ಮಂಗಳೂರಲ್ಲಿ ಬರಿ ಓಳು ಹಾಡಿಗೆ ಡ್ಯಾನ್ಸ್ ಮಾಡ್ತಾ ಚಿಲ್ ಮಾಡ್ತಿದ್ದಾರೆ ಲಕ್ಷ್ಮೀ ಬಾರಮ್ಮ ಕೀರ್ತಿ… ಹಾಗಿದ್ರೆ ಸೀರಿಯಲ್ ಕಥೆ ಏನು?

First Published | Oct 19, 2024, 11:50 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ತನ್ವಿ ರಾವ್ ಅಂದ್ರೆ ವೀಕ್ಷಕರ ನೆಚ್ಚಿನ ಕೀರ್ತಿ, ಸದ್ಯ ತಮ್ಮ ಊರಾದ ಮಂಗಳೂರಲ್ಲಿ ಚಿಲ್ ಮಾಡುತ್ತಿದ್ದು, ಸೀರಿಯಲ್’ಗೆ ಮತ್ತೆ ಬರೋದಿಲ್ವ ಎನ್ನುವ ಅನುಮಾನ ಕಾಡುತ್ತಿದೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿಯಷ್ಟೇ ಪವರ್ ಫುಲ್ ಆಗಿರುವ ಪಾತ್ರ ಅಂದ್ರೆ ಅದು ಕೀರ್ತಿ ಪಾತ್ರ. ಅಚೆ ವಿಲನೂ ಅಲ್ಲದ , ಹೀರೋಯಿನ್ ಕೂಡ ಅಲ್ಲದೇ ತಮ್ಮ ಅದ್ಭುತ ಅಭಿನಯದ ಮೂಲಕವೇ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳನ್ನ ಅದ್ಭುತವಾಗಿ ನಿರ್ವಹಿಸಿದ ನಟಿ ತನ್ವಿ ರಾವ್. 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಯ ಕಥೆ ಏನಾಗಿದೆ ಅನ್ನೋದು ನಿಮಗೆ ಗೊತ್ತೆ ಇದೆ. ಕಾವೇರಿ ತನ್ನ ದಾರಿಗೆ ಅಡ್ಡ ಬಂದ ಕೀರ್ತಿ ಕಥೆಯನ್ನು ಮುಗಿಸಿದ್ದು ಆಗಿದೆ. ಇದಾದ ನಂತರ ಕೀರ್ತಿ ದೆವ್ವದ ರೂಪದಲ್ಲಿ ಬಂದು ಕಾವೇರಿಗೆ ಹಿಂಸೆ ಕೊಟ್ಟದ್ದು ಬಿಟ್ರೆ ಮತ್ತೆ ಕೀರ್ತಿಯನ್ನ ತೋರಿಸಿಯೇ ಇಲ್ಲ. ಕೀರ್ತಿ ಇವತ್ತು ಎಂಟ್ರಿಯಾಗ್ತಾರೆ, ನಾಳೆ ಎಂಟ್ರಿಯಾಗ್ತಾರೆ ಅಂತ ವೀಕ್ಷಕರು ಕಾದಿದ್ದೆ ಬಂತು, ತಿಂಗಳು ಒಂದು ಕಳೆದರೂ ಕೀರ್ತಿ ಪತ್ತೆ ಇಲ್ಲ. 
 

Tap to resize

ಇದೆಲ್ಲದರ ನಡುವೆ ಇದೀಗ ಕಳೆದ ಕೆಲವು ದಿನಗಳಿಂದ ಕೀರ್ತಿ ಆಲಿಯಾಸ್ ತನ್ವಿ ರಾವ್ (Tanvi Rao) ತಮ್ಮ ಊರಾದ ಮಂಗಳೂರಿನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಇವರ ಡ್ಯಾನ್ಸ್ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. 
 

