ಲವ್​ ಬ್ರೇಕಪ್​: Bigg Bossನಲ್ಲಿ ಟ್ಯಾಲೆಂಟ್​ ಷೋನಲ್ಲಿ ವಿ*ಷ ಕುಡಿದು ಬೆಚ್ಚಿಬೀಳಿಸಿದ ಸ್ಪಂದನಾ ಸೋಮಣ್ಣ!

Published : Nov 26, 2025, 06:21 PM IST

ಬಿಗ್​ಬಾಸ್​ ಮನೆಗೆ ಮಾಜಿ ಸ್ಪರ್ಧಿಗಳ ಆಗಮನದಿಂದ ಮನರಂಜನೆ ಹೆಚ್ಚಾಗಿದೆ. ಈ ನಡುವೆ, ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ವಿಷ ಕುಡಿಯುವ ಸ್ಕಿಟ್‌ನಲ್ಲಿ ಅದ್ಭುತವಾಗಿ ನಟಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದರು. ಮೈಸೂರಿನ ಇಂಜಿನಿಯರಿಂಗ್ ಪದವೀಧರೆಯಾದ ಸ್ಪಂದನಾ, 'ಕರಿಮಣಿ' ಸೀರಿಯಲ್ ಮೂಲಕ ಮನೆಮಾತಾದವರು.

PREV
16
ಮಾಜಿ ಸ್ಪರ್ಧಿಗಳ ಎಂಟ್ರಿ

ಬಿಗ್​ಬಾಸ್​ (Bigg Boss) ಮನೆಯಲ್ಲಿ ಈಗ ಮಾಜಿ ಸ್ಪರ್ಧಿಗಳ ಎಂಟ್ರಿಯಾಗಿದೆ. ಬಿಗ್​ಬಾಸ್​ ಮನೆ ಮನರಂಜನೆಯ ತಾಣವಾಗಿದೆ. ಎಲ್ಲರನ್ನೂ ತಮ್ಮಲ್ಲಿರುವ ಟ್ಯಾಲೆಂಟ್​ಗಳನ್ನು ತೋರಿಸುತ್ತಿದ್ದಾರೆ..

26
ದಿಗ್ಭ್ರಮೆಗೊಳಿಸಿದ ಸ್ಪಂದನಾ

ಇದರ ನಡುವೆಯೇ ಹಾಲಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Bigg Boss Spandana Somanna) ವಿ*ಷ ಕುಡಿದು ಅಲ್ಲಿಯೇ ಬಿದ್ದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದರು. ಪ್ರೀತಿಸಿದ ಕೈಕೊಟ್ಟಾಗ ಪ್ರೇಯಸಿಯೊಬ್ಬಳು ವಿ*ಷ ಕುಡಿವ ದೃಶ್ಯವನ್ನು ಸ್ಪಂದನಾ ಸೋಮಣ್ಣ ಅದ್ಭುತವಾಗಿ ನಟಿಸಿ ತೋರಿಸಿದರು.

36
ಉಸಿರು ಬಿಗಿಹಿಡಿದ ವಾತಾವರಣ

ಸ್ಪಂದನಾ ಹೇಳಿ ಕೇಳಿ ನಟಿ. ನಟನೆಯಲ್ಲಿ ಪಳಗಿದವರು. ಇನ್ನು ಕೇಳಬೇಕೆ? ಈ ದೃಶ್ಯವನ್ನು ಮಾಡುತ್ತಿದ್ದಾಗ ಪ್ರತಿಯೊಬ್ಬರೂ ಭಾವುಕರಾಗಿ ಇದನ್ನು ನೋಡುತ್ತಿದ್ದರು. ಸ್ಪಂದನಾ ನಿಜವಾಗಿಯೂ ವಿ*ಷ ಸೇವನೆ ಮಾಡಿ ಸತ್ತುಬಿದ್ದಂತೆ ನಟಿಸಿದಾಗ ಎಲ್ಲರೂ ಉಸಿರನ್ನು ಬಿಗಿಹಿಡಿದು ಅದನ್ನು ನೋಡಿದರು.

46
ಮನಮುಟ್ಟುವ ಸ್ಕಿಟ್​

ಕೊನೆಗೆ ಅಲ್ಲಿಯೇ ಸತ್ತಾಗ ಈ ಸ್ಕಿಟ್​ ಭಾಗವಾಗಿ ಬಂದ ಧನುಷ್​ ಆಕೆಯ ಶ*ವದ ಬಳಿ ರೋಧಿಸುತ್ತಿರುವ ದೃಶ್ಯವೂ ಮನಮುಟ್ಟುವಂತಿತ್ತು.

56
ಬಣ್ಣದ ಲೋಕದ ಸೆಳೆತ

ಇನ್ನು ಸ್ಪಂದನಾ ಕುರಿತು ಹೇಳುವುದಾದರೆ, ಅವರಿಗೆ ತಮ್ಮ ಸ್ಕೂಲು ದಿನಗಳಿಂದಲೂ ಬಣ್ಣದ ಬದುಕಿನ ಸೆಳೆತ ಬೆನ್ನುಬಿದ್ದಿತ್ತು. ಶಾಲಾದಿನಗಳಲ್ಲೇ ಬಣ್ಣ ಹಚ್ಚಿ ಸ್ಟೇಜ್‌ಗಳಲ್ಲಿ ಡಾನ್ಸ್‌-ನಾಟಕ ಹೀಗೆ ಮಿಂಚುತ್ತಿದ್ದರಂತೆ. ತಂದೆ ಇಂಜಿನಿಯರ್ ಆಗೀರೋ ಕಾರಣಕ್ಕೋ ಏನೋ ಎನ್ನುವಂತೆ ಇವರೂ ಕೂಡ ಇಂಜಿನಿಯರಿಂಗ್ ಪಡದವಿ ಪಡೆದರಾದರೂ ಮುಂದೆ ಓದಲು ಅಥವಾ ಅದೇ ವೃತ್ತಿಯಲ್ಲಿ ಸಾಗಲು ಮನಸ್ಸು ಒಪ್ಪಲಿಲ್ಲ.

66
ಕರಿಮಣಿ ಸೀರಿಯಲ್​

ಮೈಸೂರಿನವರಾದ ಇವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ನಂತರ ನಟನೆಗೆ ಬರುವ ಮೊದಲು ಪುಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸೀರಿಯಲ್ಹಾಗೂ ಸಿನಿಮಾಗಳ ಮೂಲಕ ಚಿಕ್ಕಪುಟ್ಟ ಪಾತ್ರಗಳಿಂದ ಪ್ರಾರಂಭಿಸಿ, ಬಳಿಕ ಕಲರ್ಸ್ ಕನ್ನಡದ 'ಕರಿಮಣಿ' ಸೀರಿಯಲ್ ಮೂಲಕ ಅವರು ಕರ್ನಾಟಕದಲ್ಲಿ ಮನೆಮಾತಾದರು.

Read more Photos on
click me!

Recommended Stories