ಭೂಮಿ‌ ಆರೈಕೆಗೆ ಸುಧಾ ಎಂಟ್ರಿ …ಅಣ್ಣ ಅನ್ನೋ ಸತ್ಯ ಗೊತ್ತಿಲ್ಲದೇ ಗೌತಮ್ ವಿರುದ್ಧ ಸಂಚು ರೂಪಿಸ್ತಾಳ ತಂಗಿ?!

First Published | Nov 18, 2024, 3:26 PM IST

ಅಮೃತಧಾರೆ ಧಾರಾವಾಹಿಯಲ್ಲಿ ಕುತೂಹಲಕಾರಿ ಸಂಚಿಕೆಗಳು ಪ್ರಸಾರವಾಗುತ್ತಿದ್ದು, ಇದೀಗ ಮನೆಯಲ್ಲಿ ಬಾಂಬ್ ಇಟ್ಟವರ ಕುರಿತು ತನಿಖೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಗೌತಮ್ ದಿವಾನ್ ಮನೆಗೆ ಸುಧಾ ಎಂಟ್ರಿ ಕೊಟ್ಟಿದ್ದಾಳೆ. 
 

ಝಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಸದ್ಯ ಕುತೂಹಲಕಾರಿ ಎಪಿಸೋಡ್ ಗಳು ಪ್ರಸಾರವಾಗುತ್ತಿದೆ. ಈಗಷ್ಟೇ ಯಾರೋ ಒಬ್ಬರು ಗೌತಮ್ ದಿವಾನ್ ಮನೆಯಲ್ಲಿ ಲ್ಯಾಂಡ್ ಲೈನ್ ಗೆ ಬಾಂಬ್ ಫಿಕ್ಸ್ ಮಾಡಿ, ಅದು ಸ್ಫೋಟಿಸುವಂತೆ ಮಾಡಿದ್ದರು. ಆದರೆ ಅದೃಷ್ಟವಶಾತ್ ದೊಡ್ಡ ಸಮಸ್ಯೆಯೊಂದು ಸಣ್ಣದರಲ್ಲೆ ಮುಗಿದು ಹೋಗಿದೆ. 
 

ಭೂಮಿಕಾ ಫೋನ್ ರಿಸೀವ್ ಮಾಡಿ, ಇನ್ನೇನು ಇಡುವ ಸಮಯದಲ್ಲಿ ಮನೆಯೊಳಗೆ ಬರುವ ಜೈದೇವ್, ಅತ್ತಿಗೆಗೆ ಫೋನ್ ನಲ್ಲಿ ಬಾಂಬ್ ಇರೋದಾಗಿ, ಫೋನ್ ರಿಸೀವರ್ ಇಟ್ರೆ ಬಾಂಬ್ ಸ್ಪೋಟಿಸೋದಾಗಿಯೂ ಹೇಳುತ್ತಾನೆ. ಇದನ್ನ ಕೇಳಿ ಮನೆಮಂದಿ ಶಾಕ್ ಆಗ್ತಾರೆ. ಭೂಮಿ ಮತ್ತು ಜೈದೇವ್ ಜೊತೆಯಾಗಿ ಸೇರಿ ಫೋನನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಿ ಎಸಿತಾರೆ. 
 

Tap to resize

ಬಾಂಬ್ ಸ್ಪೋಟಗೊಂಡ ರಭಸಕ್ಕೆ ಭೂಮಿ ಮತ್ತು ಜೈದೇವ್ ನೆಲಕ್ಕೆ ಬೀಳುತ್ತಾರೆ. ಇಬ್ಬರ ಕೈಗೂ ಗಾಯವಾಗುತ್ತೆ. ಭೂಮಿಕಾ, ಕೈ, ಕಾಲು ಎರಡೂ ಕಡೆ ಗಾಯವಾಗಿತ್ತು, ವೈದ್ಯರು ರೆಸ್ಟ್ ತೆಗೆದುಕೊಳ್ಳೋಕೆ ಹೇಳಿದ್ದಾರೆ. ಇದೀಗ ಭೂಮಿಕಾ ಆರೈಕೆ ಮಾಡೋದಕ್ಕೆ ಯಾರದರೂ ನಂಬಿಕಸ್ಥರು ಬೇಕೆನ್ನುವ ಚರ್ಚೆ ಗೌತಮ್ ಮತ್ತು ಆನಂದ್ ನಡುವೆ ನಡೆಯುತ್ತೆ. 

ಆನಂದ್ ಸಲಹೆಯಂತೆ, ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ನೆರವಾಗುತ್ತಿರುವ ಸುಧಾಳನ್ನೆ ಆನಂದ್, ಗೌತಮ್ ಮನೆಗೆ ಕರೆದುಕೊಂಡು ಬರೋದಾಗಿ ತಿಳಿಸುತ್ತಾನೆ. ಇದೀಗ ಸುಧಾ ಕೊನೆಗೂ ಗೌತಮ್ ಮನೆಗೆ ಭೂಮಿಕಾ ಆರೈಕೆಗಾಗಿ ಎಂಟ್ರಿ ಕೊಟ್ಟಾಗಿದೆ. ಗೌತಮ್ ಮತ್ತು ಸುಧಾ ಮುಖಾಮುಖಿಯಾಗಿದ್ದೂ ಆಗಿದೆ. 
 

