ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.
ಟಿವಿ ಲೋಕದ ಜನಪ್ರಿಯ ನಟಿ ರಶ್ಮಿ ದೇಸಾಯಿ, ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಸದ್ಯದಲ್ಲೇ 'ತುಮ್ ಹೋ ನಾ' (Tum Ho Naa) ಎಂಬ ಶೋನಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿ, ಇತ್ತೀಚೆಗೆ ರಾಜೀವ್ ಖಂಡೇಲ್ವಾಲ್ (Rajeev Khandelwal) ಜೊತೆಗಿನ ಸಂದರ್ಶನವೊಂದರಲ್ಲಿ ತಮ್ಮ ಮುರಿದುಹೋದ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆರಿಯರ್, ಮಾನಸಿಕ ಸಂಘರ್ಷದ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
27
‘ನಾನು ನನ್ನ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ’
ಒಂದು ಕಾಲದಲ್ಲಿ ತಮ್ಮ ಕುಟುಂಬದಿಂದ ದೂರ ಉಳಿದಿದ್ದನ್ನು ನೆನಪಿಸಿಕೊಂಡು ರಶ್ಮಿ ದೇಸಾಯಿ ಭಾವುಕರಾದರು. "ಆಗೆಲ್ಲಾ ನಾನು ನನ್ನ ಅಮ್ಮನ ಜೊತೆ ಮಾತೇ ಆಡುತ್ತಿರಲಿಲ್ಲ, ಅಷ್ಟೇ ಅಲ್ಲ, ಅವರ ನಂಬರನ್ನೇ ಬ್ಲಾಕ್ ಮಾಡಿದ್ದೆ," ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ತಮ್ಮ ಜೀವನವೇ ಮುಗಿದುಹೋಯಿತು ಎಂದು ಅನಿಸುತ್ತಿತ್ತು. ಕೆರಿಯರ್ ಕೂಡ ಇರಲಿಲ್ಲ, ವೈಯಕ್ತಿಕ ಜೀವನವೂ ಚೆನ್ನಾಗಿರಲಿಲ್ಲ, ಆರ್ಥಿಕವಾಗಿಯೂ ಪರಿಸ್ಥಿತಿ ಹದಗೆಟ್ಟಿತ್ತು ಎಂದು ರಶ್ಮಿ ನೋವಿನಿಂದ ಹೇಳಿಕೊಂಡಿದ್ದಾರೆ.
37
'ಮನೆಯಿಂದ ಹೊರಗೆ ಕಾಲಿಟ್ಟರೆ ಕೆರಿಯರ್ ಮುಗಿಯುತ್ತೆ ಅಂದ್ಕೊಂಡಿದ್ದೆ'
ಆ ಕಷ್ಟದ ದಿನಗಳಲ್ಲಿ ತಮಗೆ ಸದಾ ಭಯ ಕಾಡುತ್ತಿತ್ತು ಎಂದು ನಟಿ ಹೇಳಿದ್ದಾರೆ. "ನಾನು ಈ ಮನೆಯಿಂದ ಹೊರಗೆ ಕಾಲಿಟ್ಟರೆ ನನ್ನ ಕೆರಿಯರ್ ಮುಗಿದುಹೋಗುತ್ತೆ ಅಂತ ನನಗೆ ಅನಿಸುತ್ತಿತ್ತು. ನನ್ನ ಹತ್ತಿರ ದುಡ್ಡೂ ಇರಲಿಲ್ಲ, ಭರವಸೆ ಇಡಬಹುದಾದ ಯಾರೂ ಇರಲಿಲ್ಲ," ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಆ ಕಷ್ಟದ ದಿನಗಳೇ ತಮಗೆ ಜೀವನದ ದೊಡ್ಡ ಪಾಠ ಕಲಿಸಿದವು ಎಂದು ರಶ್ಮಿ ದೇಸಾಯಿ ಹೇಳಿದ್ದಾರೆ. ಮನುಷ್ಯರು ತಪ್ಪುಗಳಿಂದಲೇ ಕಲಿಯುತ್ತಾರೆ ಮತ್ತು ಜೀವನವನ್ನು ಮತ್ತೆ ಹೊಸದಾಗಿ ಶುರು ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಅರಿತುಕೊಂಡೆ ಎಂದಿದ್ದಾರೆ. "ಜೀವನದಲ್ಲಿ ಎಲ್ಲರೂ ನಿಮ್ಮ ವಿರುದ್ಧವಾದಾಗ, ಅದೇ ಸಮಯ ನಮಗೆ ಹೆಚ್ಚು ಕಲಿಸುತ್ತದೆ. ಯಾಕೆಂದರೆ ಆವಾಗ ನಮ್ಮ ಜೊತೆ ಇರುವವರು ಮಾತ್ರ ನಿಜವಾದ ನಮ್ಮವರು," ಎಂದು ಅವರು ಹೇಳಿದ್ದಾರೆ.
