ಬಿಗ್‌ಬಾಸ್ 12ರ ವಿಜೇತ ಗಿಲ್ಲಿ ನಟನ ಬಗ್ಗೆ ಅಸಮಾಧಾನ ಹೊಂದಿದ್ದ ಅಶ್ವಿನಿ ಗೌಡ, ಇದೀಗ ತಮ್ಮ ನಿಲುವನ್ನು ಬದಲಿಸಿದಂತೆ ಕಾಣುತ್ತಿದೆ. ಇತ್ತೀಚೆಗೆ 'ಹಯಗ್ರೀವ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಗಿಲ್ಲಿ ನಟನನ್ನು 'ಮಾವನ ಮಗ' ಎಂದು ಸಂಬೋಧಿಸಿದ್ದಾರೆ.
ಅತ್ಯಧಿಕ ವೋಟ್ ಮೂಲಕ ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆ ಬರೆದಿರುವ ಬಿಗ್‌ಬಾಸ್ 12 (Bigg Boss 12) ಮುಗಿದು ಹಲವು ದಿನಗಳು ಕಳೆದರೂ, ಇನ್ನೂ ಕೆಲವು ಸ್ಪರ್ಧಿಗಳ ಜಗಳ ನಿಂತಿಲ್ಲ. ಅದರಲ್ಲಿಯೂ ಅಶ್ವಿನಿ ಗೌಡ ಅವರಿಗೆ ಗಿಲ್ಲಿ ನಟನ ಬಗ್ಗೆ ಇರುವ ವೈಮನಸ್ಸು ಸಾಕಷ್ಟು ಚರ್ಚೆಯಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣ, ಗಿಲ್ಲಿ ನಟ (Bigg Boss Gilli Nata) ವಿನ್ ಆದಾಗಿನಿಂದಲೂ ಭಾರಿ ಬೇಸರ ಹೊರಹಾಕುತ್ತಿರುವ, ನಾನೇ ವಿನ್ನಿಂಗ್ ಅಭ್ಯರ್ಥಿಯಾಗಿದೆ ಎನ್ನುತ್ತಿರುವ, ನನಗಿಂತ ಸ್ಟ್ರಾಂಗ್ ಅಭ್ಯರ್ಥಿ ಇದುವರೆಗೂ ಬಿಗ್‌ಬಾಸ್‌ಗೆ ಬಂದೇ ಇಲ್ಲ ಎನ್ನುತ್ತಲೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು ಅಶ್ವಿನಿ ಗೌಡ (Bigg Boss Ashwini Gowda).
26
ಕಾಮಿಡಿ ಷೋ ಅಲ್ಲ
ಬಿಗ್‌ಬಾಸ್ ಎನ್ನುವುದು ಕಾಮಿಡಿ ಷೋ ಅಲ್ಲ, ಅದು ವ್ಯಕ್ತಿತ್ವದ ಷೋ ಎನ್ನುವ ಮೂಲಕ ಗಿಲ್ಲಿನಟನ ಗೆಲುವಿಗೆ ಅಸಮಾಧಾನ ಹೊರಹಾಕಿದ್ದರು. ಬಡವನ ಸೋಗಿನಲ್ಲಿ ಎನ್ನುವ ಪದವನ್ನು ಪದೇ ಪದೇ ಬಳಸಿದ್ದರು. ಇದು ಗಿಲ್ಲಿ ನಟನ ಅಭಿಮಾನಿಗಳನ್ನು ಕೆರಳಿಸಿತ್ತು.
36
ಸ್ಪಷ್ಟನೆ ಕೊಟ್ಟಿದ್ದ ಅಶ್ವಿನಿ
ಕೊನೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅಶ್ವಿನಿ ಗೌಡ ಅವರು, ಗಿಲ್ಲಿ ಬಡವ ಎಂದು ನಾನು ಎಲ್ಲೂ ಹೇಳಿಲ್ಲ. ಬಿಗ್‌ಬಾಸ್ ಮುಗಿಯುತ್ತಿದ್ದಂತೆಯೇ ನನಗೆ ಮಾಧ್ಯಮಗಳಲ್ಲಿ ಸಂದರ್ಶನಕ್ಕೆ ಕರೆಯಲಾಯಿತು. ಆ ಸಂದರ್ಭದಲ್ಲಿ ನಾನು ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿದ್ದ ಚರ್ಚೆಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಿದ್ದೇ ಹೊರತು, ನಾನು ಗಿಲ್ಲಿಯ ಬಗ್ಗೆ ತಪ್ಪಾಗಿ ಏನೂ ಹೇಳಿಲ್ಲ. ನಾನು ಹೇಳಿದ ಮಾತುಗಳನ್ನು ಅರ್ಥ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದರು.
