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡರು.
ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ವಾಣಿ ಚೆನ್ನರಾಯಪಟ್ಟಣ ಅವರ ನಟನೆ ಬಗ್ಗೆ ನಿಮಗೆಲ್ಲರಿಗೂ ಗೊತ್ತು. ಕಾಮಿಡಿ ಕಿಲಾಡಿ ವೇದಿಕೆ ಮೇಲೆ ನಟಿ ಪ್ರೇಮಾ ಅವರ ನಟನೆಯನ್ನು ಅಚ್ಚು ಹೊಡೆದಂತೆ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್ನು ನೋಡಲು ವಾಣಿ ಅವರ ದೇಹಸಿರಿಯೂ ಕೂಡ ನಟಿ ಪ್ರೇಮಾ ಅವರಂತೆಯೇ ಇತ್ತು. ತುಂಬಾ ಹೋಲಿಕೆ ಆಗುತ್ತಿತ್ತು.
210
ಕಾಮಿಡಿ ವೇದಿಕೆ ಮೇಲೆ ಸುರ ಸುಂದರಿಯಂತೆ ಕಾಣುವ ವಾಣಿ ಅವರು ಇದೀಗ ನ್ಯಾಚುರಲ್ ಬ್ಯೂಟಿ ಆಗಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಡ್ರೆಸ್, ಬಿಡಿಸಿಟ್ಟ ತಲೆಗೂದಲು, ತಲೆಯ ಮೇಲೊಂದು ಕನ್ನಡಕ, ಮುಖದಲ್ಲಿ ಮಂದಸ್ಮಿತ ನಗು ಬೀರಿದ್ದಾಳೆ.
310
ಇನ್ನು ಇದಕ್ಕೆ ನೆಟ್ಟಿಗರೊಬ್ಬರು 'ವಾಣಿ ಮೇಡಂ ನಿಮ್ಮ ಕಲೆಗೆ ಹೃದಯ ತುಂಬಿದ ನಮಸ್ಕಾರ. ಶಾರದೆ ಎಲ್ಲರಿಗೂ ಒಲಿಯುವುದಿಲ್ಲ. ನಗು ಮುಖದ ಬಡವರ ರೈತರ ಕಷ್ಟ ಜೀವನ ನಡೆಸುವ ಹೆಣ್ಣು ಮಗಳು ಇನ್ನೂ ಹೆಚ್ಚಿಗೆ ಬೆಳೆಯ ಬೇಕು' ಎಂದು ಕಾಮೆಂಟ್ ಮಾಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 2ರಲ್ಲಿ ಫೈನಲಿಸ್ಟ್ 7 ಜನರ ಪೈಕಿ ವಾಣಿಯೂ ಒಬ್ಬರಾಗಿದ್ದರು. ಆದರೆ, ಈ ಸೀಸನ್‌ನಲ್ಲಿ ಮಡೆನೂರು ಮನು ಟ್ರೋಫಿ ವಿಜೇತರಾದರು. ಅಪ್ಪಣ್ಣ ಮತ್ತು ಸೂರಜ್ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡರು. ನಂತರ ಕುಂದಾಪುರ ಸೂರ್ಯ 3ನೇ ಸ್ಥಾನ ಗಳಿಸಿದ್ದರು. ಈ ಫಿನಾಲೆಯಲ್ಲಿ ವಾಣಿ ಪ್ರದರ್ಶನವೂ ಉತ್ತಮವಾಗಿತ್ತು.
510
ವಾಣಿ ಅವರು ತೀವ್ರ ಕಡುಬಡತನದಿಂದ ಬೆಳೆದುಬಂದ ಪ್ರತಿಭೆ ಆಗಿದ್ದಾರೆ. ಜೀವನದ ಪ್ರತಿ ಹಂತದಲ್ಲಿಯೂ ಕಷ್ಟವನ್ನು ಅನುಭವಿಸಿಕೊಂಡು ಬೆಳೆದ ಹುಡುಗಿ, ಅಂತರ್ಗತವಾಗಿ ಪ್ರತಿಭೆಯನ್ನು ಇಟ್ಟುಕೊಂಡು ಸಿನಿಮಾಗಳನ್ನು ಕಾಮಿಡಿ ಕಿಲಾಡಿ ಮೊದಲ ಸೀಸನ್ ನೋಡಿ ತಾನೂ ಏಕೆ ಒಂದು ಕೈ ನೋಡಬಾರದು ಎಂದು ಆಡಿಷನ್‌ಗೆ ಬಂದರು. ಕಾಮಿಡಿ ಕಿಲಾಡಿ ಸೀಸನ್-2ಕ್ಕೆ ಆಯ್ಕೆಯಾಗಿ ಬಂದು ಫೈನಲ್‌ಗೂ ಲಗ್ಗೆಯಿಟ್ಟು ಸೈ ಎನಿಸಿಕೊಂಡಿದ್ದಾರೆ.
