ಉಡುಪಿ: ಬಂಗಡೆ ಮೀನು ಕೊಟ್ಟು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾಗೆ ಅದ್ಧೂರಿ ಸ್ವಾಗತ

Published : Jan 21, 2026, 05:48 PM IST

ಉಡುಪಿ: ಕರಾವಳಿಯ ಕುವರಿ, ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ರಕ್ಷಿತಾ ಶೆಟ್ಟಿಗೆ ತಮ್ಮ ನೆಚ್ಚಿನ ಬಂಗುಡೆ ಮೀನು ಕೊಟ್ಟು ಸ್ವಾಗತಿಸಿದ್ದು, ಹೆಚ್ಚು ಗಮನ ಸೆಳೆದಿದೆ. 

PREV
16
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ರನ್ನರ್ ಅಪ್

12ನೇ ಸೀಸನ್ ಬಿಗ್ ಬಾಸ್ ಮನೆಯಲ್ಲಿ ಚಟಪಟ ಮಾತುಗಳ ಮೂಲಕವೇ ಕನ್ನಡಿಗರ ಮನಗೆದ್ದು ಫೈನಲ್ ಪ್ರವೇಶಿಸಿದ್ದ ರಕ್ಷಿತಾ ಶೆಟ್ಟಿ ಅಂತಿಮವಾಗಿ ರನ್ನರ್-ಅಪ್ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

26
ಬಿಗ್ ಬಾಸ್‌ನಲ್ಲಿ 25 ಲಕ್ಷ ರುಪಾಯಿ ನಗದು ಗೆದ್ದ ರಕ್ಷಿತಾ

ಬಿಗ್ ಬಾಸ್ ರನ್ನರ್ ಅಪ್ ಆದ ರಕ್ಷಿತಾಗೆ ಬರೋಬ್ಬರಿ 25 ಲಕ್ಷ ರುಪಾಯಿ ನಗದು ಬಹುಮಾನ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ರಕ್ಷಿತಾ ತನ್ನ ತವರೂರಾದ ತುಳುನಾಡಿಗೆ ಎಂಟ್ರಿ ಕೊಟ್ಟಿದ್ದಾರೆ.

36
ರಕ್ಷಿತಾಗೆ ತುಳುನಾಡಿನಲ್ಲಿ ಅದ್ದೂರಿ ಸ್ವಾಗತ

ಉಡುಪಿಯ ಹೆಜಮಾಡಿಯಿಂದ ಪಡುಬಿದ್ರೆ ಪೇಟೆಯ ತನಕ ರಕ್ಷಿತಾ ಶೆಟ್ಟಿಯವರನ್ನು ತೆರೆದ ವಾಹನದ ಮೂಲಕ ಅವರ ಅಭಿಮಾನಿಗಳು ಮೆರವಣಿಗೆ ನಡೆಸಿದರು. ಕರಾವಳಿಯ ಚಂಡೆ ನುಡಿಸುವ ಮೂಲಕ ರಕ್ಷಿತಾ ಅವರನ್ನು ಸ್ವಾಗತಿಸಲಾಯಿತು. ಇದರ ಜತೆಗೆ ಶಾಲು ಹಾಕಿ ಅಭಿಮಾನಿಗಳು ಸ್ವಾಗತಿಸಿದರು.

46
ರಕ್ಷಿತಾಗೆ ಬಂಗುಡೆ ಮೀನಂದ್ರೆ ಇಷ್ಟ

ಬಂಗುಡೆ ಮೀನಂದ್ರೆ ರಕ್ಷಿತಾಗೆ ಬಲು ಇಷ್ಟ. ಇದೇ ಕಾರಣಕ್ಕೆ ರಕ್ಷಿತಾಗೆ ಅಭಿಮಾನಿಗಳು ಬಂಗುಡೆ ಮೀನನ್ನು ಗಿಫ್ಟ್ ನೀಡಿದರು. ರಕ್ಷಿತಾ ಕೈಯ್ಯಲ್ಲಿ ಬಂಗುಡೆ ಮೀನು ಹಿಡಿದು ಸಂಭ್ರಮಿಸಿದರು.

56
ರಕ್ಷಿತಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ

ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಸ್ಥಳೀಯರು ಮುಗಿಬಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂರಾರು ಜನ ರಕ್ಷಿತಾ ಅವರನ್ನು ನೋಡಲು ಮುಗಿಬಿದ್ದರು.

66
ರಕ್ಷಿತಾ ಬಿಗ್ ಬಾಸ್‌ನ ಅತ್ಯಂತ ಕಿರಿಯ ಸ್ಪರ್ಧಿ

ರಕ್ಷಿತಾ ಶೆಟ್ಟಿ ಬಿಗ್‌ ಬಾಸ್​ ಸೀಸನ್ 12ರಲ್ಲಿ ಸ್ಪರ್ಧೆ ಮಾಡಿದ್ದ ಅತ್ಯಂತ ಕಿರಿಯ ಕಂಟೆಸ್ಟೆಂಟ್. ಆದ್ರೆ ವಯಸ್ಸಲ್ಲಿ ಕಿರಿಯಳಾದ್ರು ಈಗ ಕೀರ್ತಿಯಲ್ಲಿ ದೊಡ್ಡವಳಾಗಿದ್ದಾರೆ. ರಕ್ಷಿತಾ ಶೆಟ್ಟಿ ಅಂದ್ರೆ ಎಲ್ಲರ ಮನಸ್ಸು ಗೆದ್ದ ಮನೆ ಮಗಳಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories