ಶೀಘ್ರದಲ್ಲೇ ಶುರುವಾಗಲಿರುವ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಕವಿತಾ ಗೌಡ ನಟಿಸುತ್ತಿರುವುದು ಫೈನಲ್ ಆಗಿದೆ. ಆದರೆ ಈಗಾಗಲೇ ಎಲ್ಲೆಡೆ ವೈರಲ್ ಆಗಿರುವಂತೆ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತ್ತಿಲ್ಲವೇ? ಎನ್ನುವ ಮಾತು ಕೇಳಿ ಬರುತ್ತಿದೆ. ವೈರಲ್ ಸುದ್ದಿಯಲ್ಲಿ ಏನಿದೆ?
ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಶುರುವಾಗಲಿರುವ, ಈಗಾಗಲೇ ಪ್ರೊಮೋ ಮೂಲಕ ಸದ್ದು ಮಾಡುತ್ತಿರುವ ‘ಜಗದ್ಧಾತ್ರಿ ಧಾರಾವಾಹಿಯಲ್ಲಿ, ’ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟಿ ಕವಿತಾ ಗೌಡ ನಟಿಸುತ್ತಿರುವುದು ಪಕ್ಕಾ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
26
ಕವಿತಾ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕವಿತಾ ಗೌಡ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ವಿದ್ಯಾ ವಿನಾಯಕದ ಮೂಲಕ ಜನಕ್ಕೆ ಮತ್ತಷ್ಟು ಹತ್ತಿರವಾದರು. ಧಾರಾವಾಹಿಗಳಲ್ಲಿ ಗೆಸ್ಟ್ ಎಪಿಯರೆನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಮಗುವಾದ ಬಳಿಕ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
36
ತಾಯಿಯಾದ ಬಳಿಕ ಮತ್ತೆ ನಟನೆ
ಕವಿತಾ ಗೌಡ 2024ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾದರು. ಆದಾದ ಬಳಿಕ ಮಗುವಿನ ಲಾಲನೆ ಪಾಲನೆಯಲ್ಲಿಯೇ ನಟಿ ಬ್ಯುಸಿಯಾಗಿದ್ದರು. ಮಗುವಿಗೆ ಈಗ ಒಂದೂವರೆ ವರ್ಷ ಕಳೆದಿದ್ದು, ಕವಿತಾ ಗೌಡ ಮತ್ತೆ ಕಿರುತೆರೆಗೆ ಜಗದ್ಧಾತ್ರಿ ಧಾರಾವಾಹಿ ಮೂಲಕ ಎಂಟ್ರಿ ಕೊಡಲಿದ್ದಾರೆ.
ಕವಿತಾ ಗೌಡ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಪಕಕ್ಕಾ ಆಗಿದೆ. ಆದರೆ ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಹಾಗಿದ್ರೆ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರೇ ಎನ್ನುವ ಗೊಂದಲ ವೀಕ್ಷಕರಲ್ಲಿ ಶುರುವಾಗಿದೆ.
56
ಮೋಕ್ಷಿತಾ ಪೈ ನಟಿಸೋದು ಪಕ್ಕಾ
ಈಗಾಗಲೇ ‘ಜಗದ್ಧಾತ್ರಿ’ ಪ್ರೊಮೋ ರಿಲೀಸ್ ಆಗಿದೆ. ಆದರೆ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದರೆ ವಾಯ್ಸ್ ಕೇಳಿ ಎಲ್ಲರೂ ಇದು ಮೋಕ್ಷಿತಾ ಪೈ ಅವರೇ ಎಂದು ಹೇಳಿದ್ದಾರೆ. ಇದೀಗ ಕವಿತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ನಟಿಸುವುದನ್ನು ನೋಡಿ ವೀಕ್ಷಕರು ಫುಲ್ ಕನ್ ಫ್ಯೂಸ್ ಆಗಿದ್ದಾರೆ.
66
ಮೋಕ್ಷಿತಾ-ಕವಿತಾ ಇಬ್ಬರೂ ಒಂದೇ ಧಾರಾವಾಹಿಯಲ್ಲಿ
ಅಂದ ಹಾಗೇ ಸದ್ಯ ಬಂದಿರುವ ಮಾಹಿತಿ ಪ್ರಕಾರ ಕವಿತಾ ಗೌಡ ಮತ್ತು ಮೋಕ್ಷಿತಾ ಪೈ ಇಬ್ಬರೂ ಕೂಡ ‘ಜಗದ್ಧಾತ್ರಿ’ಯಲ್ಲಿ ನಟಿಸುತ್ತಿದ್ದಾರೆ. ಮೋಕ್ಷಿತಾ ನಾಯಕಿಯಾಗಿ ನಟಿಸಿದರೆ, ನಾಯಕನ ಅಕ್ಕನಾಗಿ ಕವಿತಾ ಗೌಡ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇದು ಸಹ ಧಾರಾವಾಹಿಯಲ್ಲಿ ಅತ್ಯಂತ ಮುಖ್ಯವಾದ ಪಾತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.