ಕನ್ನಡದ ಸೀರಿಯಲ್‌ ನಟಿಗೆ ಬರ್ತ್‌ಡೇಗೆ ವಿಶ್‌ ಮಾಡಿದ ಸೂಪರ್‌ ಸ್ಟಾರ್‌ ಹೀರೋಯಿನ್‌ ತ್ರಿಶಾ ಕಷ್ಣನ್‌, ಇದಕ್ಕಿದೆ ಪುನೀತ್‌ ಲಿಂಕ್‌!

Published : Jun 25, 2025, 08:31 PM IST

ತಮಿಳು ನಟಿ ತ್ರಿಶಾ ಕೃಷ್ಣನ್‌ ಮತ್ತು ಕನ್ನಡ ನಟಿ ನೈನಾ ಪುಟ್ಟಸ್ವಾಮಿ ಅವರ ಬಾಂಧವ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಪವರ್‌' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರಿಂದ ಆರಂಭವಾದ ಈ ಸ್ನೇಹ, ಇಂದಿಗೂ ಅಚಲವಾಗಿದೆ.

PREV
110

ತಮಿಳಿನ ಸೂಪರ್‌ಸ್ಟಾರ್‌ ನಟಿ ತ್ರಿಶಾ ಕೃಷ್ಣನ್‌ ಸಖತ್‌ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ದಳಪತಿ ವಿಜಯ್‌ ಅವರ ಜನ್ಮದಿನದಂದು ಅವರು ಮಾಡಿದ ಪೋಸ್ಟ್‌. ವಿಹಯ್‌ ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ರೂಮರ್‌ಗಳ ನಡುವೆಯೇ ಅವರು, ತಾವು ಹಾಗೂ ವಿಜಯ್‌ ಜೊತೆಗಿರುವ ಫೋಟೋದೊಂದಿಗೆ ಬರ್ತ್‌ಡೇ ವಿಶ್‌ ಮಾಡಿದ್ದರು.

210

ಈ ನಡುವೆ ಕನ್ನಡದ ನಟಿ ಹಾಗೂ ಈಗ ಅಮೆರಿಕಾದಲ್ಲಿ ವಾಸ್ತವ್ಯ ಹೂಡಿರುವ ಸ್ಟಾರ್‌ಗೆ ತ್ರಿಶಾ ಕೃಷ್ಣನ್‌ ಬರ್ತ್‌ಡೇ ವಿಶ್‌ ಮಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಗಮನ ಸೆಳದಿದೆ.

310

ಹೌದು ಕನ್ನಡದಲ್ಲಿ ಕೆಲವೊಂದು ಸೀರಿಯಲ್‌ಗಳು ಹಾಗೂ ಸಿನಿಮಾದಲ್ಲಿ ನಟಿಸಿದ್ದ ನೈನಾ ಪುಟ್ಟಸ್ವಾಮಿ ಜೂನ್‌ 23 ರಂದು ತಮ್ಮ ಜನ್ಮದಿನದ ಆಚರಿಸಿಕೊಂಡಿದ್ದರು. ಅಚ್ಚರಿ ಎನ್ನುವಂತೆ ತ್ರಿಶಾ ಕೃಷ್ಣನ್‌, ನೈನಾ ಅವರಿಗೆ ಜನ್ಮದಿನದ ಶುಭಾಶಯ ಹೇಳಿ ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

410

'ಹ್ಯಾಪಿ ಬರ್ತ್‌ಡೇ ಟು ಮೈ ಗೋಲ್ಡನ್‌ ಹಾರ್ಟೆಡ್‌ ಫ್ರೆಂಡ್‌. ನನ್ನ ಪ್ರಕಾರ ನ್ಯೂಯಾರ್ಕ್‌ ನಮ್ಮನ್ನ ಮಿಸ್‌ ಮಾಡಿಕೊಳ್ಳುತ್ತಿದೆ..' ಎಂದು ನೈನಾ ಪುಟ್ಟಸ್ವಾಮಿಯ ಫೋಟೋದ ಜೊತೆ ತ್ರಿಶಾ ಪೋಸ್ಟ್‌ ಮಾಡಿದ್ದಾರೆ.

