Seetha Rama Serial ಕೊನೇ ದಿನದ ಶೂಟಿಂಗ್‌ ಮಾಡಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಕಲಾವಿದರು!

Published : May 21, 2025, 10:31 AM ISTUpdated : May 21, 2025, 10:34 AM IST

ಸೀತಾ-ರಾಮ್‌ ಲವ್‌ಸ್ಟೋರಿ, ರಾಮ್-ಸಿಹಿಯ ಸುಂದರವಾದ ಅಪ್ಪ-ಮಗಳ ಸಂಬಂಧದ ಬಗ್ಗೆ ಇರುವ ಬ್ಯೂಟಿಫುಲ್‌ ಕಥೆ ಈಗ ಮುಕ್ತಾಯವಾಗುತ್ತಿದೆ. ಈ ಬಗ್ಗೆ ಕಲಾವಿದರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.  

PREV
15
Seetha Rama Serial ಕೊನೇ ದಿನದ ಶೂಟಿಂಗ್‌ ಮಾಡಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಕಲಾವಿದರು!

ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ ಸತ್ತಿರೋದು ಸೀತಾಗೆ ಗೊತ್ತಾಗಿದೆ. ಅವಳು ಮುಂದೇನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ. ಇನ್ನೊಂದು ಕಡೆ ಈ ಸೀರಿಯಲ್‌ನ ಕೊನೆಯ ದಿನದ ಶೂಟಿಂಗ್‌ ಕೂಡ ಮುಗಿದಿದೆ. ಈ ಬಗ್ಗೆ ನಟ ಅಶೋಕ್‌, ಸಿಂಧು ರಾವ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
 

25

ಮೇ 20ರಂದು ʼಸೀತಾರಾಮʼ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್‌ ಮುಗಿದಿದೆ. ನಟ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್‌, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್‌, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರು ಕೊನೆಯ ದಿನದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. 
 

35

“ಸೀತಾರಾಮ ಧಾರಾವಾಹಿ ಅಂತ್ಯ ಆಗ್ತಿದೆ, ಇದನ್ನು ನಂಬಲಾಗುತ್ತಿಲ್ಲ, ಅರಗಿಸಿಕೊಳ್ಳಲೂ ಆಗ್ತಿಲ್ಲ. ಇದು ನಿಜಕ್ಕೂ ನಮಗೆ ಹೃದಯವಿದ್ರಾವಕ ವಿಷಯ. ಇಂದು ಈ ಸೀರಿಯಲ್‌ನ ಕೊನೆಯ ಎಪಿಸೋಡ್‌ ಶೂಟಿಂಗ್‌ ಮುಗಿದಿದೆ. ಈ ಧಾರಾವಾಹಿಯಲ್ಲಿ ಪ್ರೀತಿ, ನೆನಪುಗಳು ಎಲ್ಲವೂ ನಮ್ಮೊಳಗಡೆ ಇರುತ್ತವೆ. ಸೀತಾರಾಮ ಧಾರಾವಾಹಿ ರಾಮ್‌, ಸೀತಾ, ಸಿಹಿ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ” ಎಂದು ಫ್ಯಾನ್ಸ್‌ ಪೇಜ್‌ ಶೇರ್‌ ಮಾಡಿದ್ದ ಪೋಸ್ಟ್‌ನ್ನು ನಟ ಅಶೋಕ್‌ ರೀ ಪೋಸ್ಟ್‌ ಮಾಡಿದ್ದಾರೆ.  
 

45


“ಸೀತಾರಾಮ ಧಾರಾವಾಹಿ ಕೇವಲ ಧಾರಾವಾಹಿಯಾಗಿರಲಿಲ್ಲ. ಅದೊಂದು ಭಾವನೆಯಾಗಿತ್ತು. ಅಭಿಮಾನಿಗಳು ಈ ಕಥೆಯನ್ನು ನೋಡುವುದರ ಜೊತೆಗೆ ಜೀವಿಸಿದ್ದಾರೆ. ಅಭಿಮಾನಿಗಳು ಪ್ರೀತಿಸುವ ಈ ಸೀತಾರಾಮದ ಕಥೆಯನ್ನು ಹೀಗೆ ಅಂತ್ಯಗೊಳಿಸುತ್ತಿರುವುದು ನಿಜಕ್ಕೂ ದುಃಖದ ವಿಷಯ” ಎಂದು ನಟಿ ಸಿಂಧು ರಾವ್‌ ಅವರು ಫ್ಯಾನ್ಸ್‌ ಪೇಜ್‌ ಶೇರ್‌ ಮಾಡಿಕೊಂಡಿರೋ ಪೋಸ್ಟ್‌ನ್ನು ರೀ ಪೋಸ್ಟ್‌ ಮಾಡಿದೆ.  

55

ಈ ಧಾರಾವಾಹಿಯಲ್ಲಿ ರಾಮ್‌ ತಂದೆ-ತಾಯಿಯನ್ನು ಕೊಲೆ ಮಾಡಿರೋದು ಯಾರು? ಸಿಹಿಯನ್ನು ಕೊಂದಿರೋದು ಯಾರು ಎನ್ನೋದು ಇಡೀ ಮನೆಗೆ ಗೊತ್ತಾಗಬೇಕಿದೆ. ಭಾರ್ಗವಿಯ ದುಷ್ಟತನ, ಅವಳ ಮಾಡಿದ ಮೋಸವನ್ನು ಬಯಲಿಗೆ ಎಳೆಯಬೇಕಿದೆ. ಈ ಬಗ್ಗೆ ಹೇಗೆ ಎಪಿಸೋಡ್‌ ಪ್ರಸಾರ ಆಗಲಿದೆ? ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. 
 

Read more Photos on
click me!

Recommended Stories