ಸದ್ಯ ಈ ವಿಷಯ ತಣ್ಣಗಾಗಿದೆ. ಅದೇನೇ ಇದ್ದರೂ ಗಿಲ್ಲಿ ನಟ ಮಾತ್ರ ಅಶ್ವಿನಿ ಗೌಡ ಅವರ ಬಗ್ಗೆ ಹೊರಗಡೆಯಲ್ಲಿ ಎದುರು ಮಾತನಾಡಿದ್ದೇ ಇಲ್ಲ. ತಮಾಷೆಯಾಗಿಯೇ ಮಾತನಾಡುತ್ತಾರೆ. ಇದೀಗ ಮಂಡ್ಯದಲ್ಲಿ ಅವರಿಬ್ಬರೂ ಮತ್ತೊಮ್ಮೆ ಮುಖಾಮುಖಿಯಾಗುವ ಘಟನೆ ನಡೆಯಿತು.
56
ಹಯಗ್ರೀವ ಚಿತ್ರದ ಟ್ರೈಲರ್ ಲಾಂಚ್
ಹಯಗ್ರೀವ ಚಿತ್ರದ (Hayagriva Movie) ಟ್ರೈಲರ್ ಲಾಂಚ್ ಸಮಾರಂಭಕ್ಕೆ ಇವರಿಬ್ಬರನ್ನೂ ಕರೆಸಲಾಗಿತ್ತು. ಆ ಸಮಯದಲ್ಲಿ ಮಂಡ್ಯದಲ್ಲಿ ಮಳೆ ಕೂಡ ಬಂತು. ಇದು ಶುಭ ಸಂಕೇತ ಎಂದು ಗಿಲ್ಲಿ ನಟ ಹೇಳಿದರು. ಇದೇ ವೇಳೆ ತಮಾಷೆಯಾಗಿ, ಅವರು ಅಶ್ವಿನಿ ಗೌಡ ಅವರನ್ನು ಉದ್ದೇಶಿಸಿ, ಈಗ ನಮ್ಮ ಅತ್ತೆ ಮಗಳು ಮಾತನಾಡುತ್ತಾರೆ ಎಂದಾಗ ಎಲ್ಲರೂ ಹೋ ಎಂದು ಜೋರಾಗಿ ಕೂಗಿದರು.
66
ಟ್ವಿಸ್ಟ್ ಕೊಟ್ಟ ಅಶ್ವಿನಿ ಗೌಡ
ಬಳಿಕ ಟ್ವಿಸ್ಟ್ ಎನ್ನುವಂತೆ ಅಶ್ವಿನಿ ಗೌಡ ಅವರು ಮಾತನಾಡಿದಾಗ, ಆರಂಭದಲ್ಲಿಯೇ ನನ್ನ ಮಾವನ ಮಗ ಇದಾಗಲೇ ಹೇಳಿದಂತೆ ಎಂದು ಶುರು ಮಾಡಿದಾಗ, ಅಬ್ಬಾ ಕೊನೆಗೂ ಅಶ್ವಿನಿ ಅವರಿಗೆ ಗಿಲ್ಲಿ ನಟನ ಮೇಲಿರುವ ಕೋಪ ಹೋಯ್ತಾ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆಟದಲ್ಲಿ ಎಲ್ಲವೂ ಸಹಜ. ಆದರೆ ಹೊರಗೆ ಬಂದ ಮೇಲೆ ಅದನ್ನೇ ಮುಂದುವರೆಸುವುದು ಚೆನ್ನಾಗಿರಲಿಲ್ಲ. ಇನ್ನಾದರೂ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಅಸಮಾಧಾನ ಹೊರಹಾಕದಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.