ಜೋಡಿಯಾಗಿ ಕಾಣಿಸಿದ ‘ಕನ್ಯಾಕುಮಾರಿ’ ಜೋಡಿ : Future ಯಶ್ -ರಾಧಿಕಾ ನೀವೇ ಎಂದ ನೆಟ್ಟಿಗರು

Published : Feb 04, 2023, 02:42 PM IST

ಕನ್ಯಾಕುಮಾರಿ ಸಿರಿಯಲ್ ಖ್ಯಾತಿಯ ಚರಣ್ ಮತ್ತು ಕನ್ನಿಕಾ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಮತ್ತು ಜೊತೆಯಾಗಿ ಡ್ಯಾನ್ಸ್ ಮಾಡಿದ ರೀಲ್ಸ್ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನು ಮತ್ತೆ ನೋಡಿ ಖುಷಿ ಪಟ್ಟ ನೆಟ್ಟಿಗರು ನೀವು ಭವಿಷ್ಯದ ಯಶ್ - ರಾಧಿಕಾ ಅಂತಿದ್ದಾರೆ. 

PREV
19
ಜೋಡಿಯಾಗಿ ಕಾಣಿಸಿದ ‘ಕನ್ಯಾಕುಮಾರಿ’ ಜೋಡಿ : Future ಯಶ್ -ರಾಧಿಕಾ ನೀವೇ ಎಂದ ನೆಟ್ಟಿಗರು

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಸೀರಿಯಲ್ ಮುಗಿದು ದಿನಗಳೇ ಆದರೂ ಒಂದಲ್ಲ ಒಂದು ಕಾಣಕ್ಕೆ ಈ ಸೀರಿಯಲ್ ಸುದ್ದಿಯಾಗುತ್ತಿರುವುದು ಮಾತ್ರ ನಿಜಾ. ಈ ಸೀರಿಯಲ್ ನಾಯಕ ಮತ್ತು ನಾಯಕಿ ಕೂಡ ಸದಾ ಸುದ್ದಿಯಾಗ್ತಿರ್ತಾರೆ. 

29

ಕನ್ಯಾಕುಮಾರಿ ಸೀರಿಯಲ್ (Kanyakumari Serial) ದೈವಿಕ ಹಿನ್ನೆಲೆಯಲ್ಲಿ ಕಥೆಯನ್ನು ಹೊಂದಿರುವ ಸೀರಿಯಲ್ ಆಗಿತ್ತು. ಇದರಲ್ಲಿ ಯಶ್ವಂತ್ ಗೌಡ ಮತ್ತು ಆಸಿಯಾ ಫಿರ್ದೋಸೆ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡು ಅಷ್ಟೇ ಜನಪ್ರಿಯತೆಯನ್ನೂ ಸಹ ಪಡೆದಿದ್ದರು. 

39

ಚರಣ್-ಕನ್ನಿಕಾ ಜೋಡಿ ಸೀರಿಯಲ್‌ನಲ್ಲಿ ಎಷ್ಟು ಜನಪ್ರಿಯತೆ ಪಡೆದಿದ್ದರೂ ಎಂದರೆ ಇವರಿಬ್ಬರ ಕೆಮೆಸ್ಟ್ರಿ ಎಲ್ಲರಿಗೂ ತುಂಬಾನೆ ಇಷ್ಟವಾಗಿತ್ತು. ಅಭಿಮಾನಿಗಳು ಇವರನ್ನು ಜೊತೆಯಾಗಿ ಚರಣಿಕಾ (CHARANIKA) ಎಂದು ಕರೆಯುತ್ತಿದ್ದರು. ಈ ಹೆಸರಿನ ಫ್ಯಾನ್ ಪೇಜಸ್ ಕೂಡ ಇವೆ. 
 

49

ಈ ಜೋಡಿ ಸೀರಿಯಲ್ ಸೆಟ್ ನಲ್ಲಿ ಸಾಕಷ್ಟು ಕನ್ನಡ ಹಾಡುಗಳಿಗೆ ರೀಲ್ಸ್ (kannada reels) ಮಾಡಿಕೊಂಡು ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರು, ಇವರ ಹಾಡು, ಡ್ಯಾನ್ಸ್ ಎಲ್ಲವೂ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ತೆರೆಯ ಹಿಂದೆಯೂ ಕೂಡ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. 
 

