RCB ಗೆಲ್ಲದಿದ್ರೆ ನೀವು ದರಿದ್ರ ಮುಖಗಳು ಎಂದ ನೆಟ್ಟಿಗ; ಎದೆ ಗಟ್ಟಿ ಹಿಡ್ಕೊಂಡು ಮ್ಯಾಚ್‌ ಗೆಲ್ಲಿಸಿದ ಹನುಮಂತ, ಧನರಾಜ್

Published : May 05, 2025, 07:14 PM ISTUpdated : May 06, 2025, 10:07 AM IST

ಬಿಗ್‌ ಬಾಸ್‌ ಖ್ಯಾತಿಯ ಹನುಮಂತ, ಧನರಾಜ್‌ ಆಚಾರ್‌ ಅವರು ಮೆಟ್ರೋ ಹತ್ತಿ ಆರ್‌ಸಿಬಿ ಮ್ಯಾಚ್‌ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಹನುಮಂತ ಅವರು ಮಾಸ್ಕ್‌ ಹಾಕಿಕೊಂಡು ಹೋದರೂ ಕೂಡ, ಕೆಲವರು ಸೆಲ್ಫಿ ಕೇಳಿದ್ದರು.  

PREV
15
RCB ಗೆಲ್ಲದಿದ್ರೆ ನೀವು ದರಿದ್ರ ಮುಖಗಳು ಎಂದ ನೆಟ್ಟಿಗ; ಎದೆ ಗಟ್ಟಿ ಹಿಡ್ಕೊಂಡು ಮ್ಯಾಚ್‌ ಗೆಲ್ಲಿಸಿದ ಹನುಮಂತ, ಧನರಾಜ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂತು ಮ್ಯಾಚ್‌ ನೋಡುತ್ತಿದ್ದರೂ ಕೂಡ, ಹನುಮಂತ ಅವರು ಸರಿಯಾಗಿ ಕಾಣೋದಿಲ್ಲ ಎಂದು ಮೊಬೈಲ್‌ನಲ್ಲಿ ಲೈವ್‌ ನೋಡಿದ್ದು ಮಾತ್ರ ಹಾಸ್ಯಾಸ್ಪದ ಎನ್ನಬಹುದು.

25

ಹನುಮಂತ ಅವರು ಬಿಗ್‌ ಬಾಸ್‌ ಗೆದ್ದರೂ ಕೂಡ ಸ್ವಲ್ಪವೂ ಬದಲಾಗಿಲ್ಲ. ಅವರು ಲುಂಗಿ ಹಾಕಿಕೊಂಡು ಗ್ರೌಂಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಾನು ಲುಂಗಿ ಬಿಡೋದಿಲ್ಲ ಎಂದು ಅವರು ಹೇಳಿದ್ದಾರೆ.
 

35

ಆರ್‌ಸಿಬಿ ಮ್ಯಾಚ್‌ ನೋಡಲು ಬಂದಿದ್ದೇವೆ ಎಂದು ಧನರಾಜ್‌, ಹನುಮಂತ ಅವರು ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಹಾಕಿದ್ದರು. ಅದನ್ನು ನೋಡಿ ನೆಟ್ಟಿಗನೊಬ್ಬ, “ಆರ್‌ಸಿಬಿ ಗೆಲ್ಲಿಸಿ, ಇಲ್ಲ ಅಂದ್ರೆ ನಿಮ್ಮಂತ ದರಿದ್ರ ಮುಖ ಇನ್ನೊಂದಿಲ್ಲ” ಎಂದು ಕಾಮೆಂಟ್‌ ಹಾಕಿದ್ದರಂತೆ. ಅದನ್ನು ಧನರಾಜ್‌ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
 

45

ಧನರಾಜ್‌ ಆಚಾರ್‌ ಅವರು ಆಮೇಲೆ ಮ್ಯಾಚ್‌ ಗೆದ್ದಿದ್ದು ನೋಡಿ ಫುಲ್‌ ಖುಷಿಯಾಗಿದ್ದಾರೆ. ಸಿಎಸ್‌ಕೆ ವಿರುದ್ಧ ಗೆದ್ದಿದ್ದು ನೋಡಿ ಈ ದೋಸ್ತರು ಖುಷಿಪಟ್ಟಿದ್ದಾರೆ. 

55

ಬಿಗ್‌ ಬಾಸ್‌ ಶೋನಲ್ಲಿ ದೋಸ್ತ್‌ರಾಗಿದ್ದ ಈ ಜೋಡಿ ದೊಡ್ಮನೆಯಿಂದ ಆಚೆಯೂ ಸ್ನೇಹವನ್ನು ಮುಂದುವರೆಸಿದೆ. ಈ ಜೋಡಿ ʼಬಾಯ್ಸ್‌ v/s ಗರ್ಲ್ಸ್‌ʼ ಶೋನಲ್ಲಿ ಭಾಗವಹಿಸಿತ್ತು. 


 

Read more Photos on
click me!

Recommended Stories