ಅಮ್ಮನ ಮಡಿಲಲ್ಲಿ ಆಡ್ತಿರೋ ಈ ಮುದ್ದು ಮಗು ಈಗ ಕಿರುತೆರೆ ನಟಿ.. ಯಾರು ಗೆಸ್ ಮಾಡಿ.. ಈಕೆ ಗಂಡ ಕೂಡ ನಟ!

Published : Oct 18, 2024, 04:21 PM ISTUpdated : Oct 20, 2024, 08:47 AM IST

ಅಮ್ಮನ ಮಡಿಲಲ್ಲಿ ಆಡ್ತಿರೋ ಈ ಮುದ್ದು ಮುದ್ದಾದ ಮಗು ಯಾರು ಅಂತ ಗೆಸ್ ಮಾಡ್ತೀರಾ? ಒಂದು ಕ್ಲೂ ಕೊಡ್ತೀವಿ.. ಇವರು ಕಿರುತೆರೆ ನಾಯಕಿ. ಇವರ ಗಂಡ ಕೂಡ ನಟ.   

PREV
17
ಅಮ್ಮನ ಮಡಿಲಲ್ಲಿ ಆಡ್ತಿರೋ ಈ ಮುದ್ದು ಮಗು ಈಗ ಕಿರುತೆರೆ ನಟಿ.. ಯಾರು ಗೆಸ್ ಮಾಡಿ..  ಈಕೆ ಗಂಡ ಕೂಡ ನಟ!

ಅಮ್ಮನ ಮಡಿಲಲ್ಲಿ ಕುಳಿತು, ಬಾಯ್ತುಂಬ ನಗುತ್ತಿರುವ ಈ ಚಬ್ಬಿ ಬೇಬಿ ಯಾರು ಗೊತ್ತಾ? ಇವರು ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಹಿಂದೆ ಝೀ ಕನ್ನಡಲ್ಲಿ ನಟಿಸುತ್ತಿದ್ದ ಇವರು, ಇದೀಗ ಸ್ಟಾರ್ ಸುವರ್ಣ ವಾಹಿನಿಯ (Star Suvarna) ಸೀರಿಯಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇವರ ಗಂಡ ಕೂಡ ಜನಪ್ರಿಯ ನಟ ಯಾರು ಗೊತ್ತಾಯ್ತ? 
 

27

ನಿಮಗೆ ಈಗಾಗಲೇ ಗೊತ್ತಯ್ತು ಅಂದುಕೊಂದಿದ್ದೀನಿ. ಗೊತ್ತಾಗಿಲ್ಲ ಅಂದ್ರೆ ನಾವೆ ಹೇಳ್ತೀವಿ ಕೇಳಿ. ಈ ಫೋಟೊದಲ್ಲಿ ಕಾಣಿಸ್ತಿರೋ ಮುದ್ದು ಮಗು ಪ್ರಿಯಾ ಆಚಾರ್ (Priya J Achar), ಅವರು ತಮ್ಮ ಅಮ್ಮನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಮ್ಮನ ಮಡಿಲಲ್ಲಿ ಕುಳಿತಿರುವ ಫೋಟೊ ಹಾಕಿ ಅಮ್ಮನಿಗೆ ವಿಶ್ ಮಾಡಿದ್ದಾರೆ. 
 

37

ಬಾಲ್ಯದ ಎರಡು ಫೋಟೊಗಳ (childhood photo) ಜೊತೆಗೆ ನಟಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮುದ್ದಮ್ಮ ಎಂದು ಬರೆದುಕೊಂಡು. ಅವಳ ಒಲವ ನಗೆ, ಅವಳ ಮೊಗ ಸಿರಿಗೆ, ಅಂದದ..ಬಿಂದಿಗೆ ಎನ್ನುವ ಸಾಲುಗಳನ್ನು ಕೂಡ ಬರೆದಿದ್ದಾರೆ. ಪ್ರಿಯಾ ಈವಾಗ ಎಷ್ಟು ಮುದ್ದಾಗಿದ್ದಾರೋ, ಬಾಲ್ಯದಲ್ಲಿ ಕೂಡ ಅಷ್ಟೇ ಮುದ್ದಾಗಿದ್ದರು ಅಲ್ವಾ? 
 

47

ಪ್ರಿಯಾ ಆಚಾರ್ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ (Gattimela) ಧಾರಾವಾಹಿಯಲ್ಲಿ ಅಮೂಲ್ಯ ತಂಗಿ ಪಾತ್ರದಲ್ಲಿ ತುಂಬಾನೆ ಮುದ್ದಾಗಿ ನಟಿಸಿದ್ದರು. ಸದ್ಯ ನಟಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ನಾಯಕಿ ಕಾವೇರಿಯಾಗಿ ನಟಿಸುತ್ತಿದ್ದಾರೆ. 
 

57

ಇನ್ನು ಪ್ರಿಯಾ ಆಚಾರ್ ಪತಿ ಯಾರು ಅನ್ನೋದು ಗೊತ್ತೇ ಇದೆ ಅಲ್ವಾ? ಇವರ್ ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚಿದ ನಟ ಸಿದ್ಧು ಮೂಲಿಮನಿ (Siddu Moolimani) ಅವರನ್ನ ಪ್ರೀತಿಸಿ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಜೊತೆಯಾಗಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. 

67

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಪ್ರಿಯಾ ಆಚಾರ್ ಹೆಚ್ಚಾಗಿ ತಮ್ಮ ಫೋಟೊ ಶೂಟ್, ಗಂಡನ ಜೊತೆಗೆ ರೀಲ್ಸ್, ಶೂಟಿಂಗ್ ಸೆಟ್ ನಲ್ಲಿ ರೀಲ್ಸ್, ಜೊತೆಗೆ ವಿವಿಧ ರೀತಿಯ ವ್ಲಾಗ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ. ಇವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಸಹ ಇದ್ದಾರೆ. 
 

77

ಪ್ರಿಯಾ ಪತಿ ಸಿದ್ಧು ಸ್ಯಾಂಡಲ್ ವುಡ್ ನಲ್ಲಿ (Sandalwood) ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ. ಪ್ರಿಯಾ ಕೂಡ ಒಂದು ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಧಮಾಕ ಸಿನಿಮಾದಲ್ಲಿ ಪತಿ ಸಿದ್ಧು ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಇವರಿಬ್ಬರ ಡುಯೆಟ್ ಹಾಡು ನಾನು ಹೋಗೋಕು ಮೊದ್ಲು ಸಖತ್ ಟ್ರೆಂಡ್ ಆಗಿತ್ತು. 
 

Read more Photos on
click me!

Recommended Stories