610
ಇದಾದ ನಂತರ ವಾಣಿ ಅಬರು ಹಲವು ಕಾಮಿಡಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ತನ್ನ ನಟನೆಯಿಂದ ಜನರನ್ನು ನಗಿಸುತ್ತಿದ್ದರೂ, ಆ ವೇದಿಕೆಯ ಮೇಲಿನ ನಗಿಸುವ ಮುಖದ ಹಿಂದೆ ತುಂಬಾ ಕಷ್ಟವೇ ಅಡಗಿದೆ.
710
ವಾಣಿ ಅವರ ಅಮ್ಮ ಪುಷ್ಪ ಮಾತನಾಡಿ, ನಾವು ಚನ್ನರಾಯುಪಟ್ಟಣದ ಬಳಿ ನಮ್ಮೂರಲ್ಲಿ ಸಣ್ಣ ದನ ಕಟ್ಟುವ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದೆವು. ಅದೆಲ್ಲಾ ಕಷ್ಟ ನೋಡಿ, ಬೆಂಗಳೂರಲ್ಲಿ ಮನೆಗೆಲಸ ಮಾಡಿ ಜೀವನ ಮಾಡೋಣ ಎಂದು ಇಲ್ಲಿಗೆ ಬಂದೆವು ಎಂದು ತಿಳಿಸಿದ್ದರು.
810
ವಾಣಿ ಅವರ ಅಪ್ಪ ಮಾತನಾಡಿ, ನಾನು ಮಾಡುತ್ತಿದ್ದ ಕೆಲಸದಿಂದ ನನ್ನನ್ನು ತೆಗೆದುಹಾಕಿದರು. ಆಗ ನನ್ನ ಹೆಂಡತಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಬಾಡಿಗೆ, ಮನೆ ದಿನಸಿ ಸೇರಿ ಎಲ್ಲವನ್ನೂ ನೋಡಿಕೊಂಡಿದ್ದಾರೆ. ಅವರೇ ನಮ್ಮನೆಗೆ ದೇವತೆ, ಇದೀಗ ಮಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾಳೆ ಎಂದು ತಿಳಸಿದ್ದರು.
910
ಇನ್ನು ಕಾಮಿಡಿ ಕಿಲಾಡಿ ಸೀಸನ್ 2ರ ಫಿನಾಲೆ ವೇದಿಕೆಯಲ್ಲಿ ಮಾತನಾಡಿದ್ದ ವಾಣಿ ಅವರು, ನನ್ನ ತಂದೆ-ತಾಯಿನೇ ಕಷ್ಟಪಟ್ಟು ದುಡಿದು ಸಾಕುತ್ತಿದ್ದರು. ಆಗ ನನಗೆ ಅಪ್ಪ-ಅಮ್ಮನ ಕಷ್ಟದ ಬಗ್ಗೆ ಏನೂ ಗೊತ್ತಾಗುತ್ತಿರಲಿಲ್ಲ ಎಂದು ದುಃಖ ತೋಡಿಕೊಂಡಿದ್ದರು.
1010
ಈಗ ಅವರ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಅಪ್ಪ ಅಮ್ಮನೇ ನನಗೆ ಎಲ್ಲಾ, ನಿಮ್ಮ ಋಣವನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿ ಕಣ್ಣೀರಿಡುವ ಮೂಲಕ ಭಾವುಕ ಕ್ಷಣಕ್ಕೆ ಸಾಕ್ಷಿ ಆಗಿದ್ದರು. ಇದೀಗ ವಾಣಿ ಅವರು ಹಲವು ಧಾರಾವಾಹಿ, ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.