ಮಂಗಳೂರಿನ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿರುವ ಶರಣ್ ಚಿಲಿಂಬಿ ಜೊತೆ ತನ್ವಿ ರಾವ್ ರಿಯಲ್ ಸ್ಟಾರ್ ಉಪೇಂದ್ರ ಅವರ ಬರಿ ಓಳು ಹಾಡಿಗೆ ನೃತ್ಯ ಮಾಡಿದ್ದು, ವಿಡಿಯೋ ತುಂಬಾನೆ ವೈರಲ್ (Viral Video) ಆಗ್ತಿದೆ. ತನ್ವಿ ರಾವ್ ಗ್ರೇಸ್ ಫುಲ್ ಡ್ಯಾನ್ಸ್ ನೋಡಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಡ್ತಿದ್ದಾರೆ. ಇಂತದ್ದು ಮತ್ತಷ್ಟು ವಿಡಿಯೋ ಬರಲಿ ಎಂದು ಆಶಿಸ್ತಿದ್ದಾರೆ. 
 

ಆದ್ರೆ ವೀಕ್ಷಕರಲ್ಲಿ ಮತ್ತೊಂದು ಅನುಮಾನ ಶುರುವಾಗಿದೆ, ಅದೇನಂದ್ರೆ, ಸದ್ಯಕ್ಕೆ ಕೆಲವು ದಿನಗಳಿಂದ ಬೆಂಗಳೂರು ಬಿಟ್ಟು ಮಂಗಳೂರಿನಲ್ಲಿ ದಿನ ಕಳೆಯುತ್ತಿರುವ ತನ್ವಿ ರಾವ್ ಮತ್ತೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳೋದಿಲ್ವಾ? ಹಾಗಿದ್ರೆ ಕೀರ್ತಿ ಕಥೆಯನ್ನ ನಿರ್ದೇಶಕರು ಅರ್ಧದಲ್ಲೇ ಮುಗಿಸಿ ಬಿಟ್ರಾ ಎನ್ನುವ ಅನುಮಾನ ಶುರುವಾಗಿ. 

ಕಾಮೆಂಟ್ ಗಳಲ್ಲೂ ಜನ ಕೀರ್ತಿ ಮೇಡಂ ದಯವಿಟ್ಟು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಾಪಾಸ್ ಬನ್ನಿ. ನಿಮ್ಮನ್ನ ನೋಡೋದಕ್ಕೆ ಕಾಯ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಸೀರಿಯಲ್ ನಲ್ಲಿ ನಿಮ್ಮನ್ನ ತುಂಬಾನೆ ಮಿಸ್ ಮಾಡ್ತಿದ್ದೀವಿ ಅಂತಾನೂ ಹೇಳಿದ್ದಾರೆ. 
 

ಇಲ್ಲಿವರೆಗೂ ಕೀರ್ತಿ ಪಾತ್ರ ಮುಗಿಸಿರುವ ಬಗ್ಗೆ ಸೀರಿಯಲ್ ತಂಡದಿಂದ ಆಗಲಿ, ನಟಿ ತನ್ವಿ ರಾವ್ ನಿಂದ ಆಗಲಿ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ನಟಿ ಮತ್ತೆ ಸೀರಿಯಲ್ ಗೆ ವಾಪಾಸ್ ಬಂದೇ ಬರ್ತಾರೆ ಎನ್ನುವ ನಂಬಿಕೆ ಕೂಡ ಜನರಿಗಿದೆ. ಆದರೆ ಯಾವಾಗ ಕೀರ್ತಿಯನ್ನ ಮತ್ತೆ ತೆರೆ ಮೇಲೆ ನೋಡ್ತಾರೆ, ಯಾವಾಗ ಕೀರ್ತಿ ಬಂದು ಕಾವೇರಿಯ ಎಲ್ಲಾ ಆಟಗಳನ್ನ ಬಯಲಿಗೆ ಎಳೆತಾರೆ ಅನ್ನೋದನ್ನ, ಇದು ಸಾಧ್ಯಾನಾ? ಅಥವಾ ವೀಕ್ಷಕರಿಗೆ ನಿರಾಸೆ ಆಗುತ್ತಾ? ಕಾದು ನೋಡಬೇಕು. 
 

Latest Videos

click me!