ಉದಯ ಟಿವಿಯ 'ಭಾಗ್ಯವಂತರು' ಧಾರಾವಾಹಿಯಲ್ಲಿ ಈಶ್ವರಿ ತಾಯಿ ಗೌರಿ ನಿಧನರಾಗುವ ಅತ್ಯಂತ ಭಾವನಾತ್ಮಕ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಜೀವಂತ ಕಲಾವಿದೆಯನ್ನು ಚಿತೆಯ ಮೇಲೆ ಮಲಗಿಸಿ ಚಿತ್ರೀಕರಿಸಿದ ಈ ದೃಶ್ಯ ನೋಡಿ ವೀಕ್ಷಕರು ಭಾವುಕರಾಗಿದ್ದಾರೆ.
ಸನ್ ಉದಯ ಟಿವಿಯಲ್ಲಿ ಪ್ರಸಾರವಾಗುವ ಭಾಗ್ಯವಂತರು ಸೀರಿಯಲ್ ಮಹತ್ವದ ಘಟ್ಟವನ್ನು ತಲುಪಿದೆ. ಈಗಾಗಲೇ ತವರನ್ನು ಕಳೆದುಕೊಂಡು ಗಂಡನ ಮನೆಯಲ್ಲಿ ಕೈದಿಯಂತೆ ಜೀವನ ನಡೆಸುತ್ತಿರುವ ಈಶ್ವರಿ ತಾಯಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ತಾಯಿ ಸೀರಿಯಸ್ ಆಗಿರೋ ವಿಷಯ ತಿಳಿದು ಓಡೋಡಿ ಬಂದ ಈಶ್ವರಿ ಮುಂದೆ ಅಮ್ಮನ ಹೆಣವಿತ್ತು. ಹೆಣವಾಗಿ ಮಲಗಿದ ಅಮ್ಮನನ್ನು ನೋಡಿ ದಂಗಾದ ಈಶ್ವರಿ, ತಾಯಿ ಗೌರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಳು.
25
ನೂರಾರು ಕಮೆಂಟ್
ಅತ್ಯಂತ ಭಾವನಾತ್ಮಕ ದೃಶ್ಯ ಇದಾಗಿದ್ದು, ಈ ಚಿತ್ರೀಕರಣದ ಮೇಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಲಾವಿದರು ಬದುಕು ತುಂಬಾ ಕಷ್ಟ. ವಿಷ್ಣುವರ್ಧನ್ ಹೇಳಿದಂತೆ ತನ್ನ ಸಾವು ನೋಡುವ ಭಾಗ್ಯ ಕಲಾವಿದರಿಗೆ ಮಾತ್ರ ಸಿಗುತ್ತದೆ. ದಯವಿಟ್ಟು ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ. ನಿಮ್ಮ ಆಯಸ್ಸು ಇನ್ನು ಜಾಸ್ತಿ ಆಗಲಿ. ನೂರು ವರ್ಷಗಳ ಕಾಲ ಬದುಕಿ ಅಮ್ಮಾ ಎಂದು ಕಮೆಂಟ್ ಮಾಡಿದ್ದಾರೆ.
35
ವಿಡಿಯೋ ವೈರಲ್
ಈಶ್ವರಿ ತಾಯಿ ಗೌರಿ ಹೆಣವನ್ನು ಮಂಚದ ಮೇಲೆ ಹಾಕಲಾಗಿರುತ್ತದೆ. ಒಂದು ಬದಿಯಲ್ಲಿ ತನ್ನೊಂದಿಗೆ ಅರ್ಧಕ್ಕೂ ಹೆಚ್ಚು ಜೀವನವನ್ನು ಕಳೆದ ಸಂಗಾತಿಯನ್ನು ಕಳೆದುಕೊಂಡ ದುಃಖದಲ್ಲಿ ರಾಮಚಂದ್ರ ಕಣ್ಣೀರು ಹಾಕುತ್ತಿದ್ರೆ, ಓದಿದ್ರೂ ಏನನ್ನು ಮಾಡಲಾಗದ ಅಸಹಾಯಕಳಾಗಿ ಕಣ್ಣೀರಿಡುತ್ತಿರುವ ಈಶ್ವರಿ. ಈ ದೃಶ್ಯದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಈಶ್ವರಿ ತಾಯಿ ಗೌರಿ ಪಾತ್ರದ ಕಲಾವಿದೆ, ಹೆಣದಂತೆ ನಟಿಸಿದ್ದಾರೆ. ಹಾಗೆಯೇ ಜೀವಂತ ವ್ಯಕ್ತಿಯನ್ನು ಚಿತೆ ಮೇಲೆ ಮಲಗಿಸಲಾಗಿದೆ. ಸಾವು ಅನ್ನೋದು ಭಯ ಹುಟ್ಟಿಸೋ ಪದ. ಹಾಗಾಗಿ ಸಿನಿಮಾ/ಧಾರಾವಾಹಿಯಲ್ಲಿನ ಇಂತಹ ದೃಶ್ಯದ ಶೂಟಿಂಗ್ ವೇಳೆ ಕೆಲವೊಂದು ನಿಯಮಗಳನ್ನು ಅನುಸರಿಸಲಾಗುತ್ತದೆ. ಜೀವಂತ ವ್ಯಕ್ತಿಯನ್ನು ಚಿತೆ ಮೇಲೆ ಮಲಗಿಸುವ ಕೆಲವರು ಒಂದಿಷ್ಟು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ.
55
ಪುಟ್ಟಕ್ಕನ ಮಕ್ಕಳು
ಈ ಹಿಂದೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಚಿತ್ರೀಕರಣದ ವೇಳೆ ಇಂತಹ ಪೂಜೆ ಪುನಸ್ಕಾರಗಳನ್ನು ಮಾಡಲಾಗಿತ್ತು. ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಸಾವನ್ನಪ್ಪಿರುತ್ತಾಳೆ. ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರಕ್ಕೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಗಿತ್ತು. ಈ ವಿಡಿಯೋ ಸಹ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಭಾಗ್ಯವಂತರು ಸೀರಿಯಲ್ ಚಿತ್ರದ ಮೇಕಿಂಗ್ ವಿಡಿಯೋ ಮುನ್ನಲೆಗೆ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.