ಪುಟ್ಟ ಹುಡುಗಿ ರೀತಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ ಸಂಜನಾ ಚಿದಾನಂದ್; ಫೋಟೋ ವೈರಲ್

First Published | Nov 18, 2024, 3:20 PM IST

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಗ್ ಬಾಸ್ ಸಂಜನಾ. ಪುಟ್ಟ ಹುಡುಗಿ ರೀತಿ ಮನೆ ಅಲಂಕಾರ ಮಾಡಿಸಿಕೊಂಡ ನಟಿ............
 

ಕನ್ನಡ ಸೀರಿಯಲ್, ಕನ್ನಡ ಕಿರುತೆರೆ ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಸಂಜನಾ ಚಿದಾನಂದ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. 

ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿದ ನಂತರ ಸಂಜನಾ ಸಖತ್ ಜನಪ್ರಿಯತೆ ಪಡೆದರು. ಕಿರಿಕ್ ಕೀರ್ತಿ, ಮೊಂಬತ್ತಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ನೀಲಿ ಕಲುವುಲು ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.

Tap to resize

ಇದೀಗ ಸಂಜನಾ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪಿಂಕ್ ಬಣ್ಣದ ಬಾರ್ಬಿ ಡಿಸೈನರ್ ಗೌನ್ ಧರಿಸಿ ಮಿಂಚಿದ್ದಾರೆ. 

ಸಂಜನಾ ಹುಟ್ಟುಹಬ್ಬದಂದು ಇಡೀ ಮನೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿದ್ದಾರೆ. ನೀಲಿ ಮತ್ತು ಪಿಂಕ್ ಬಣ್ಣದ ಬಲೂನ್‌ಗಳಿಂದ ಅಲಂಕಾರ ಮಾಡಿದ್ದಾರೆ.

ಕೇಕ್ ಕಟ್ ಮಾಡುವ ಟೇಬಲ್‌ ಮುಂದೆ ಮರ್ಮೆಡ್‌ ಡಿಸೈನ್‌ ಟೇಬಲ್ ಮಾಡಿಸಿದ್ದಾರೆ. 'ನನ್ನ ಹುಟ್ಟುಹಬ್ಬದಂದು ವಿಶ್ ಮಾಡಿದ ಪ್ರತಿಯೊಬ್ಬರಿಗೂ ವಂದನೆಗಳು.' ಎಂದು ಸಂಜನಾ ಬರೆದುಕೊಂಡಿದ್ದಾರೆ.

'ಅತಿ ಹೆಚ್ಚು ಪ್ರೀತಿ ಸಿಗುವುದು ಹಾಗೂ ವರ್ಸ್ಟ್‌ ಆಗಿರಲು ಸಾಧ್ಯವಾಗುವುದು ನಮ್ಮ ಮನೆಯಲ್ಲಿಯೇ. ಖುಷಿ ಕುಟುಂಬ..ನೆಮ್ಮದಿ ಜೀವನ' ಎಂದು ಸಂಜನಾ ಹೇಳಿದ್ದಾರೆ.

Latest Videos

click me!