ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ಬಂದು ಚಂದನ್‌ ಶೆಟ್ಟಿಯನ್ನೇ ನಾಮಿನೇಟ್ ಮಾಡಿದ ಕುಮಾರಿ

Published : Aug 16, 2026, 01:33 PM IST

ಬಿಗ್‌ಬಾಸ್ ಸೀಸನ್ 13ರ ಅಗ್ನಿಪರೀಕ್ಷೆ ಆರಂಭವಾಗಿದ್ದು, ಕುಮಾರಿ ಎಂಬ ಯುವತಿ ಗಮನ ಸೆಳೆಯುತ್ತಿದ್ದಾರೆ. ತನ್ನ ಫಿಲ್ಟರ್ ಇಲ್ಲದ ಮಾತುಗಳಿಂದ ತೀರ್ಪುಗಾರರ ಮನಗೆದ್ದ ಈಕೆ, ಚಂದನ್ ಶೆಟ್ಟಿಯವರನ್ನೇ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

PREV
15
ಕನ್ನಡ ಬಿಗ್‌ಬಾಸ್ ಸೀಸನ್ 13ರ ಆರಂಭದ ಮೊದಲ ಹಂತ

ಸೀಸನ್ 13ರ ಬಿಗ್‌ಬಾಸ್ ರಿಯಾಲಿಟಿ ಶೋಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಹಂತವಾಗಿ ಅಗ್ನಿಪರೀಕ್ಷೆ ಶುರುವಾಗಿದೆ. 60 ಸಾಮಾನ್ಯ ಜನರನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಯಾರು ಅರ್ಹರು ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ಬಿಗ್‌ಬಾಸ್ ಅಗ್ನಿಪರೀಕ್ಷೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ಇನ್‌ಫ್ಲುಯೆನ್ಸರ್‌ಗಳು ಈ ರೇಸ್‌ನಲ್ಲಿದ್ದಾರೆ.

25
ಅಗ್ನಿಪರೀಕ್ಷೆಗೆ ಬಂದ ಕುಮಾರಿ

ಕುಮಾರಿ ಎಂಬ ಯುವತಿಯ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಫಿಲ್ಟರ್ ಇಲ್ಲದ ಮಾತುಗಳಿಗೆ ತೀರ್ಪುಗಾರರು ಸಹ ಫಿದಾ ಆಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ರೆ, ತೀರ್ಪುಗಾರರಾಗಿ ನಟಿಯರಾದ ಶೃತಿ, ಸಂಗೀತಾ ಶೃಂಗೇರಿ, ನಟ ವಿನಯ್ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿಯವರನ್ನು ಕಾಣಬಹುದು.

35
ಚಂದನ್ ಶೆಟ್ಟಿಯನ್ನ ನಾಮಿನೇಟ್ ಮಾಡಿದ ಕುಮಾರಿ

ಆಂಕರ್ ನಿರಂಜನ್ ದೇಶಪಾಂಡೆ ಮೇಲೆಯೇ ಈ ಕುಮಾರಿ ಹೆಸರಿನ ಯುವತಿ, ಪ್ರಾಸ ಹೇಳಿ ಎಲ್ಲರನ್ನೂ ನಗಿಸಿದ್ದಾರೆ. ಅದೇ ರೀತಿ ನೀವು Gen Zನಾ ಎಂದು ಪ್ರಶ್ನೆ ಮಾಡಿದಾಗ, ಯುವತಿ ನನಗೆ ಇಂಗ್ಲಿಷ್ ಬರಲ್ಲ. ಕನ್ನಡದಲ್ಲಿಯೇ ಕೇಳಿ ಎಂದು ಹೇಳಿದ್ದಾರೆ. ನಂತರ ವಿನಯ್ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡುವ ಅವಕಾಶ ಬಂದ್ರೆ ಯಾರನ್ನು ನಾಮಿನೇಟ್ ಮಾಡುತ್ತೀರಿ ಎಂದು ನಿರಂಜನ್ ಕೇಳುತ್ತಾರೆ.

45
ನಾಮಿನೇಟ್ ಮಾಡಿದ್ಯಾಕೆ?

ನಿರಂಜನ್ ಪ್ರಶ್ನೆಗೆ ಉತ್ತರಿಸಿದ ಕುಮಾರಿ, ನಾನು ಚಂದನ್ ಶೆಟ್ಟಿಯವರನ್ನು ನಾಮಿನೇಟ್ ಮಾಡುತ್ತೇನೆ. ಕಾರಣ ನಾನು ಚಂದನ್ ಶೆಟ್ಟಿಯವರ ಸೀಸನ್ ನೋಡಿಲ್ಲ. ನಾನು ಶೃತಿ ಮೇಡಂ ಗೆದ್ದಿರೋದನ್ನು ನೋಡಿದ್ದೇನೆ. ವಿನಯ್ ಮತ್ತು ಸಂಗೀತಾ ನಡುವಿನ ಜಗಳ ನೋಡಿದ್ದೇನೆ ಎಂದು ಹೇಳುತ್ತಾರೆ.

55
ಬಿಗ್‌ಬಾಸ್‌ಗೆ ಬರ್ತಾರಾ ಕುಮಾರಿ?

ನಂತರ ಚಂದನ್ ಶೆಟ್ಟಿ ಬಗ್ಗೆಯೂ ಕುಮಾರಿ ಪ್ರಾಸವನ್ನ ಹೇಳಿದ್ದಾರೆ. ಹಪ್ಪಳವನ್ನು ಬೇಯಿಸ್ತಾರೆ ಸುಟ್ಟಿ, ನಿಮ್ಮ ಸ್ಮೈಲ್ ಇಷ್ಟ ನನಗೆ ಚಂದನ್ ಶೆಟ್ಟಿ ಎಂದು ಹೇಳುತ್ತಿದ್ದಂತೆ ನಾಲ್ವರು ತೀರ್ಪಿಗಾರರು ಜೋರಾಗಿ ನಕ್ಕಿದ್ದಾರೆ. ಕುಮಾರಿ ಬಿಗ್‌ಬಾಸ್‌ಗೆ ಬರ್ತಾರಾ ಏನು ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories