ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ವಿದೇಶಕ್ಕೆ ಟೂರ್ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ವಿದೇಶದಲ್ಲಿದ್ದು, ಫೋಟೊ ಶೇರ್ ಮಾಡ್ತಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಫೋಟೊ ಕ್ಲಿಕ್ ಮಾಡಿರೋರು ಯಾರು ಗೊತ್ತು ಅಂದಿದ್ದಾರೆ.
ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸದ್ಯ ಸೀರಿಯಲ್ ಗೆ ಕೊಂಚ ಬ್ರೇಕ್ ಕೊಟ್ಟು ವಿದೇಶ ಸುತ್ತೋಕೆ ಹೋಗಿದ್ದಾರೆ, ಕಳೆದ ಕೆಲವು ದಿನಗಳಿಂದ ವಿದೇಶದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
28
ವಿಯೆಟ್ನಾಂನಲ್ಲಿ ನಮ್ರತಾ
ನಟಿ ಸ್ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೊಗಳನ್ನು ನೋಡಿದ್ರೆ, ನಮ್ರತಾ ವಿಯೆಟ್ನಾಂಗೆ ಹೋದಂತಿದೆ. ಅಲ್ಲಿನ ಸುಂದರವಾದ ಹಾದಿ ಬೀದಿಯಲ್ಲಿ, ಪ್ರವಾಸಿ ತಾಣಗಳಲ್ಲಿ ನಟಿ ಎಂಜಾಯ್ ಮಾಡ್ತಿದ್ದಾರೆ.
38
ಫೋಟೋಸ್ ವೈರಲ್
ನಮ್ರತಾ ಗೌಡ ಅವರು ಕಳೆದ ಮೂರು ದಿನಗಳಿಂದ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸೋಶಿಯಲ್ ಮೀಡೀಯಾದಲ್ಲಿ ನಮ್ರತಾ ಫೋಟೊಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳೂ ಇಷ್ಟೊಂದು ಸುಂದರವಾದ ಫೋಟೊಗಳನ್ನು ತೆಗೆದಿರೋದು ಯಾರು ಅಂತ ನಮಗೆ ಗೊತ್ತಾಗಿದೆ ಎಂದಿದ್ದಾರೆ.
58
ಕಾರ್ತಿಕ್ ಜೊತೆ ಹೋಗಿದ್ರಾ ನಮ್ರತಾ
ಅಭಿಮಾನಿಗಳ ಪ್ರಕಾರ ಈ ಫೋಟೊಗಳನ್ನೆಲ್ಲಾ ತೆಗೆದಿರೋದು ಕಾರ್ತಿಕ್ ಮಹೇಶ್ ಅಂತೆ. ಯಾಕಂದ್ರೆ ಕಾರ್ತಿಕ್ ಕೂಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದು, ಅವರು ವಿದೇಶದಲ್ಲಿ ವೆಕೇಶನ್ ನಲ್ಲಿರುವಂತೆ ಕಾಣುತ್ತಿದೆ.
68
ಡೇಟ್ ಮಾಡ್ತಿದ್ದಾರ ಕಾರ್ತಿಕ್-ನಮ್ರತಾ
ಊಹಾಪೋಹಾಗಳ ಪ್ರಕಾರ ಕಾರ್ತಿಕ್ ಮತ್ತು ನಮ್ರತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತೆ. ಇಬ್ಬರು ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿದ್ದರು. ಅಲ್ಲಿಂದ ಬಂದ ಮೇಲೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
78
ಇಬ್ಬರ ಫೋಟೊ ವೈರಲ್
ನಮ್ರತಾ ಮತ್ತು ಕಾರ್ತಿಕ್ ಜೊತೆಯಾಗಿ ಟ್ರಾವೆಲ್ ಮಾಡಿರುವ ಫೋಟೊಗಳು, ಕಾರ್ತಿಕ್ ಮನೆ ಕಾರ್ಯಕ್ರಮದಲ್ಲಿ ನಮ್ರತಾ, ನಟಿಯ ಮನೆಯ ಕಾರ್ಯಕ್ರಮದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಇಬ್ಬರ ಡೇಟಿಂಗ್ ರೂಮರ್ಸ್ ಜೋರಾಗಿಯೇ ನಡೆಯುತ್ತಿದೆ.
88
ಕರ್ಣ ಸೀರಿಯಲ್ ನಲ್ಲಿ ನಮ್ರತಾ
ಇನ್ನು ಕರಿಯರ್ ಬಗ್ಗೆ ಹೇಳೋದಾದ್ರೆ ಸದ್ಯ ನಮ್ರತಾ ಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್ ನಲ್ಲಿ ನಿತ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.