59

ಯಶ್ವಂತ್ ಹುಟ್ಟು ಹಬ್ಬಕ್ಕೆ, ಆಸಿಯಾ ಮತ್ತು ಇತರ ಸ್ನೇಹಿತರು ಸೇರಿ ದೊಡ್ಡ ಸರ್ಫ್ರೆಸ್ ಪಾರ್ಟಿನೇ ಕೊಟ್ಟಿದ್ದರು. ಅಷ್ಟೇ ಅಲ್ಲ, ಇಬ್ಬರು ಜೊತೆಯಾಗಿ ಫೋಟೋ ಶೂಟ್ ಮಾಡಿಸಿದ್ದೂ ಇದೆ, ಜೊತೆಯಾಗಿ ಸಮಾರಂಭಗಳಿಗೆ, ಟೂರ್ ಗಳಿ ಹೋದದ್ದೂ ಇದೆ. ಈ ಎಲ್ಲಾ ಫೋಟೋಗಳನ್ನು ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡುತ್ತಿದ್ದರು. 

69

ಇದೀಗ ಸಿರಿಯಲ್ ಮುಗಿದು ಹಲವು ದಿನಗಳ ನಂತರ ಚರಣಿಕ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಹಾಡೋಂದಕ್ಕೆ ಇಬ್ಬರೂ ಸಖತ್ತಾಗಿ ಹೆಜ್ಜೆ ಹಾಕಿದ್ದು, ಈ ರೀಲ್ಸ್ ತುಂಬಾನೆ ವೈರಲ್ ಆಗುತ್ತಿತ್ತು. ಮತ್ತೆ ಈ ಜೋಡಿಯನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. 

79

ಈ ಜೋಡಿಯನ್ನು ಮತ್ತೆ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಗಳಿಂದ ಸಂತೋಷ ಹಂಚಿಕೊಳ್ಳುತ್ತಿದ್ದಾರೆ. ಒಬ್ಬರು ನಿಮ್ಮಿಬ್ರ ಜೋಡಿ ಸೂಪರ್ ಗುರು (super couples) ಎಂದರೆ, ಇನ್ನೂ ಕೆಲವರು ನೀವಿಬ್ಬರು ಫ್ಯೂಚರ್ ರಾಧಿಕಾ - ಯಶ್ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ನೀವಿಬ್ರೂ ಮತ್ತೆ ಜೊತೆಯಾಗಿ ನಟಿಸಿ ಅಂತಿದ್ದಾರೆ. 

89

ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ ಮಾಡೆಲ್ ಆಗಿ ಮಿಂಚಿ ನಂತರ ಕನ್ಯಾಕುಮಾರಿ ಸೀರಿಯಲ್ ನಲ್ಲಿ ಕನ್ನಿಕಾ ಪಾತ್ರಕ್ಕೆ ಜೀವ ತುಂಬಿದ ಆಸಿಯಾ ಫಿರ್ದೋಸೆ, ಇದೀಗ ಕನ್ನಡದ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ಚಿತ್ರಗಳು ಶೂಟಿಂಗ್ ಹಂತದಲ್ಲಿದೆ. 
 

99

ಇನ್ನು ಚಾಕಲೇಟ್ ಬಾಯ್ ಯಶ್ವಂತ್ ಗೌಡ, ಸದ್ಯ ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇವರು ತೆಲುಗಿನ ಅಮ್ಮಾಯಿಗಾರು ಸೀರಿಯಲ್ ನಲ್ಲಿ ನಾಯಕನ ಪಾತ್ರ ಮಾಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಗಟ್ಟಿಮೇಳದ ರೌಡಿ ಬೇಬಿ ಅಮೂಲ್ಯ ಖ್ಯಾತಿಯ ನಿಶಾ ಅಭಿನಯಿಸುತ್ತಿದ್ದಾರೆ. 

Read more Photos on
click me!

Recommended Stories