ಶಕುಂತಲಾ ಕೆಟ್ಟವಳೇ… ಆದ್ರೆ ಭೂಮಿಕಾಗೆ ಕೊಟ್ಟ ಪ್ರೆಗ್ನೆನ್ಸಿ ಟಿಪ್ಸ್ ಎಲ್ಲಾ ಗರ್ಭಿಣಿಯರಿಗೂ ಬೆಸ್ಟ್!
ಅಮೃತಧಾರೆ ಧಾರಾವಾಹಿಯಲ್ಲಿ ಅತ್ತೆ ಶಕುಂತಲಾ, ಗರ್ಭಿಣಿಯಾಗಿರುವ ಭೂಮಿಕಾಗೆ ಒಂದೊಳ್ಳೆ ಟಿಪ್ಸ್ ಕೊಟ್ಟಿದ್ದು, ಇದನ್ನು ಗರ್ಭಿಣಿಯರು ಫಾಲೋ ಮಾಡಿದ್ರೆ ತುಂಬಾನೆ ಚೆನ್ನಾಗಿರುತ್ತೆ.
ಅಮೃತಧಾರೆ ಧಾರಾವಾಹಿಯಲ್ಲಿ ಅತ್ತೆ ಶಕುಂತಲಾ, ಗರ್ಭಿಣಿಯಾಗಿರುವ ಭೂಮಿಕಾಗೆ ಒಂದೊಳ್ಳೆ ಟಿಪ್ಸ್ ಕೊಟ್ಟಿದ್ದು, ಇದನ್ನು ಗರ್ಭಿಣಿಯರು ಫಾಲೋ ಮಾಡಿದ್ರೆ ತುಂಬಾನೆ ಚೆನ್ನಾಗಿರುತ್ತೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಸದ್ಯ ಹಬ್ಬದ ವಾತಾವರಣ. ಯಾಕಂದ್ರೆ ಕಿರುತೆರೆ ವೀಕ್ಷಕರ ನೆಚ್ಚಿನ ಭೂಮಿಕಾ ಪ್ರೆಗ್ನೆಂಟ್ ಆಗಿದ್ದಾರೆ. ಗೌತಮ್ ಹಾಗೂ ಭೂಮಿಕಾ ಇಬ್ಬರೂ ಹೊಸ ಜೀವದ ಆಗಮನಕ್ಕಾಗಿ ಸಂಭ್ರಮದಿಂದ ಕಾಯುತ್ತಿದ್ದಾರೆ.
ಭೂಮಿಕಾ ಗರ್ಭಿಣಿ ಅನ್ನೋದು ಗೊತ್ತಾದಾಗಿನಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ತುಂಬಿದೆ. ಗೌತಮ್ ಅಂತೂ ಹೇಳೊದೇ ಬೇಡ. ಭೂಮಿಯ ಬೇಕು, ಬೇಡಗಳನ್ನೆಲ್ಲಾ ಖುದ್ದಾಗಿ ನಿಂತು ಪರಿಶೀಲನೆ ಮಾಡ್ತಾ ಇದ್ದಾನೆ. ಅಡುಗೆಯಲ್ಲಿ ಏನಿರಬೇಕು? ಏನು ಇರಬಾರದು? ಮನೆಯೆಲ್ಲಾ ಯಾವ ರೀತಿಯಾಗಿರಬೇಕು? ಭೂಮಿಕಾ ದಿನದಲ್ಲಿ ಏನೆಲ್ಲಾ ಆಹಾರ ಸೇವಿಸಬೇಕು? ಎಕ್ಸರೈಸ್ ಮಾಡಬೇಕು? ಈ ಎಲ್ಲದರ ಲಿಸ್ಟ್ ಗಳನ್ನು ಮನೆಯಲ್ಲಿರುವ ಆಳುಕಾಳುಗಳಿಗೆ ತಿಳಿಸಿದ್ದಾನೆ ಗೌತಮ್.
