ಕೊನೆಗೂ 30ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆಂದು ಡಯಟ್‌ ಲಿಸ್ಟ್‌ ತೆರೆದಿಟ್ಟ ಗೀತಾ ಭಾರತಿ ಭಟ್

First Published Feb 7, 2023, 4:07 PM IST

ದಿನಕಿಷ್ಟು ನೀರು, ನಿದ್ರೆ ಮತ್ತು ಆಹಾರ ಫಾಲೋ ಮಾಡಿದ್ದರೆ ಇದು ಡಯಟ್‌ ಮೊದಲ ಹೆಜ್ಜೆ. ಗೀತಾ ಭಾರತಿ ಭಟ್‌ ಕೊಟ್ಟ ಫಿಟ್ನೆಸ್‌ ಸಲಹೆಗಳಿದು.....

ಬ್ರಹ್ಮಗಂಟು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಗಾಯಕಿ ಕಮ್ ರಂಗಭೂಮಿ ಕಲಾವಿದೆ ಗೀತಾ ಸದ್ಯ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.  30 ಕೆಜಿ ತೂಕ ಉಳಿಸಿಕೊಂಡಿರುವ ಗೀತಾ ಫಿಟ್ನೆಸ್‌ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ. 

'ದಿನಕ್ಕೆ 4ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು ಅದಾದ ಮೇಲೆ ಶುದ್ಧವಾದ ಆಹಾರ ತಿನ್ನಬೇಕು. ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚಿಗೆ ಸೇವಿಸಬೇಕು.

ಶುದ್ಧವಾದ ಆಹಾರ ತಿಂದ್ರೆ ಯಾವ ಸಮಸ್ಯೆನೂ ಬರುವುದಿಲ್ಲ ಆರೋಗ್ಯ ಚೆನ್ನಾಗಿರುತ್ತದೆ. ಏನೇ ಆರೋಗ್ಯ ಸಮಸ್ಯೆ ಎದುರಾದರು ಅದನ್ನು ಸರಿ ಮಾಡುವ ಶಕ್ತಿ ನಮ್ಮ ಸರಿಯಾದ ಆಹಾರಕ್ಕಿದೆ. 

ಏನೇ ಡಯಟ್ ಪ್ಲ್ಯಾನ್ ಮಾಡಿದ್ದರೂ ಅದನ್ನು ತಪ್ಪದೆ ಪಾಲಿಸಬೇಕು ಅಂದ್ರೆ ಮೊದಲು ಗಟ್ಟಿ ಮನಸ್ಸು ಮಾಡಬೇಕು. ಆರಂಭದಲ್ಲಿ ಜೋಶ್ ಇರುತ್ತ ಮಾಡಬಹುದು ಎರಡು ತಿಂಗಳು ಮಾಡಬಹುದು ಆಮೇಲೆ ಕಷ್ ಆಗುತ್ತದೆ.

ಒಂದು ಎರಡು ವಾರ ಮಾಡಿ ಬಿಡಬಾರದು ಧೃಡ ಸಂಕಲ್ಪ ಮಾಡಿಕೊಳ್ಳಬೇಕು. ಎಷ್ಟೇ ಕಷ್ಟ ಬಂದೂ ಬ್ರೇಕ್ ಮಾಡುವುದಿಲ್ಲ ಎಂದು ಮೈಂಡ್ ಮಾಡಿಕೊಳ್ಳಬೇಕು, ಬ್ರೇಕ್ ಮಾಡುವುದು ಸಹಜ ಹೀಗಾಗಿ ಆ ಬ್ರೇಕ್ ಆದ್ಮೇಲೆ ಮತ್ತೆ ಶುರು ಮಾಡುವ ಮೈಂಡ್‌ಸೆಟ್‌ ಮಾಡಿಕೊಳ್ಳಬೇಕು. 

ನಾನು ಈಗ ಕಡಿಮೆ ಮಾಡಿಕೊಂಡಿರುವುದು 30 ಕೆಜಿ. ತೂಕ ಕಡಿಮೆ ಮಾಡಿಕೊಳ್ಳಲು ನಾನು ಸುಮಾರು 1 ವರ್ಷ ಸಮಯ ತೆಗೆದುಕೊಂಡಿರುವೆ. ಯಾವುದೇ ಶಾರ್ಟ್‌ ಕಟ್‌ ಇಲ್ಲದೆ ಎಕ್ಸಟ್ರಾ ಪ್ರಾಡೆಕ್ಟ್‌ ಇಲ್ಲದೆ ನ್ಯಾಚುರಲ್ ಆಗಿ ಬರೀ ಆಹಾರ ಮತ್ತು ವ್ಯಾಯಾಮದಿಂದ ಸಣ್ಣಗಾಗಿರುವುದು. ವ್ಯಾಯಮದಲ್ಲಿ ಏನ್ ಏನ್ ಮಾಡಬೇಕು ಹಾಗೂ ದಿನ ನಿತ್ಯದ ರೂಟಿನ್‌ನಲ್ಲಿ ಎನು ಬದಲಾವಣೆ ಮಾಡಿಕೊಂಡೆ ಅದರಿಂದ ಈ ಬದಲಾವಣೆ ಕಾಣಿಸುತ್ತಿದೆ. 

ಈ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರು ಕೋಚ್ ಕಿರಣ್ ಸಾಗರ್‌. ಅವರ ಸಪೋರ್ಟ್‌ ಇಲ್ಲದೆ ನಾನು ಈ ಟ್ರಾನ್ಸ್‌ಫಾರ್ಮೆಷನ್‌ ಜರ್ನಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.  ನನ್ನ ತಲೆಯಲ್ಲಿ ಈ ರೀತಿ ನೀವು ಯಾಕೆ ಪ್ರಯತ್ನ ಮಾಡಬಾರದು ಇದು ನಿಮ್ಮ ಕೈಯಲ್ಲಿ ಸಾಧ್ಯ ಎಂದು ತುಂಬಿದವರೇ ಅವ್ರು.

ಈಗ ದಿನಕ್ಕೆ ಒಂದೆರಡು ಗಂಟೆ ಕಷ್ಟ ಪಟ್ಟು ಜಿಮ್‌ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸಬಹುದು ಆದರೆ ಈ ಡಯಟ್ ಅನ್ನೋದು ದೊಡ್ಡ ತಲೆ ನೋವು, ಮಾಡಲು ಕಷ್ಟವಾಗುತ್ತದೆ. 

ಮಳೆ ಬರುವಾಗ ಅಥವಾ ಚಳಿ ಇರುವಾಗ ಎಲ್ಲರೂ ಪಾನಿಪೂರಿ ತಿನ್ನುತ್ತಾರೆ ಬಜ್ಜಿ ತಿನ್ನುತ್ತಾರೆ ಅದೆಲ್ಲ ನೋಡಿದಾಗ ನಾನು ಯಾಕೆ ಇನ್ನು ಬದುಕಿದ್ದೀನಿ ನನಗೆ ಯಾಕೆ ಬೇಕು ಈ ಜೀವನ ಅಂತ ಅನಿಸುತ್ತದೆ. ಅದೆಲ್ಲಾ ತ್ಯಾಗ ಮಾಡಿ ಈಗ ನನಗೆ ಸಿಕ್ಕಿರುವ ಫಲಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ

ಕಷ್ಟ ನೋವು ಎಲ್ಲಾ ನಮ್ಮ ಫ್ರೆಂಡ್ಸ್‌ ತರ ಯಾವಾಗಲೂ ಜೊತೆಗಿರುತ್ತಾರೆ ಅದರ ಜೊತೆ ಬದುಕಲು ಕಲಿಯಬೇಕು. ಡಯಟ್ ವರ್ಕೌಟ್‌ನಿಂದ ನಾನು ಬ್ರೇಕ್ ತೆಗೆದುಕೊಂಡಿದ್ದೀನಿ ಆಫ್‌ ಟ್ರ್ಯಾಕ್ ಅಗಿದ್ದೀನಿ. ನನ್ನ  ಗುರಿ ತಲುಪುತ್ತೀನಿ ಅನ್ನೋದು ಮೈಂಡ್‌ನಲ್ಲಿ ಸೆಟ್ ಮಾಡಿಕೊಂಡಿರುವೆ' ಎಂದು ಗೀತಾ ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.  

click me!