ಶೀಘ್ರದಲ್ಲೇ ಹಸೆಮಣೆ ಏರುವರೇ ಕಾರ್ತಿಕ್ -ನಮ್ರತಾ! ಬಿಗ್ ಬಾಸ್ ವಿನ್ನರ್ ಹೇಳಿದ್ದೇನು?

First Published | Dec 16, 2024, 12:34 PM IST

ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಶೀಘ್ರದಲ್ಲೇ ಹಸಿಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ನಟ ಕಾರ್ತಿಕ್ ಏನಂತ ಹೇಳಿದ್ದಾರೆ ಗೊತ್ತಾ? 
 

ಸೆಲೆಬ್ರಿಟಿಗಳು ಯಾರ ಜೊತೆ ಹೊರಗಡೆ ಕಾಣಿಸಿಕೊಂಡರೂ ಸಹ ಜನ ಅವರಿಗೆ ಸಂಬಂಧ ಕಟ್ಟೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದಕ್ಕೆ ಕಾರ್ತಿಕ್ ಮಹೇಶ್ (Karthik Mahesh) ಕೂಡ ಹೊರತಲ್ಲ. ಬಿಗ್ ಬಾಸ್ ಸೀಸನ್ 10 ವಿನ್ನರ್ ಆಗಿರುವ ಕಾರ್ತಿಕ್ ಹೆಸರು, ಬಿಗ್ ಬಾಸ್ ಆರಂಭವಾದಾಗ ಸಂಗೀತ ಶೃಂಗೇರಿ ಜೊತೆ ಕೇಳಿ ಬಂದಿತ್ತು, ಕೊನೆಯಾಗ್ತಿದ್ದಂಗೆ ತನಿಷಾ ಕುಪ್ಪಂಡ ಜೊತೆ ಕೇಳಿ ಬಂದಿತ್ತು. 
 

ಆದರೆ ಬಿಗ್ ಬಾಸ್ ನಿಂದ ಹೊರ ಬಂದ ನಂತರ ಒಂದು ಬಾರಿ ಅನುಪಮಾ ಗೌಡ ಜೊತೆ ಸಂಬಂಧ ಕಲ್ಪಿಸಿದ್ದರೂ ಕೂಡ, ನಂತರ ಆ ವಿಷ್ಯದ ಬಗ್ಗೆ ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡ ಬಳಿಕ, ಅದು ತಣ್ಣಗಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ತಿಕ್ ಹಾಗೂ ನಮ್ರತಾ ಗೌಡ (Namratha Gowda) ಹೆಸರು ಭಾರಿ ಸದ್ದು ಮಾಡ್ತಿದೆ. 
 

Tap to resize

ಹೌದು, ಬಿಗ್ ಬಾಸ್ (Bigg Boss Season 10) ನಿಂದ ಹೊರ ಬಂದ ಮೇಲೆ ಕಾರ್ತಿಕ್ ಮತ್ತು ನಮ್ರತಾ ತುಂಬಾ ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಮ್ರತಾ ಹುಟ್ಟುಹಬ್ಬ, ಕಾರ್ತಿಕ್ ಮಹೇಶ್ ತಂಗಿ ಮಗ ಹುಟ್ಟು ಹಬ್ಬ ಇರಬಹುದು, ನಮ್ರತಾ ಮನೆಯ ವರಮಹಾಲಕ್ಷ್ಮೀ ಪೂಜೆ, ಜಾಹಿರಾತಿಗಳಲ್ಲಿ, ಇತ್ತೀಚೆಗೆ ದುಬೈನಲ್ಲೂ ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. 
 

ಈ ಹಿಂದೆ ನಮ್ರತಾ ಹಾಗೂ ಕಾರ್ತಿಕ್ ಜೊತೆಯಾಗಿ ಒಂದು ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು, ಅದರಲ್ಲಿ ಇವರಿಬ್ಬರು ಹಸೆಮಣೆ ಏರುವಂತಹ ಸೀನ್ ಸಖತ್ ವೈರಲ್ ಆಗಿತ್ತು. ಇಬ್ಬರೂ ಸದ್ದಿಲ್ಲದೇ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ಆದರೆ ಆಮೇಲೆ ಅದು ಜಾಹೀರಾತು ಶೂಟ್ (advertisement shoot) ಎಂದು ಗೊತ್ತಾದಮೇಲೆ ಸಂಗತಿ ತಣ್ಣಗಾಗಿತ್ತು. 
 

ಇತ್ತೀಚಿನ ದಿನಗಳಲ್ಲಿ ಮತ್ತೆ ಈ ಜೋಡಿ, ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಇಬ್ಬರ ನಡುವೆ ಏನೋ ಗುಸು ಗುಸು ನಡೆಯುತ್ತಿದ್ದು, ಶೀಘ್ರದಲ್ಲಿ ಈ ಜೋಡಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹಲವು ಮಾಧ್ಯಮಗಳಲ್ಲೂ ಈ ಸಂಗತಿ ವೈರಲ್ ಆಗುತ್ತಿದೆ. 
 

ಖಾಸಗಿ ಚಾನೆಲ್ ಒಂದರಲ್ಲೂ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ನಡುವೆ ಏನೋ ನಡೆಯುತ್ತಿದೆ, ಇಬ್ಬರು ಶೀಘ್ರದಲ್ಲಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗಿದ್ದು. ಇದಕ್ಕೆ ಸ್ವತಃ ನಟ ಹಾಗೂ ಬಿಗ್  ಬಾಸ್ ವಿನ್ನರ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ತಿಕ್ ಕಾಮೆಂಟ್ ಕೂಡ ವೈರಲ್ ಆಗ್ತಿದೆ. 
 

ಖಾಸಗಿ ವಾಹಿಸಿ ಪ್ರಸಾರ ಮಾಡಿದ ವಿಡಿಯೋ ತುಣುಕೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಶೀಘ್ರವೇ ಮದುವೆಯಾಗಲಿದ್ದಾರಾ ನಮ್ರತಾ ಗೌಡ- ಕಾರ್ತಿಕ್‌..?ಎಂದು ಬರೆದುಕೊಂಡಿದ್ದರು. ಇದಕ್ಕೆ ಕಾಮೆಂಟ್ ಮಾಡಿದ ನಟ ಕಾರ್ತಿಕ್ ಈ ವಿಷಯ ಕಾರ್ತಿಕ್ ಮಹೇಶ್ ಗೆ ಗೊತ್ತಾ ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಜನರು ಸರ್ ನೀವಿಬ್ಬರು ಕನ್ನಡಿಗರ ಮನ ಗೆದ್ದಿದ್ದೀರಿ, ನೀವು ಬೆಸ್ಟ್ ಜೋಡಿ ಎಂದಿದ್ದಾರೆ. 
 

Latest Videos

click me!