ಬಾತ್‌ ಟಬ್‌ನಲ್ಲಿ ಕಾಲೆತ್ತಿ ಕುಳಿತ ಬಿಗ್ ಬಾಸ್ ಅನುಷಾ ರೈ; ಫೋಟೋ ವೈರಲ್!

First Published | Oct 19, 2024, 11:23 AM IST

ವಿಭಿನ್ನ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿಸಿದ ಅನುಷಾ ರೈ. ಬಾಟ್ ಟಬ್‌ ಎಲ್ಲಿಂದ ಬಂತು ಅನ್ನೋದು ಜನರ ಪ್ರಶ್ನೆ.....

 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ 5ನೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್‌ ಸುಂದರಿ ಅನುಷಾ ರೈ.

ಮಹಾನುಭಾವರು ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಅನುಷಾ..ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್,ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ ಮತ್ತು ಅಬ್ಬಬ್ಬ ಸಿನಿಮಾದಲ್ಲಿ ನಟಿಸಿದ್ದಾರೆ.

Tap to resize

ಸಿನಿಮಾ ಮಾತ್ರವಲ್ಲದೆ ನಾಗಕನ್ನಿಕೆ ಮತ್ತು ರಾಜಕುಮಾರಿ ಸೀರಿಯಲ್‌ನಲ್ಲಿ ನಟಿಸಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಷಾ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಅನುಷಾ ರೈ ಬಾತ್ ಟಬ್‌ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ಪ್ರತಿಯೊಬ್ಬರಲ್ಲೂ ರಾಣಿ ಇದ್ದಾಳೆ..ನಿಮ್ಮನ್ನು ನೀವು ಪ್ರಶ್ನೆ ಮಾಡಿದರೆ ಉತ್ತರ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. 

ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಅನುಷಾ ರೈ ನರಕಕ್ಕೆ ಕಾಲಿಡುತ್ತಾರೆ. ಅಲ್ಲಿ ಸರಿಯಾಗಿ ಊಟ ಸಿಗದೆ ಕಷ್ಟ ಪಡುತ್ತಾರೆ ಅಲ್ಲದೆ ಬಾತ್‌ರೂಮ್ ವ್ಯವಸ್ಥೆ ಕೂಡ ಸರಿಯಾಗಿ ಇರಲಿಲ್ಲ. 

ಈಗ ನರಕದಿಂದ ಸ್ವರ್ಗಕ್ಕೆ ಎಂಟ್ರಿ ಕೊಟ್ಟ ಮೇಲೆ ಅನುಷಾ ಮತ್ತು ಧರ್ಮ ಕೀರ್ತಿ ರಾಜ್‌ ಅವರ ನಡುವೆ ಇಷ್ಟು ವರ್ಷದಿಂದ ಇದ್ದ ಪ್ರೀತಿಯನ್ನು ರಿವೀಲ್ ಮಾಡಿದ್ದರು. ಬ್ರೇಕಪ್ ಆಗಿದೆ ಎಂದು ಕೂಡ ಹೇಳಿಕೊಂಡಿದ್ದರು. 

Latest Videos

click me!