ಮಹಾನಟಿ ವೇದಿಕೆಯಲ್ಲಿ ನಿರೂಪಕಿ ಅನುಶ್ರೀಯದ್ದೇ ಹವಾ. ಜೀ ಕನ್ನಡದ ಮನೆಮಗಳು ಅನುಶ್ರೀ ಮದುವೆಯಾಗಿ ವಾರದಲ್ಲೇ ನಿರೂಪಣೆಯಲ್ಲಿ ತೊಡಗಿದ್ದಾರೆ. ತಾಳಿ, ಕಾಲುಂಗುರ ಧರಿಸಿ ವೇದಿಕೆಗೆ ಬಂದ ಅನುಶ್ರೀಯನ್ನು ಜನ ಮೆಚ್ಚಿಕೊಂಡಿದ್ದರು. ಆದರೆ ಇದೀಗ ವೀಕ್ಷಕರು ಅನುಶ್ರೀ ಮೇಲೆ ಮುನಿಸಿಕೊಂಡಿದ್ದಾರೆ.
ಕನ್ನಡದ ಜನಪ್ರಿಯ ನಿರೂಪಕಿ, ಜೀ ಕನ್ನಡದ ಮನೆಮಗಳು ಅಂತಾನೆ ಫೇಮಸ್ ಆಗಿರುವ ಅನುಶ್ರೀ ತಿಂಗಳ ಹಿಂದಷ್ಟೇ ತಮ್ಮ ಗೆಳೆಯ ರೋಶನ್ ಜೊತೆ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
27
ಅನುಶ್ರೀ ಮದುವೆ
ಕರ್ನಾಟಕದ ಜನತೆಯ ಫೇವರಿಟ್ ನಿರೂಪಕಿಯಾಗಿರುವ ಆಂಕರ್ ಅನುಶ್ರೀ ಮದುವೆಯನ್ನು ನೋಡಿ ಕನ್ನಡಿಗರು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಮದುವೆಯಾದ ನಂತರದ ದಿನಗಳಲ್ಲೂ ಅನುಶ್ರೀ ತಾಳಿ, ಕಾಲುಂಗುರ ನೋಡಿ, ಎಷ್ಟು ಬೆಳೆದರೂ ಸಂಪ್ರದಾಯ ಬಿಟ್ಟಿಲ್ಲ ಎಂದು ಮೆಚ್ಚಿಕೊಂಡಿದ್ದರು ಜನ.
37
ಮದುವೆಯಾಗಿ ವಾರದೊಳಗೆ ನಿರೂಪಣೆ
ನಿರೂಪಕಿ ಅನುಶ್ರೀಯವರು ಮದುವೆಯಾಗಿ ಒಂದು ವಾರದಲ್ಲೇ ಕುತ್ತಿಗೆಯಲ್ಲಿ ಮಾಂಗಲ್ಯ ಸರ, ಕಾಲಲ್ಲಿ ಉಂಗುರ ಧರಿಸಿ, ಥೇಟ್ ಮದುಮಗಳಂತೆ ಮಹಾನಟಿ ವೇದಿಕೆ ಏರಿದ್ದರು. ಈ ಸಂದರ್ಭದಲ್ಲಿ ಅನುಶ್ರೀಗೆ ಮಡಿಲು ತುಂಬಿಸಿ, ಹಾಡನ್ನು ಹಾಡಲಾಗಿತ್ತು.
ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಮಹಾನಟಿ ಪ್ರೊಮೋದಲ್ಲಿ ನವರಾತ್ರಿ ಸಂಭ್ರಮ ನಡೆಯುತ್ತಿದ್ದು, ಈ ಸಂದರ್ಭ ನವದುರ್ಗೆಯರ ನೃತ್ಯ ವೈಭವ, ನಿಶ್ವಿಕಾ ನಾಯ್ದು ನಾಟ್ಯದ ಜಲಕ್ ತೋರಿಸಲಾಗಿದೆ. ಇವರ ಜೊತೆ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಮಿಂಚಿದ್ದಾರೆ.
57
ಕೆಂಪು ಲೆಹೆಂಗಾದಲ್ಲಿ ಅನುಶ್ರೀ
ಅನುಶ್ರೀ ಕೆಂಪು ಬಣ್ಣದ ಲೆಹೆಂಗಾ ಧರಿಸಿ, ಆಭರಣಗಳಿಂದ ಅಲಂಕೃತಗೊಂಡು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಆದರೆ ವೀಕ್ಷಕರು ಮಾತ್ರ ವಿಡೀಯೊ ನೋಡಿ ತಮ್ಮ ನೆಚ್ಚಿನ ಆಂಕರ್ ವಿರುದ್ಧ ಮುನಿಸಿಕೊಂಡಿದ್ದಾರೆ.
67
ವೀಕ್ಷಕರ ಮುನಿಸಿಗೆ ಕಾರಣ ಏನು?
ಸದ್ಯ ಬಿಡುಗಡೆಯಾಗಿರುವ ವಿಡೀಯೋದಲ್ಲಿ ಅನುಶ್ರೀ ತಾಳಿಸರ ಧರಿಸಿಲ್ಲ. ಇದನ್ನು ನೋಡಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಕಳೆದ ಎರಡು ವಾರಗಳಿಂದ ಅನುಶ್ರೀ ತಾಳಿ ಧರಿಸಿದ್ದನ್ನು ನೋಡಿ, ನಮ್ಮ ಸಂಪ್ರದಾಯದ ಹೆಣ್ಣು ಮಗಳು ಎಂದು ಖುಷಿ ಪಟ್ಟಿದ್ದ ಜನ, ಇದೀಗ ನಿರೂಪಕಿ ತಾಳಿ ಹಾಕದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
77
ಯಾಕೆ ಅಕ್ಕ ಹೀಗೆ ಮಾಡಿದ್ರಿ ಅಂತಿದ್ದಾರೆ ಫ್ಯಾನ್ಸ್
ಮದುವೆಯಾಗಿ ಒಂದು ತಿಂಗಳೂ ಆಗಿಲ್ಲ, ಇಷ್ಟು ಬೇಗ ತಾಳಿ ತೆಗೆದಿಟ್ಟಿದ್ದು ಸರಿಯಲ್ಲ, ಇನ್ನು ಒಂದು ವರ್ಷಗಳವರೆಗಾದರೂ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಇದು ಮದುವೆಗೂ ಮುನ್ನವೇ ಶೂಟಿಂಗ್ ಆಗಿರಬೇಕು, ಅದಕ್ಕೆ ತಾಳಿ ಹಾಕಿಲ್ಲ ಎಂದು ಬೆಂಬಲವನ್ನೂ ಸಹ ಸೂಚಿಸಿದ್ದಾರೆ.