ಮತ್ತೊಂದೆಡೆ ಭೂಮಿಕಾ ಗರ್ಭಿಣಿ ಅನ್ನೋದು ಗೊತ್ತಾಗಿ ವಿಲನ್ ಗಳ ಮನಸ್ಸು ಒದ್ದಾಡುತ್ತಿದೆ. ಶಕುಂತಲಾ ನಿಂತಲ್ಲೆ ನಿಲ್ಲಲಾಗದೇ ಮುಂದೇನು ಮಾಡೋದು ಎನ್ನುವ ಯೋಚನೆಯಲ್ಲಿದ್ದರೆ, ಇನ್ನೊಂದೆಡೆ ಜೈ ದೇವ್ ಆ ಮಗು ಹುಟ್ಟೋದಕ್ಕೂ ಮುನ್ನವೇ ಮುಗಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಒಂದು ವೇಳೆ ಆ ಮಗು ಮಗು ಹುಟ್ಟಿದರೆ ಆಸ್ತಿಯಲ್ಲಿ ಮಗುವಿಗೂ ಪಾಲು ಕೊಡಬೇಕಾಗುವುದು ಎನ್ನುವ ಭಯ ಜೈ ದೇವ್ ನದು.
ಇದೆಲ್ಲದರ ನಡುವೆ ಭೂಮಿಕಾ ತನ್ನ ಅತ್ತೆ ಶಕುಂತಲಾ ಬಳಿ ಹೋಗಿ, ಗರ್ಭಿಣಿಯರಿಗಾಗುವ ಸಮಸ್ಯೆಗಳ (problems in pregnancy) ಬಗ್ಗೆ ಮಾತನಾಡ್ತಾಳೆ. ಮಗು ಬಗ್ಗೆ ಎಲ್ಲರೂ ಮಾತಾಡ್ತಾರೆ, ಆದರೆ ಒಂದು ಹೆಣ್ಣು ಪ್ರೆಗ್ನೆನ್ಸಿ ಸಮಯದಲ್ಲಿ ಅನುಭವಿಸುವ ಪ್ರೆಗ್ನೆನ್ಸಿ ಇಮೋಷನಲ್ ಬ್ರೇಕ್ ಡೌನ್ ಬಗ್ಗೆ ಯಾರೂ ಕೂಡ ಮಾತನಾಡಲ್ಲ. ಅದು ಎಷ್ಟು ಗಂಭೀರವಾಗಿರುತ್ತೆ. ಅದನ್ನು ಹೇಗೆ ಫೇಸ್ ಮಾಡಬೇಕು? ಆ ಸಂದರ್ಭದಲ್ಲಿ ಏನಾಗುತ್ತೆ? ಆ ಸಮಯವನ್ನು ಹ್ಯಾಂಡಲ್ ಮಾಡೋದು ಹೇಗೆ ಆನ್ನೋದನ್ನು ಯಾರೂ ಕೂಡ ಹೇಳಿ ಕೊಡೋದಿಲ್ಲ ಎನ್ನುತ್ತಾಳೆ ಭೂಮಿಕಾ.
ಒಂದೊಂದು ಸಲ ಚಿಕ್ಕ ಚಿಕ್ಕ ವಿಷಯಕ್ಕೆ ಮನಸ್ಸು ಮುರಿದು ಹೋಗುತ್ತೆ. ಕೆಲವೊಮ್ಮೆ ಮೂಡ್ ಸ್ವಿಂಗ್ಸ್ (mood swings) ಆಗುತ್ತೆ, ಇನ್ನೂ ಕೆಲವೊಮ್ಮೆ ಎಲ್ಲಾರೂ ಇದ್ದು, ಒಂಟಿ ತನ ಕಾಡೋದಕ್ಕೆ ಶುರುವಾಗುತ್ತೆ. ಮನಸ್ಸು ಖಾಲಿ ಖಾಲಿ ಅನಿಸುತ್ತೆ, ತುಂಬಾನೆ ಹೆಲ್ಪ್ ಲೆಸ್ ಆಗೋಗ್ತೀವಿ, ಹೋಪ್ ಲೆಸ್ ಆಗೋಗ್ತೀವಿ, ಏನು ಮಾಡದೇನೆ ಸುಸ್ತಾಗುತ್ತೆ. ಹೀಗೆ ತುಂಬಾನೇ ಏನೇನೋ ಆಗುತ್ತೆ. ಆದರೆ ಇದನ್ನೆಲ್ಲಾ ಹೇಗೆ ಹ್ಯಾಂಡಲ್ ಮಾಡೋದು ಅನ್ನೋದಕ್ಕೆ ಉತ್ತರ ಬೇಕಿತ್ತು, ಚಿಕ್ಕ ಕೌನ್ಸಲಿಂಗ್ ಥರ ಎಂದು ಭೂಮಿ ಶಾಕುಂತಲಾ ಬಳಿ ಕೇಳುತ್ತಾಳೆ.