57
ಸಲ್ಮಾನ್ ಖಾನ್ ಮುಂದೆ ಅಮ್ಮನ ಜೊತೆ ಮೊದಲ ಮಾತುಕತೆ
ವರ್ಷಗಳ ನಂತರ ಅಮ್ಮನ ಜೊತೆ ಮಾತುಕತೆ ಶುರುವಾದ ಒಂದು ಸ್ವಾರಸ್ಯಕರ ಕಥೆಯನ್ನೂ ರಶ್ಮಿ ಹಂಚಿಕೊಂಡಿದ್ದಾರೆ. ಒಂದು ಶೋಗೆ ಅವರ ಅಮ್ಮ ಬಂದಿದ್ದರಂತೆ. ಆಗ ರಶ್ಮಿ, ಎಂದಿನಂತೆ ಸಲ್ಮಾನ್ ಖಾನ್ ಅವರ ಕಾಲು ಮುಟ್ಟಿದ್ದಾರೆ. ಇದನ್ನು ನೋಡಿದ ಸಲ್ಮಾನ್, ರಶ್ಮಿ ಅಮ್ಮನ ಹತ್ತಿರ, "ಮನೇಲೂ ಹೀಗೇನಾ ಇವಳು?" ಅಂತ ಕೇಳಿದ್ದಾರೆ. ಆಗಲೇ ಅವರಿಬ್ಬರ ನಡುವೆ ಮಾತುಕತೆ ಶುರುವಾಗಿದ್ದು.
67
ಸಂಬಂಧದಲ್ಲಿ ಬಿರುಕು ಮೂಡಿದ್ದೇಕೆ?
ತಮ್ಮ ಮತ್ತು ಅಮ್ಮನ ನಡುವೆ ಸಾಕಷ್ಟು ತಪ್ಪು ತಿಳುವಳಿಕೆಗಳಿದ್ದವು ಎಂದು ರಶ್ಮಿ ವಿವರಿಸಿದ್ದಾರೆ. "ನಾನು ತುಂಬಾ ಮಹತ್ವಾಕಾಂಕ್ಷಿ, ಜೊತೆಗೆ ಬಂಡಾಯದ ಸ್ವಭಾವ ನನ್ನದು. ಆದರೆ ನನ್ನ ಅಮ್ಮ ಪ್ರತಿಯೊಂದು ನಿರ್ಧಾರಕ್ಕೂ ಹೆದರುತ್ತಿದ್ದರು. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಗಿತ್ತು," ಎಂದು ರಶ್ಮಿ ಹೇಳಿದ್ದಾರೆ.
77
ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ
ರಶ್ಮಿ ದೇಸಾಯಿ ಅವರ ಈ ಮಾತುಗಳ ನಂತರ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅವರ ಧೈರ್ಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ತಮ್ಮ ಜೀವನದ ಕಷ್ಟಗಳನ್ನು ಇಷ್ಟು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದು ನಿಜಕ್ಕೂ ಸ್ಪೂರ್ತಿದಾಯಕ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.