ಫ್ಯಾಮಿಲಿ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ‘ಗೌರಿ ಕಲ್ಯಾಣ’ ನಟಿ Shilpa Kamath

Published : May 27, 2026, 11:22 PM IST

‘ಗೌರಿ ಕಲ್ಯಾಣ’ ಧಾರಾವಾಹಿ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
17
ಶಿಲ್ಪಾ ಕಾಮತ್

ಕನ್ನಡ ಕಿರುತೆರೆ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ತಮ್ಮ ಅಪ್ಪ ಅಮ್ಮ ಮತ್ತು ಸ್ನೇಹಿತರ ಜೊತೆಗೆ ಸಿಂಪಲ್ ಆಗಿ ಆದರೆ ಗ್ರ್ಯಾಂಡ್ ರೆಸ್ಟೋರೆಂಟಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇಲ್ಲಿದೆ ಸುಂದರವಾದ ಫೋಟೊಗಳು

27
ಶುಭ ಕೋರಿದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ ನಟಿ

ನಿಜವಾಗಿಯೂ ಆಶೀರ್ವಾದ ಮತ್ತು ಪ್ರೀತಿಯಿಂದ ತುಂಬಿ ತುಳುಕುತ್ತಿರುವ ಭಾವನೆ. ನನ್ನ ಹುಟ್ಟುಹಬ್ಬವನ್ನು ಎಲ್ಲಾ ಸುಂದರ ಸರ್ಪ್ರೈಸ್, ಪ್ರೀತಿ ಮತ್ತು ಪ್ರಯತ್ನಗಳೊಂದಿಗೆ ವಿಶೇಷವಾಗಿಸಿದ್ದಕ್ಕಾಗಿ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ತುಂಬಾ ಧನ್ಯವಾದಗಳು.

37
ನನ್ನನ್ನು ಸದಾ ಬೆಂಬಲಿಸಿ, ಆಶೀರ್ವದಿಸಿ

ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡ ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು. ನಿಮ್ಮಲ್ಲಿ ಅನೇಕರಿಗೆ ರಿಪ್ಲೈ ಮಾಡಲು ನಾನು ಮಿಸ್ ಮಾಡಿರಬಹುದು, ಮತ್ತು ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ, ಆದರೆ ನಿಮ್ಮ ಎಲ್ಲಾ ಸಂದೇಶಗಳನ್ನು ನಾನು ನೋಡಿದ್ದೇನೆ ಮತ್ತು ಅವು ನಿಜವಾಗಿಯೂ ಅರ್ಥಪೂರ್ಣವಾಗಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗೆ ಮತ್ತೊಮ್ಮೆ ಧನ್ಯವಾದಗಳು. ದಯವಿಟ್ಟು ಯಾವಾಗಲೂ ಇದೇ ರೀತಿ ನನ್ನನ್ನು ಬೆಂಬಲಿಸಿ ಮತ್ತು ಆಶೀರ್ವದಿಸಿ.

47
ಬರ್ತ್ ಡೇ ಪಾರ್ಟಿ ಹೀಗಿತ್ತು

ಶಿಲ್ಪಾ ಕಾಮತ್ ಹುಟ್ಟುಹಬ್ಬ ಸಿಂಪಲ್ ಆಗಿ, ಆದರೆ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಗ್ರ್ಯಾಂಡ್ ಹೋಟೇಲ್ ಒಂದರಲ್ಲಿ ಗ್ರ್ಯಾಂಡ್ ಸೆಲೆಬ್ರೇಟ್ ಮಾಡಿದ್ದಾರೆ. ಶಿಲ್ಪಾ ಕಾಮತ್ ಗೌನ್ ಧರಿಸಿ, ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ನಟಿ ವಿಶ್ ಮಾಡಿದ್ದಾರೆ.

57
ನೂರು ಜನ್ಮಕೂ ಧಾರಾವಾಹಿ ಮೂಲಕ ಎಂಟ್ರಿ

ಕನ್ನಡ ಕಿರುತೆರೆಗೆ ಕೆಲವು ವರ್ಷಗಳ ಹಿಂದಷ್ಟೆ ಪರಿಚಿತರಾದ ನಟಿ ಶಿಲ್ಪಾ ಕಾಮತ್. ‘ನೂರು ಜನ್ಮಕೂ’ ಧಾರಾವಾಹಿಯಿಂದ ತಮ್ಮ ನಟನೆ ಜರ್ನಿ ಶುರು ಮಾಡಿ, ಬಳಿಕ ಕಾಮಿಡಿ ಕಿಚನ್ ಸ್ಪರ್ಧಿಯಾಗಿದ್ದರು, ಇದೀಗ ‘ಗೌರಿ ಕಲ್ಯಾಣ’ದಲ್ಲಿ ನಟಿಸುತ್ತಿದ್ದಾರೆ.

67
ಬ್ಯಾಂಕ್ ಉದ್ಯೋಗದಿಂದ ನಟನೆವರೆಗಿನ ಜರ್ನಿ

ಮೂಲತಃ ಉಡುಪಿಯವರಾದ ಶಿಲ್ಪಾ, ಹುಟ್ಟಿ ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿ. ಸದ್ಯ ನಟನೆಗಾಗಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಅಂದ ಹಾಗೆ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ. ವಿದ್ಯಭ್ಯಾಸ ಮುಗಿದ ಮೇಲೆ ಒಂದಷ್ಟು ಸಮಯ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರು. ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.

77
ಇವರು ‘ಮಿಸ್ ಮಂಗಳೂರು’ ಕೂಡ ಹೌದು

ಶಿಲ್ಪಾ ಕಾಮತ್ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮುನ್ನ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದರು. 2023ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಬಳಿಕ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories