ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಸಿಎಸ್​ಪಿ ಆಗಿ ನಿಮ್ಮ ಮುಂದೆ ಬರ್ತಿದ್ದಾರೆ ಟಿ.ಎನ್ ಸೀತಾರಾಮ್

First Published | Dec 16, 2024, 3:12 PM IST

ಬಿಗ್ ಬಾಸ್ ಸೀಸನ್ 11 ಮುಗಿಯುತ್ತಿದ್ದಂತೆ, ಹೊಸ ಧಾರಾವಾಹಿಗಳು ಶುರುವಾಗಲಿದ್ದು, ಇದೀಗ ಹೊಸ ಸೀರಿಯಲ್ ಪ್ರೊಮೋ ಸದ್ದು ಮಾಡುತ್ತಿದ್ದು, ಈ ಧಾರಾವಾಹಿಯಲ್ಲಿ ಟಿ.ಎನ್ ಸೀತಾರಾಮ್ ನಟಿಸುತ್ತಿದ್ದಾರೆ ಅನ್ನೋದೇ ಖುಷಿಯ ವಿಚಾರ. 
 

ಕಲರ್ಸ್ ಕನ್ನಡದಲ್ಲಿ ಸದ್ಯ ಬಿಗ್ ಬಾಸ್ ಸೀಸನ್ 11  (Bigg Boss Season 11) ಅಬ್ಬರ ನಡೆಯುತ್ತಲೇ ಇದೆ. ಇನ್ನೇನು ಕೊನೆಯ ಹಂತಕ್ಕೆ ಬಂದು ಮುಟ್ಟಿದೆ. ಹಾಗಾಗಿ ಸದ್ಯ ಹೊಸ ಹೊಸ ಧಾರಾವಾಹಿಗಳು  ಆರಂಭವಾಗೋದಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಂದಷ್ಟು ಧಾರಾವಾಹಿಗಳ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದೆ. ಅದರಲ್ಲೂ ಇತ್ತೀಚೆಗೆ ಪ್ರಸಾರವಾದ ವಧು ಸೀರಿಯಲ್ ಪ್ರೊಮೋ ಸಖತ್ ಇಂಟ್ರೆಸ್ಟಿಂಗ್ ಆಗಿದೆ. 
 

ವಧು ಸೀರಿಯಲ್ (Vadhu Serial) ಪ್ರೊಮೋ ಸದ್ಯ ಸದ್ದು ಮಾಡ್ತಿದೆ. ಅಪ್ಪನ ಕನಸಿನಂತೆ ಮದುವೆಯಾಗಲು ಬಯಸಿರುವ ಡಿವೋರ್ಸ್ ಲಾಯರ್ ಕಥೆ ಇದಾಗಿದೆ. ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆನ್ನುವ ಉದ್ದೇಶದಿಂದ ಮಗಳಿಗೆ ವಧು ಎಂದು ಹೆಸರಿಟ್ಟಿದ್ದಾರೆ ತಂದೆ. ಈ ಸೀರಿಯಲ್ ನಾಯಕಿ ವಧು. ಟೈಟಲ್ ಹೆಸರು ಕೂಡ ಅದೇ ಆಗಿದೆ. 
 

Tap to resize

ಈ ಸೀರಿಯಲ್ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ಸಿಎಸ್​ಪಿ  (CSP Sir) ಸರ್ ನಟಿಸುತ್ತಿದ್ದಾರೆ. ಅಂದ್ರೆ ಕನ್ನಡ ಅದ್ಭುತ ನಿರ್ದೇಶಕ, ನಟ ಟಿ ಎಸ್ ಸೀತಾರಾಮ್ ಅವರು ನಟಿಸುತ್ತಿರೋದು ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಎಷ್ಟೊ ವರ್ಷಗಳ ನಂತರ ಸಿಎಸ್​ಪಿ ಯವರನ್ನ ತೆರೆ ಮೇಲೆ ನೋಡೊದಕ್ಕೆ ವೀಕ್ಷಕರು ಖುಷಿ ಪಟ್ಟಿದ್ದಾರೆ. 
 

