ಕನ್ನಡದ ಈ ಸ್ಟಾರ್ ನಟಿಯರು ಹುಟ್ಟಿದ್ದು ಯಾವ ಜಿಲ್ಲೆಯಲ್ಲಿ? ಯಾವ ಜಾತಿಯಲ್ಲಿ?

Published : Jan 21, 2026, 06:39 PM IST

ಬೆಂಗಳೂರು: ತನ್ನ ಅದ್ಭುತ ನಟನೆಯ ಮೂಲಕವೇ ಕನ್ನಡ ನಾಡಿನಾದ್ಯಂತ ಅಭಿಮಾನಿಗಳ ಜನಮನ ಗೆದ್ದ ಹೊಸ ತಲೆಮಾರಿನ ಕನ್ನಡದ ಟಾಪ್-7 ನಟಿಯರು ಯಾವ ಜಿಲ್ಲೆಯವರು ಹಾಗೆ ಯಾವ ಜಾತಿಯವರು ಎನ್ನುವುದನ್ನು ನೋಡೋಣ ಬನ್ನಿ. 

PREV
18
ಯಾವ ನಟಿ ಯಾವ ಜಿಲ್ಲೆಯವರು?

ಸಿನಿ ಪ್ರಿಯರು ತಮ್ಮ ನೆಚ್ಚಿನ ನಟಿಯರುವ ಎಲ್ಲಿಯವರು ಹಾಗೆ ಯಾವ ಜಾತಿಯವರು ಎನ್ನುವ ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ. ಅಂದಹಾಗೆ ಕಲಾವಿದರಿಗೆ ಯಾವುದೇ ಜಾತಿ-ಧರ್ಮ-ಭಾಷೆಯ ಹಂಗು ಇರುವುದಿಲ್ಲ. ಅದಷ್ಟಕ್ಕೆ ಸೀಮಿತವೂ ಅಲ್ಲ. ಆದರೂ ಸುಮ್ಮನೇ ಕುತೂಹಲಕ್ಕಾಗಿ ಈ ಮಾಹಿತಿ ನಿಮಗಾಗಿ.

28
ಅದಿತಿ ಪ್ರಭುದೇವ:

ಕನ್ನಡಿಗರ ಜನಮನ ಗೆದ್ದ ನಟಿ ಅದಿತಿ ಪ್ರಭುದೇವ ಅವರು ಹುಟ್ಟಿದ್ದು ದಾವಣಗೆರೆಯಲ್ಲಿ. ಈ ನಟಿ ಲಿಂಗಾಯಿತ ಸಮುದಾಯದಲ್ಲಿ ಜನಿಸಿದ್ದರೂ, ಎಲ್ಲಾ ಸಮುದಾಯದ ಅಭಿಮಾನಿಗಳನ್ನು ಹೊಂದಿದ್ದಾರೆ.

38
ದೀಪಾ ಸನ್ನಿಧಿ:

ಪರಮಾತ್ಮ ಸಿನಿಮಾದಲ್ಲಿ ತಮ್ಮ ಮುಗ್ದ ನಟನೆಯ ಮೂಲಕ ಸಿನಿಪ್ರಿಯರ ಹೃದಯದಲ್ಲಿ ಅಚ್ಚಳಿಯದ ನೆನಪುಗಳನ್ನು ಕಟ್ಟಿಕೊಟ್ಟ ದೀಪಾ ಸನ್ನಿಧಿಯವರದ್ದು ಚಿಕ್ಕಮಗಳೂರು. ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.

48
ರಮ್ಯಾ

ನಟಿ ಕಂ ರಾಜಕಾರಣಿ ರಮ್ಯಾ 2003ರಲ್ಲಿ ಅಭಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಬ್ಯೂಟಿ ಕ್ವೀನ್ ರಮ್ಯಾ ಬೆಂಗಳೂರಿನವರಾಗಿದ್ದು, ಒಕ್ಕಲಿಗ ಸಮುದಾಯದಲ್ಲಿ ಜನಿಸಿದರು.

58
ಪ್ರಿಯಾಮಣಿ

ಬಹುಭಾಷಾ ನಟಿ, ಹಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರು ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ್ದಾರೆ.

68
ರಚಿತಾ ರಾಮ್:

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಚಿತಾ ರಾಮ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರು ಒಕ್ಕಲಿಗ ಸಮುದಾಯದಲ್ಲಿ ಜನಿಸಿದ್ದಾರೆ.

78
ರಾಧಿಕಾ ಪಂಡಿತ್:

ಅಪ್ಪಟ ಕನ್ನಡತಿ, ಮೊಗ್ಗಿನ ಮನಸ್ಸಿನಿಂದ ಹಿಡಿದು ರಾಮಾಚಾರಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಪಂಡಿತ್ ಹುಟ್ಟಿದ್ದು ಬೆಂಗಳೂರಿನಲ್ಲಿ. ರಾಧಿಕಾ ಪಂಡಿತ್ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ್ದಾರೆ.

88
ರಾಗಿಣಿ ದ್ವಿವೇದಿ:

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಹುಟ್ಟಿದ್ದು ಮಧ್ಯಪ್ರದೇಶದಲ್ಲಿ. ತಮ್ಮ ಅದ್ಭುತ ನಟನೆಯ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ರಾಗಿಣಿಯವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories