ಎನರ್ಜಿ ಮತ್ತು ಮೂಡ್ ಬೂಸ್ಟ್: ದಿನಪೂರ್ತಿ ಒಂದೇ ರೀತಿಯ ಎನರ್ಜಿ ಮೇಂಟೇನ್ ಆಗುತ್ತದೆ. ಪಿರಿಯಡ್ಸ್ ಹಾಗೂ ಫರ್ಟಿಲಿಟಿ: ಮುಟ್ಟಿನ ಸಮಯದ ಕ್ರಾಮ್ಸ್ (Cramps), ಮೂಡ್ ಸ್ವಿಂಗ್ಸ್ ಕಡಿಮೆಯಾಗುತ್ತವೆ ಹಾಗೂ ಪಿಸಿಓಡಿ/ಪಿಸಿಓಎಸ್ (PCOD/PCOS) ನಿರ್ವಹಣೆಗೆ ಸಹಕಾರಿ. ವಯಸ್ಸಾದಂತೆ ಮೂಳೆ/ಮಸಲ್ ಬಲವರ್ಧನೆ: 30-40ರ ಹಂತದಲ್ಲಿ ಮಸಲ್ ಡ್ರಾಪ್ ಆಗುವುದನ್ನು ತಡೆದು, ಜಾಯಿಂಟ್ ಪೇನ್ ಇಲ್ಲದೆ ಸ್ವತಂತ್ರವಾಗಿರಲು ನೆರವಾಗುತ್ತದೆ.
ಡಯಟ್ ಮತ್ತು ವರ್ಕೌಟ್ ರೊಟೀನ್
ಡಯಟ್ ಎಂದರೆ ಉಪವಾಸವಲ್ಲ: ಡಯಟ್ ಎಂದರೆ ಗಾಳಿ-ನೀರು ಕುಡಿದು ಬದುಕುವುದಲ್ಲ; ಮನೆ ಊಟ, ಪ್ರೋಟೀನ್, ತರಕಾರಿ, ಹಣ್ಣುಗಳು ಮತ್ತು ಕಾಳುಗಳನ್ನು ಒಳಗೊಂಡ ಬ್ಯಾಲೆನ್ಸ್ಡ್ ಫುಡ್ ಸೇವನೆ.
ಫಿಟ್ನೆಸ್ ಸೂತ್ರ: 80% ಮನೆ ಊಟ / ಪೌಷ್ಟಿಕ ಆಹಾರ ಹಾಗೂ 20% ವ್ಯಾಯಾಮ ಮತ್ತು ವಿಶ್ರಾಂತಿ.
ರನ್ನಿಂಗ್ & ಗೋಲ್ಸ್: ವಾರದಲ್ಲಿ 4 ದಿನ ಮಸಲ್ ಟ್ರೈನಿಂಗ್ (Upper/Lower body split) ಮಾಡುವುದರ ಜೊತೆಗೆ, 2026 ರ ಜನವರಿಯಿಂದ ರನ್ನಿಂಗ್ ಅಭ್ಯಾಸ ಮಾಡಿಕೊಂಡಿದ್ದು, ಮ್ಯಾರಥಾನ್ ಹಾಗೂ 'ಹೈರಾಕ್ಸ್' (Hyrox) ಚಾಲೆಂಜ್‌ನಲ್ಲಿ ಪಾಲ್ಗೊಳ್ಳುವುದು ಅವರ ಮುಂದಿನ ಗುರಿಯಾಗಿದೆ.