ಟಿ ಎಸ್ ಸೀತಾರಾಮ್  (TN Seetharam)ಅವರು ವಧು ಸೀರಿಯಲ್ ನಲ್ಲೂ ಕೂಡ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿ ಕೂಡ ಲಾಯರ್ ಆಗುವ ಕನಸು ಕಂಡಿರುವ ಹುಡುಗಿ ಆಗಿರೋದರಿಂದ, ಇಲ್ಲಿ ಸೀತಾರಾಮ್ ಪ್ರಮುಖ ಪಾತ್ರ ವಹಿಸೋದಂತೂ ಖಂಡಿತಾ. ಮತ್ತೆ ಸೀತಾರಮ್ ಅವರ ಮನೋಜ್ಞ ಅಭಿನಯ, ಮಾತಿನ ಗತ್ತು, ಲಾಯರ್ ಲುಕ್ ನೋಡೋಕೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. 
 

ಪರಮೇಶ್ವರ್ ಗುಂಡ್ಕಲ್‌ (Parameshwar Gundkal) ಪ್ರೊಡಕ್ಷನ್​ಹೌಸ್ ನಿರ್ಮಾಣದ ವಧು ಧಾರಾವಾಹಿಯಲ್ಲಿ ಟಿ.ಎನ್‌.ಸೀತಾರಾಮ್‌ ನಟಿಸುತ್ತಿದ್ದಾರೆ. ಸೀರಿಯಲ್​ಗಳಲ್ಲಿ ವಕೀಲರ ಪಾತ್ರದ ಮೂಲಕವೇ ಖ್ಯಾತಿ ಪಡೆದಿರುವ ಅವರು ಈಗ ಮತ್ತೆ ಸಿಎಸ್​ಪಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹೊಸ ಸೀರಿಯಲ್​ ಕುರಿತು ಬಿಗ್​ಬಾಸ್​ ಶೋನಲ್ಲಿ ಮಾಹಿತಿ ತಿಳಿದು ಬಂದಿದೆ.
 

ಟಿ.ಎನ್​ ಸೀತಾರಾಮ್ ಅವರು  ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಂದ್ರೇಶೇಖರ್ ಪ್ರಸಾದ್ ಎಂಬ ವಕೀಲ ಪಾತ್ರದ ಮೂಲಕವೇ ಹತ್ತಿರವಾಗಿರೋದು ಹಾಗಾಗಿಯೇ ಜನ ಪ್ರೀತಿಯಿಂದ ಅವರನ್ನು ಸಿಎಸ್​ಪಿ ಸರ್ ಅಂತಾನೆ ಕರೆಯುತ್ತಾರೆ. ಮುಕ್ತ ಮುಕ್ತ, ಮಾಯಮೃಗ, ಮಗಳು ಜಾನಕಿ ಧಾರವಾಹಿಗಳಲ್ಲಿ ಸಿಎಸ್‌ಪಿ ಪಾತ್ರವನ್ನು ಟಿ.ಎನ್‌ ಸೀತಾರಾಮ್ ನಿರ್ವಹಿಸಿದ್ದರು. ಮಾಯಾಮೃಗ ಧಾರಾವಾಹಿ ಮೂಲಕ ಟಿ.ಎನ್ ಸೀತಾರಾಮ್ ಕಿರುತೆರೆ ನಿರ್ದೇಶಕನಾಗಿ ಕರಿಯರ್ ಆರಂಭಿಸಿದ್ದರು. ಇದೀಗ ಮತ್ತೆ ವಕೀಲ ಪಾತ್ರದ ಮಾಡುತ್ತಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಈ ಕುರಿತು ಸಿಎಸ್ಪಿ ಯವರು ಕೂಡ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಾಹಿತಿ ನೀಡಿದ್ದಾರೆ. 
 

ಪ್ರೀತಿಯ ಗೆಳೆಯ ಕಲರ್ಸ್ (Colros Kannada)ಮುಖ್ಯರಾದ ಪರಮ್ ಕೆಲದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ..ನೀವು ಪಾತ್ರ ಮಾಡಬೇಕು ಎಂದರು.. ಏನು ಕಥೆ, ಏನು ಪಾತ್ರ ಎಂದೆ. ಕೋರ್ಟ್ ಕಥೆ. ನಿಮ್ಮದು ಸಿ.ಎಸ್.ಪಿ. .ಪಾತ್ರ ಎಂದರು. ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂದಂತೆ ಆಯಿತು.
 

ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ .ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ. ಅರ್ಧ ಸೆಕೆಂಡಿನಲ್ಲಿ ಹೂ ಎಂದೆ. ಮೊನ್ನೆ  ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು. ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ.ಕೆಲವು ದಿನವಾದರೂ ಸೀ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ. ಈ ಸಂಗತಿ ಇಷ್ಟ ವಾದರೆ ಹೇಳಿ ಎಂದು ಬರೆದುಕೊಂಡಿದ್ದಾರೆ. 
 

Latest Videos

click me!