510

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೈನಾ ಪುಟ್ಟಸ್ವಾಮಿ, 'ಓಹ್‌ ಇದು ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು. ಥ್ಯಾಂಕ್‌ ಯು ಮೈ ತ್ರಿಶು..ಈ ಬಾರಿ ನ್ಯೂಯಾರ್ಕ್‌ ನಮ್ಮನ್ನು ನೋಡಿ ಕ್ರೇಜಿಯಾಗಬೇಕು. ಆ ರೀತಿ ಮಾಡೋಣ' ಎಂದು ಬರೆದುಕೊಂಡಿದ್ದಾರೆ.

610

ಹೌದು ತ್ರಿಶಾ ಕೃಷ್ಣನ್‌ ಹಾಗೂ ಕನ್ನಡದ ಹುಡುಗಿ ನೈನಾ ಪುಟ್ಟಸ್ವಾಮಿಯ ಸ್ನೇಹಕ್ಕೆ ಕಾರಣವಾಗಿದ್ದು ಪುನೀತ್‌ ರಾಜ್‌ಕುಮಾರ್‌. ಪುನೀತ್‌ ರಾಜ್‌ಕುಮಾರ್‌ ತೆಲುಗಿನ ದೂಕುಡು ಸಿನಿಮಾವನ್ನು 'ಪವರ್‌' ಆಗಿ ರಿಮೇಕ್‌ ಮಾಡಿದ್ದರು. ಈ ಸಿನಿಮಾ ಮೂಲಕ ತ್ರಿಶಾ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದರೆ, ಇದೇ ಸಿನಿಮಾದಲ್ಲಿ ತ್ರಿಶಾ ಸ್ನೇಹಿತೆಯಾಗಿ ನೈನಾ ನಟಿಸಿದ್ದರು.

710

ಅಂದಿನಿಂದಲೂ ಇವರಿಬ್ಬರ ಸ್ನೇಹ ಅಚಲವಾಗಿ ಮುಂದುವರಿದಿದೆ ನೈನಾ ಪುಟ್ಟಸ್ವಾಮಿ ಈಗ ಮದುವೆಯಾಗಿ ಅಮೆರಿಕದಲ್ಲಿ ವಾಸವಿದ್ದಾರೆ. ಹಾಗಿದ್ದರೂ, ಆಕೆಯ ಜನ್ಮದಿನದಂದು ತ್ರಿಶಾ ನೆನಪಿಟ್ಟುಕೊಂಡು ವಿಶ್‌ ಮಾಡಿದ್ದಾರೆ.

810

ಪವರ್‌ ಸಿನಿಮಾದ ಶೂಟಿಂಗ್‌ ಸ್ಪೇನ್‌ ದೇಶದಲ್ಲಿ ಆಗಿದ್ದಾಗ ಇಬ್ಬರೂ ಸಖತ್‌ ಎಂಜಾಯ್‌ ಮಾಡಿದ್ದರು. 'ನಾವಿಬ್ಬರು ಸ್ಪೇನ್‌ನಲ್ಲಿ ಸಖತ್‌ ಚಿಲ್‌ ಆಗಿದ್ದೆವು. ಇಬ್ಬರೂ ಜೊತೆಯಲ್ಲಿ ಇರೋದು ಸಖತ್‌ ಕಂಫರ್ಟಬಲ್‌ ಆಗಿತ್ತು' ಎಂದು ನೈನಾ ಪುಟ್ಟಸ್ವಾಮಿ ಆಗ ಮಾತನಾಡಿದ್ದರು.

910

ಅದಾದ ಬಳಿಕ ವಿದೇಶದಲ್ಲಿ ಹಲವು ಬಾರಿ ಜೊತೆಯಲ್ಲಿಯೇ ಇಬ್ಬರೂ ಟ್ರಿಪ್‌ ಕೂಡ ಮಾಡಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋಗಳನ್ನೂ ಇವರು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಚಿಟ್ಟೆ ಹೆಜ್ಜೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನೈನಾ ಪುಟ್ಟಸ್ವಾಮಿ ನಟಿಸಿದ್ದರು.

1010

ಇಷ್ಟು ಮಾತ್ರವಲ್ಲದೆ ನೈನಾ ಪುಟ್ಟಸ್ವಾಮಿ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಪ್ಯಾಟಿ ಹುಡ್ಗೀರ್‌ ಹಳ್ಳಿ ಲೈಫು ರಿಯಾಲಿಟಿ ಶೋನ ವಿಜೇತರೂ ಆಗಿದ್ದರು.

Read more Photos on
click me!

Recommended Stories