ಅದಕ್ಕೆ ಉತ್ತರಿಸುವ ಶಕುಂತಲಾ, ನೀನು ಹೇಳಿದ್ಯಲ್ವಾ? ಮೂಡ್ ಸ್ವಿಂಗ್ಸ್, ಅದು ಇದು ಎಲ್ಲಾ ಅದಕ್ಕೆ ಪರಿಹಾರ ತುಂಬಾನೆ ಸಿಂಪಲ್, ಹಾಗೆ ಆದಾಗಲೆಲ್ಲಾ, ಒಂದು ಸುತ್ತು ಓಡಾಡಿಕೊಂಡು ಬಾ, ಯಾರದ್ರು ಸಿಕ್ಕಿದ್ರೆ ಮಾತನಾಡು, ಟೈಮ್ ಪಾಸ್ ಮಾಡು, ಮ್ಯೂಸಿಕ್ ಕೇಳು, ಬುಕ್ಸ್ ಓದು, ಆಕ್ಟಿವ್ ಆಗಿರು, ಎಲ್ಲಾದಕ್ಕಿಂತ ಮುಖ್ಯವಾಗಿ ನಿನಗೆ ಹೀಗೆಲ್ಲಾ ಆದಾಗ, ನಿನ್ನ ಹೊಟ್ಟೆಯಲ್ಲಿ ಒಂದು ಮಗು ಬೆಳಿತಾ ಇದೆ ಅನ್ನೋದನ್ನು ನೆನೆಸ್ಕೋ, ಎಲ್ಲಾ ಸರಿ ಹೋಗುತ್ತೆ. ಇದೇ ನಾನು ನಿನಗೆ ಕೊಡೋ ಚಿಕ್ಕ ಟಿಪ್ಸ್ ಎನ್ನುತ್ತಾಳೆ ಶಕುಂತಲಾ.
ಶಕುಂತಲಾ ಈ ಸೀರಿಯಲ್ ನಲ್ಲಿ ಕೆಟ್ಟವಳೇ ಆದ್ರೂ, ಅವರು ಹೇಳಿರೋ ಟಿಪ್ಸ್ ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಅನೇಕ ಜನ ಮಹಿಳೆಯರು ಪ್ರೆಗ್ನೆನ್ಸಿ ಟ್ರಾಮಾಕ್ಕೆ ಒಳಗಾಗುತ್ತಾರೆ, ಡಿಪ್ರೆಶನ್ ಕೂಡ ಆಗುತ್ತೆ. ಇಂಥಹ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದು ಯಾರಿಗೂ ತಿಳಿದಿರೋದಿಲ್ಲ. ಹಾಗಾಗಿ ಶಕುಂತಲಾ ಹೇಳಿದ ಈ ಟಿಪ್ಸ್ ಅಳವಡಿಸಿದ್ರೆ, ನಿಮ್ಮ ಪ್ರೆಗ್ನೆನ್ಸಿ ಕೂಡ ಆರಾಮದಿಂದ ಕೂಡಿರುತ್ತೆ ಫಾಲೋ ಮಾಡಿ.