ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಗೌರಿಪುತ್ರದ ಕಥೆಯು ಪುನೀತ್ ರಾಜ್‌ಕುