ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಸ್ಪರ್ಧಿಗಳಿಗೆ ಕಿವಿಮಾತು ಹಾಗೂ ಎಚ್ಚರಿಕೆ ಕೊಟ್ಟಿದ್ದಾರೆ. ಇದಾಗಲೇ ಅವರು, ವರ್ತೂರು ಸಂತೋಷ್ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. . ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ಪೆನ್ಡ್ರೈವ್ ಸಿನಿಮಾದಲ್ಲಿಯೂ ಸಕತ್ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
28
ಸ್ಪರ್ಧಿಗಳಿಗೆ ತನಿಷಾ ಕಿವಿಮಾತು
ಇದೀಗ ತನಿಷಾ ಕುಪ್ಪಂಡ ಅವರು Bigg Boss ಮನೆಯೊಳಕ್ಕೆ ಹೋಗುವ ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ. ನ್ಯೂಸ್ ಬೀಟ್ ಕನ್ನಡ ಚಾನೆಲ್ನಲ್ಲಿ ಅವರು ಈ ವಿಷಯವಾಗಿ ಮಾತನಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಏನು ಬೇಕಾದ್ರೂ ಏರುಪೇರು ಆಗಬಹುದು. ಆದ್ದರಿಂದ ಯಾವಾಗಲೂ ಸತ್ಯವನ್ನೇ ಹೇಳಿ ಎನ್ನುವುದು ಆ ಎಚ್ಚರಿಕೆ ಜೊತೆಗೆ ಕಿವಿಮಾತು ಕೂಡ.
38
ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ
ಇನ್ನು ತನಿಷಾ ಮತ್ತು ಬಿಗ್ಬಾಸ್ ಕುರಿತು ಹೇಳುವುದಾದರೆ, ಬಿಗ್ಬಾಸ್ ಸೀಸನ್ 10ರಲ್ಲಿ ಭಾರಿ ಸದ್ದು ಮಾಡಿದ್ದವರ ಪೈಕಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ ಕೂಡ ಒಂದು. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಬಳಿಕ ಇಬ್ಬರ ಮನಸ್ಸಲ್ಲಿ ಪ್ರೀತಿ ಅರಳಿದೆ ಎನ್ನುವ ಗಾಸಿಪ್ ಹಬ್ಬಿತ್ತು. ಇತರ ಸ್ಪರ್ಧಿಗಳು ಕೂಡ ಇವರಿಬ್ಬರ ಬಗ್ಗೆ ಸಾಕಷ್ಟು ಮಾತನಾಡಿಕೊಳ್ತಿದ್ರು.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಈ ಜೋಡಿಯ ಮೇಲೆ ಎಲ್ಲರ ಕಣ್ಣು ಇದ್ದೇ ಇದೆ. ಇವರು ಸ್ನೇಹಿತರಾಗಿ ಮುಂದುವರೆದಿದ್ದರು. ಅನೇಕ ಬಾರಿ ಭೇಟಿ ಕೂಡ ಆಗಿದ್ದಾರೆ. ಆಗಾಗ ಇಬ್ಬರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಆದ್ದರಿಂದ ಇವರ ನಡುವಿನ ಸಂಬಂಧದ ಬಗ್ಗೆ ಹಲವಾರು ರೀತಿ ಸುದ್ದಿ ಹರಡಿಕೊಂಡದ್ದು ಇದೆ.
58
ಮದುವೆಯ ಬಗ್ಗೆ ತನಿಷಾ
ಈ ಬಗ್ಗೆ ತನಿಷಾ ಅವರಿಗೆ ಕಂಟೆಂಟ್ ಕ್ರಿಯೇಟರ್ ಒಬ್ಬರು ಪ್ರಶ್ನೆ ಕೇಳಿದ್ದರು. ವರ್ತೂರು ಸಂತೋಷ್ ಮದುವೆಯ ಬಗ್ಗೆ ಕೇಳಿದಾಗ ಗರಂ ಆದ ತನಿಷಾ, ನಾನೇನಾದ್ರೂ ಅವರನ್ನು ಮದ್ವೆಯಾಗ್ತೇನೆಂದು ಹೇಳಿದ್ನಾ, ಇಲ್ವಲ್ಲಾ ಮತ್ತೆ ಅವ್ರ ಮದುವೆಯ ಬಗ್ಗೆ ನನಗ್ಯಾಕೆ ಕೇಳ್ತೀರಿ. ಅದು ಅವರ ಬಳಿಯೇ ಕೇಳಿ ಎಂದಿದ್ದಾರೆ. ಬೇರೆಯವರ ವಿಷ್ಯ ನನಗೇನು ಎಂದು ಪ್ರಶ್ನಿಸಿದ್ದರು.
68
ಮಕ್ಕಳ ಆಸೆ ವ್ಯಕ್ತಪಡಿಸಿದ್ದ ನಟಿ
ಮದುವೆ, ಮನೆ, ಸಂಸಾರ ಎನ್ನುವುದು ನನಗೆ ತುಂಬಾ ಖುಷಿ. ಅಮ್ಮಾ ಎನಿಸಿಕೊಳ್ಳಬೇಕು ಎನಿಸುತ್ತಿದೆ. ನನ್ನನ್ನು ನನಗಿಂತಲೂ ಚೆನ್ನಾಗಿ ಯಾರಾದರೂ ನೋಡಿಕೊಳ್ಳುವವರು ಇದ್ದರೆ ನಾನು ಮದುವೆಯಾಗಲು ರೆಡಿ ಇದ್ದೇನೆ. ಗೃಹಿಣಿಯಾಗಿ ಬಾಳಬೇಕು. ಮಕ್ಕಳನ್ನು ಮಾಡಿಕೊಂಡು ಅವರಿಗೆ ರೆಡಿ ಮಾಡಿ ಕಳುಹಿಸಬೇಕು ಎಂದಿರುವ ನಟಿ, ನನ್ನ ಅಮ್ಮನೇ ನನಗೆ ಸರ್ವಸ್ವ. ಆದ್ದರಿಂದ ನನ್ನ ಅಮ್ಮನ ಜೊತೆ ಇರುವವರು ಇದ್ದರೆ ತುಂಬಾ ಒಳ್ಳೆಯದು. ಅದನ್ನು ಬಿಟ್ಟರೆ, ಬೇರೇನೂ ಆಸೆ ಇಲ್ಲ ಎಂದು ಹೇಳಿದ್ದಾರೆ.
78
ಪ್ರೀತಿ ವಿಚಾರದಲ್ಲಿ ನೋವು
ಅಷ್ಟಕ್ಕೂ ತನಿಷಾ ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ತನಿಷಾ ಒಬ್ಬರನ್ನು ಪ್ರೀತಿಸುತ್ತಿದ್ದರು. ಅದರ ಬಗ್ಗೆಯೂ ಇದೇ ಷೋನಲ್ಲಿ ಹೇಳಿಕೊಂಡಿರೋ ನಟಿ, ಆತನನ್ನು ತುಂಬಾ ಇಷ್ಟಪಟ್ಟಿದ್ದೆ. ಅವರನ್ನೇ ಮದುವೆಯಾಗುವ ಯೋಚನೆ ಮಾಡಿದ್ದೆ ಎಂದಿದ್ದರು. ಆದರೆ, ಅವರಿಬ್ಬರ ನಡುವೆ ಬಿರುಕು ಶುರುವಾದದ್ದು, ಆ ಯುವಕ, 'ನಿನಗೆ ನಾನು ಮುಖ್ಯನಾ ಧಾರಾವಾಹಿ ಮುಖ್ಯನಾ' ಕೇಳಿದಾಗ. ನಟನೆ ಎಂದರೆ ಪಂಚಪ್ರಾಣವಾಗಿದ್ದ ತನಿಷಾ ತನ್ನ ಹುಡುಗನಿಗಾಗಿ ನಟನೆಯನ್ನೂ ಬಿಡಲು ರೆಡಿ ಆಗಿದ್ದರು. ಬಿಟ್ಟರು ಕೂಡ.
88
ಕಿರಿಕ್ ಶುರು
ನಟನೆ ಬಿಟ್ಟು ಮತ್ತೆ ಹುಡುಗನ ಬಳಿ ಹೋದಾಗ ಮತ್ತೆ ಕಿರಿಕ್ ಶುರುವಾಗಿತ್ತು. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ, ಕೊನೆಗೆ ಯುವಕನ ಜೊತೆ ಬ್ರೇಕಪ್ ಆದರು. ಈಗ ಮತ್ತೆ ಬದುಕು ಕಟ್ಟಿಕೊಳ್ಳುವ ಆಸೆ ಅವರಿಗೆ. ಅದಕ್ಕಾಗಿಯೇ ಈಗ ಮದುವೆ, ಮನೆ, ಕುಟುಂಬದ ಆಸೆಯನ್ನು ನಟಿ ವ್ಯಕ್ತಪಡಿಸಿದ್ದಾರೆ.