Bigg Boss Kannada ಸೀಸನ್ 12 ಮುಗಿದು 3 ದಿನಗಳು ಕಳೆದಿದೆ. ಆದರೆ ಜನರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತ್ರ ಆ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಅಶ್ವಿನಿ ಗೌಡ ಅಂತು, ಎಲ್ಲಾ ಸಂದರ್ಶನಗಳಲ್ಲಿ, ನಾನೇ ವಿನ್ನರ್ ಎನ್ನುತ್ತಿದ್ದಾರೆ. ಇದೀಗ ಅವರ ಹೇಳಿಕೆಗೆ ಮತ್ತೊಬ್ಬ ಸ್ಪರ್ಧಿ ತಿರುಗೇಟು ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 12 (Bigg Boss Season 12)ಮುಗಿದು ಮೂರು ದಿನಗಳಾಗಿವೆ. ಆದರೆ ಸ್ಪರ್ಧಿಗಳು ಇನ್ನು ಆ ಗುಂಗಿನಿಂದ ಹೊರಬಂದಿಲ್ಲ. ಗಿಲ್ಲಿ ನಟ 46 ಕೋಟಿಗೂ ಅಧಿಕ ವೋಟ್ ಪಡೆದು ವಿನ್ನರ್ ಆಗಿದ್ದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್, ಮತ್ತು ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ ಆಗಿದ್ದಾರೆ. ಆದರೆ ದೊಡ್ಮನೆಯಿಂದ ಹೊರಬಂದ ಮೇಲೆ ಸಂದರ್ಶನಗಳಲ್ಲಿ ಅಶ್ವಿನಿ ಗೌಡ ನೀಡುತ್ತಿರುವ ಹೇಳಿಕೆಗಳು ವೈರಲ್ ಆಗುತ್ತಿವೆ. ಗಿಲ್ಲಿ ಬಡವ ಎನ್ನುತ್ತಾ ಗೆದ್ದ ಎಂದಿರುವ ಅವರ ಹೇಳಿಕೆಗೆ ಇದೀಗ ಬಿಸ್ ಬಾಸ್ ಮತ್ತೊಬ್ಬ ಸ್ಪರ್ಧಿ ಟಾಂಗ್ ಕೊಟ್ಟಿದ್ದಾರೆ.
26
ಅಶ್ವಿನಿ ಗೌಡ ಹೇಳಿದ್ದೇನು?
ಸಂದರ್ಶನಗಳಲ್ಲಿ ಅಶ್ವಿನಿ ಗೌಡ, ಬಡವರ ಮಕ್ಕಳು ಬೆಳಿಬೇಕು ಎನ್ನುವುದು ನಟ ಡಾಲಿ ಧನಂಜಯ್ ಅವರ ಡೈಲಾಗ್. ಆದರೆ ಇಲ್ಲಿ ಪ್ರಶ್ನೆ ಗಿಲ್ಲಿ ನಿಜವಾಗಿಯೂ ಬಡವನಾ ಎಂಬುದು. ನಿಜವಾದ ಬಡವ ಮತ್ತು ಬಡವನಂತೆ ಕಾಣಿಸಿಕೊಳ್ಳುವ ಗೆಟಪ್ ಎರಡೂ ಒಂದೇ ಅಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಗಿಲ್ಲಿಗೆ ಬಂದಿರುವ ವೋಟ್‌ಗಳಿಗೂ ನನಗೆ ಬಂದಿರುವ ವೋಟ್‌ಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ಅದನ್ನೇನಾದರೂ ನಾನು ಹೊರಗಡೆ ಇಟ್ಟರೆ, ನಾನೇ ವಿನ್ನರ್ ಆಗಬೇಕಿತ್ತು ಎಂದಿದ್ದಾರೆ.