ಸುಧಾಗೆ ಈಗಾಗಲೇ ತಾನು ಗೌತಮ್ ದಿವಾನ್ (Goutham Diwan)ಮನೆಗೆ ಎಂಟ್ರಿ ಕೊಡೋದು ಗೊತ್ತಾಗಿತ್ತು. ಅದಕ್ಕಾಗಿಯೇ ಆಕೆಯನ್ನು ಆನಂದ್ ಮನೆಯಲ್ಲಿ ಕೆಲಸಕ್ಕೆ ಯಾರೋ ಒಬ್ಬರು ಸೇರಿಸಿದ್ದು ಹೌದು, ಅವರ ಮುಖ್ಯವಾದ ಟಾರ್ಗೆಟ್ ಇದ್ದದ್ದು, ಗೌತಮ್ ಮನೆಗೆ ಎಂಟ್ರಿ ತೆಗೆದುಕೊಳ್ಳೋದು, ಇದೀಗ ಆ ಕೆಲಸ ಕೂಡ ಆಗಿದೆ. 

ಗೌತಮ್ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದ ಸುಧಾಗೆ ಇದೀಗ, ತನಗೆ ಹಣ, ಉಡುಗೆ ಕೊಟ್ಟು ಸಹಾಯ ಮಾಡಿದ, ತಾನು ಅಣ್ಣ ಎಂದು ಬಾಯಿತುಂಬಾ ಕರೆದ, ಚಿನ್ನದ ಬಳೆಗಳನ್ನು ನೀಡಿದ ವ್ಯಕ್ತಿಯೇ ಗೌತಮ್ ದಿವಾನ್ ಅನ್ನೋದು ಗೊತ್ತಾಗಿ ಶಾಕ್ ಆಗಿದೆ. ಅಮ್ಮನ ಆರೋಗ್ಯ ಸುಧಾರಣೆಗಾಗಿ, ಆಪರೇಶನ್ ಮಾಡಿಸೋದಕ್ಕೆ ಹಣಕ್ಕಾಗಿ ಸುಧಾ, ಮೂರನೇ ವ್ಯಕ್ತಿ ಹೇಳಿದ್ದನ್ನು ಕೇಳಿಕೊಂಡು, ಅದನ್ನೆ ಅನುಸರಿಸುತ್ತಾ ಬಂದಿದ್ದಾಳೆ. 
 

ಸ್ವಭಾವತಃ ತುಂಬಾನೇ ಒಳ್ಳೆಯವಳಾಗಿರುವ ಸುಧಾಗೆ, ಕಪಟ ಮೋಸಗಳೇ ಗೊತ್ತಿಲ್ಲ, ಹಾಗಾಗಿ ನನ್ನನ್ನು ಗೌತಮ್ ದಿವಾನ್ ಮನೆಗೆ ಕರೆಸುವ ವ್ಯಕ್ತಿ ನನ್ನಿಂದ ಯಾವುದೇ ಕೆಟ್ಟ ಕೆಲಸ ಮಾಡಿಸದೇ ಇರಲಿ ಎಂದು ಆ ದೇವರಲ್ಲಿ ಈಗಾಗಲೇ ಬೇಡಿಕೊಂಡಿದ್ದಾಳೆ. ಆದರೆ ನಿಜವಾಗಿಯೂ ಸುಧಾ ಅಂದುಕೊಂಡಂತೆ ಆಗುತ್ತಾ? ಅಥವಾ ಗೌತಮ್ ದಿವಾನ್ ಮನೆಯಲ್ಲಿ ಸಂಚು ರೂಪಿಸೋದಕ್ಕೇನೆ ಸುಧಾ ಎಂಟ್ರಿಯಾಗಿದಾ? 
 

ಗೌತಮ್ ಮತ್ತು ಸುಧಾ ಒಡಹುಟ್ಟಿದ ಅಣ್ಣ -ತಂಗಿಯರು. ಆದರೆ ಆ ವಿಷ್ಯ ಇಬ್ಬರಿಗೂ ಗೊತ್ತಿಲ್ಲ. ಇದೀಗ ಅಣ್ಣ ಎಂದು ಗೊತ್ತಿಲ್ಲದೇ ಸುಧಾ ತನ್ನ ಸ್ವಂತ ಅಣ್ಣ ಗೌತಮ್ ದಿವಾನ್ ವಿರುದ್ಧ ಸಂಚು ರೂಪಿಸುತ್ತಾಳ? ಮನೆಗೆ ಕೆಡುಕು ಬಯಸುತ್ತಾಳ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!