ಕಾವೇರಿಯ ಸ್ಟನ್ನಿಂಗ್ ಜ್ಯುವೆಲ್ಲರಿ ನಿಮಗೂ ಬೇಕಾ…? ಎಲ್ಲಿಂದ ಶಾಪಿಂಗ್ ಮಾಡ್ತಾರೆ ಗೊತ್ತಾ?
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ನಾಣಯ್ಯ, ತಮ್ಮ ಜ್ಯುವೆಲ್ಲರಿಗಳನ್ನು ಎಲ್ಲಿಂದ ಖರೀದಿ ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ನಾಣಯ್ಯ, ತಮ್ಮ ಜ್ಯುವೆಲ್ಲರಿಗಳನ್ನು ಎಲ್ಲಿಂದ ಖರೀದಿ ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ವಿಲನ್ ಕಾವೇರಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸುಷ್ಮಾ ನಾಣಯ್ಯ. ಇವರು ಕೇವಲ ನಟಿ ಮಾತ್ರ ಅಲ್ಲ, ಮೇಕಪ್ ಆರ್ಟಿಸ್ಟ್ ಕೂಡ ಹೌದು. ಸೀರಿಯಲ್ ನಲ್ಲೂ ಇವರ ಮೇಕಪ್ ಇವರೇ ಮಾಡಿಕೊಳ್ಳುತ್ತಾರೆ.
ಧಾರಾವಾಹಿಯಲ್ಲಿ ಎಲ್ಲರೂ ನನ್ನ ಹಿಡಿತದಲ್ಲಿ ಇರಬೇಕು ಎಂದು ಬಯಸುವ ಕಾವೇರಿ ಖಡಕ್ ಜೊತೆಗೆ ತನ್ನ ಹಠ ಸಾಧಿಸೋಕೆ ಯಾರನ್ನು ಬೇಕಾದರೂ ಸಾಯಿಸುವಂತಹ ವಿಲನ್ ಕೂಡ ಹೌದು. ಇವರು ಕೇವಲ ವಿಲನ್ ಆಗಿ ಮಾತ್ರ ಅಲ್ಲ, ತಮ್ಮ ಸ್ಟೈಲ್ ನಿಂದಲೂ ಜನಪ್ರಿಯತೆ ಗಳಿಸಿದ್ದಾರೆ.
ಕಾವೇರಿಯ ವಿಲನ್ ಲುಕ್ ಗೆ ಮೆರುಗು ನೀಡೋದೆ ಅವರು ಧರಿಸೋ ಸೀರೆ ಹಾಗೂ ಜ್ಯುವೆಲ್ಲರಿ. ಸುಷ್ಮಾ ನಾಣಯ್ಯ (Sushma Nanaiah) ಅವರ ಫ್ಯಾಷನ್ ಸೆನ್ಸ್ ತುಂಬಾನೆ ಚೆನ್ನಾಗಿದೆ. ವಿಲನ್ ಪಾತ್ರ ಇಷ್ಟಪಡದವರೂ ಸಹ ಸುಷ್ಮಾ ಅವರ ಸ್ಟೈಲಿಶ್ ಲುಕ್ ನ್ನು ಇಷ್ಟ ಪಡದೇ ಇರಲಾರರು.
ಸುಷ್ಮಾ ಸೀರಿಯಲ್ ನಲ್ಲಿ ಯಾವ ರೀತಿ ಸೀರೆ ಉಡುತ್ತಾರೋ, ಅದೇ ರೀತಿಯ ಜ್ಯುವೆಲ್ಲರಿ ಕೂಡ ಧರಿಸುತ್ತಾರೆ. ಆ ಜ್ಯುವೆಲ್ಲರಿ ಲುಕ್ ನಿಂದಾಗಿಯೇ ಕಾವೇರಿಯ ಪಾತ್ರ ಮತ್ತಷ್ಟು ಹೈಲೈಟ್ ಆಡುತ್ತೆ. ಇದೆಲ್ಲವನ್ನೂ ಸುಷ್ಮಾ ಅವರೇ ಸ್ವತಃ ತಮ್ಮ ಲುಕ್ ಗೆ ಅನುಗುಣವಾಗಿ ಮ್ಯಾಚ್ ಮಾಡಿಕೊಳ್ಳುತ್ತಾರೆ.
ಸುಷ್ಮಾ ಅವರು ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಫ್ಯಾಷನ್ ಸೆನ್ಸ್, ಜ್ಯುವೆಲ್ಲರಿ ಮತ್ತು ಸೀರೆಗಳ ಖರೀದಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರಿಗೆ ಈ ಕುರಿತು ಹೆಚ್ಚಾಗಿ ಜನ ಮೆಸೇಜ್ ಮಾಡುತ್ತಲೇ ಇರುತ್ತಾರಂತೆ.
ಈ ಶ್ರೀಮಂತ ಮಹಿಳೆಯರ ಲುಕ್ ಗಾಗಿ ಸುಷ್ಮಾ ನಾಣಯ್ಯ ಹೆಚ್ಚಾಗಿ, ಆಫ್ ಲೈನ್ ಶಾಪಿಂಗ್ ಮಾಡೊದಕ್ಕಿಂತ ಆನ್ ಲೈನ್ ಶಾಪಿಂಗ್ (Online shopping)ಮಾಡೋದಕ್ಕೆ ಇಷ್ಟಪಡ್ತಾರಂತೆ. ಅದರಲ್ಲೂ ಸುಷ್ಮಾ ಮಿಂತ್ರಾ ಮತ್ತು ಮೀಶೋದಿಂದ ಹೆಚ್ಚಿನ ಶಾಪಿಂಗ್ ಮಾಡುವುದಾಗಿ ತಿಳಿಸಿದ್ದಾರೆ.
ಮೀಶೋದಲ್ಲಿ ಉತ್ತಮ ಕ್ವಾಲಿಟಿಯ ವಸ್ತುಗಳು ಬರೋದಿಲ್ಲ ಹೇಳ್ತಾರೆ ಜನ ಅಂದಿದ್ದಕ್ಕೆ ಸುಷ್ಮಾ, ಖಂಡಿತಾ ಹಾಗೇನೂ ಇಲ್ಲ, ಒಳ್ಳೆಯ ಕ್ವಾಲಿಟಿಯ ಬಟ್ಟೆ, ಜ್ಯುವೆಲ್ಲರಿಗಳಿವೆ. ನಾನು ಹೆಚ್ಚಾಗಿ ಅಲ್ಲಿಂದಲೇ ಶಾಪಿಂಗ್ ಮಾಡೋದು ಎಂದಿದ್ದಾರೆ.
ನಿಮಗೂ ಕೂಡ ಕಾವೇರಿಯ ಅಂದ್ರೆ ಸುಷ್ಮಾ ನಾಣಯ್ಯ ಅವರ ಸ್ಟೇಟ್ ಮೆಂಟ್ ಜ್ಯುವೆಲ್ಲರಿಗಳು ಇಷ್ಟವಾಗುತ್ತಿದ್ದರೆ, ನೀವೂ ಕೂಡ ಆನ್ ಲೈ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಚೆಕ್ ಮಾಡಿ ನೋಡಿ, ನಿಮಗಿಷ್ಟವಾದ ಆಭರಣಗಳು ಸಿಕ್ಕರೂ ಸಿಗಬಹುದು.