36
ಇದು ಕಾಮಿಡಿ ಶೋ ಅಲ್ಲ ಎಂದ ಅಶ್ವಿನಿ ಗೌಡ
ಬಿಗ್ಬಾಸ್ ಅನ್ನುವಂಥದ್ದು ಕಾಮಿಡಿ ಶೋ ಅಲ್ಲ. ಇದು ವ್ಯಕ್ತಿತ್ವದ ಆಟ. ಆದರೆ ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ., ಇಡೀ ಮನೆಗೆ ನಾನು ನನ್ನನ್ನು ಸಮರ್ಪಿಸಿ ಕೊಂಡಿದ್ದೆ. ನನ್ನ ಮನಸ್ಸಿಗೂ ಗಾಯವಾಗಿದೆ, ದೈಹಿಕವಾಗಿಯೂ ಗಾಯವಾಗಿದೆ. ತುಂಬಾ ಹೆಮ್ಮೆಯಿಂದ ನಾನು ಹೇಳುತ್ತೇನೆ. ಇಲ್ಲಿಯವರೆಗೂ ಈ ರೀತಿಯ ಸ್ಟ್ರಾಂಗ್ ಸ್ಪರ್ಧಿ ಬಿಗ್ಬಾಸ್ಗೆ ಬಂದಿಲ್ಲ. ಇನ್ನು ಮುಂದೆ ಬಂದರೆ ಅದು ನನ್ನನ್ನು ಮೀರಿಯೇ ಹೋಗಬೇಕು ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅದ್ಭುತ ಮನರಂಜನೆ ಕೊಟ್ಟಿದ್ದ ಮತ್ತೊಬ್ಬ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಯಾರ ಹೆಸರುಗಳನ್ನೂ ಕೂಡ ಹೇಳದೆ, ಗಿಲ್ಲಿ ನಟನಿಗೆ ಬೆಂಬಲಿಸಿ, ಒಂದು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹೇಳ್ಬೇಕು ಅನಿಸ್ತು, ಅದಕ್ಕೆ ಹೇಳಿದೆ ಎಂದು ಕ್ಯಾಪ್ಶನ್ ಕೊಟ್ಟು, ಅಶ್ವಿನಿ ಗೌಡಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.
56
ಗಿಲ್ಲಿ ಗೆದ್ದಿರುವುದು ಟ್ಯಾಲೆಂಟ್ ನಿಂದ ಎಂದ ಅಭಿ
ನಾನು ಇನ್’ಸ್ಟಾಗ್ರಾಂ, ಅಲ್ಲಿ ಇಲ್ಲಿ ತುಂಬಾ ವಿಡಿಯೋ ನೋಡ್ತಿದ್ದೆ, ಅದರಲ್ಲಿ ಕೆಲವರು ಹೇಳ್ತಿದ್ದಾರೆ ಗಿಲ್ಲಿ ತುಂಬಾ ಬಡವ, ಗಿಲ್ಲಿ ಬಳಿ ಆ ಕಾರಿದೆ, ಈ ಕಾರಿದೆ ಅಂತ. ನನ್ನ ಪ್ರಕಾರ ಸೋ ವಾಟ್, ಗಿಲ್ಲಿ ಬಡವ ಆದ್ರೇನು? ಗಿಲ್ಲಿ ಬಳಿ ಆ ಕಾರು, ಈ ಕಾರು ಇದ್ರೆ ಏನಂತೆ? ನನಗಂತೂ ಗಿಲ್ಲಿ ಸಿಂಪಥಿಯಿಂದ ಗೆದ್ದ ಅಂತ ಅನಿಸೋದಿಲ್ಲ, ಅವನು ಅವನ ಟ್ಯಾಲೆಂಟ್ ಇಂದ ಗೆದ್ದಿರೋದು.
66
ಪ್ರೌಡ್ ಆಫ್ ಯು ಮ್ಯಾನ್
ನಮಗೆ ಒಬ್ಬರನ್ನ, ಇಬ್ಬರನ್ನ, ನಗಿಸೋದೆ ಕಷ್ಟ, ಅವನು ಇಡೀ ಕರ್ನಾಟಕವನ್ನು ನಗಿಸಿದ್ದಾರೆ, ಕರ್ನಾಟಕವನ್ನು ಎಂಟರ್ಟೇನ್ ಮಾಡಿದ್ದಾನೆ. ಜನ ಇಷ್ಟ ಪಡುತ್ತಿದ್ದರು. ಅದಕ್ಕೆ ಖುಷಿ ಇದ್ದ ನೋಡ್ತಾ ಇದ್ದರು, ಅದಕ್ಕೆ ಗೆಲ್ಲಿಸಿರೋದು ಕೂಡ, ಗಿಲ್ಲಿ ತುಂಬಾನೆ ಟ್ಯಾಲೆಂಟೆಡ್, ನನಗಂತೂ ಗಿಲ್ಲಿ ಗೆದ್ದಿರೋದು ಖುಷಿ ಇದೆ. ಕಂಗ್ರಾಜ್ಯುಲೇಶನ್ಸ್ ಗಿಲ್ಲಿ, ಪ್ರೌಡ್ ಆಫ್ ಯು ಮ್ಯಾನ್ ಎಂದಿದ್ದಾರೆ ಅಭಿಷೇಕ್. ವಿಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.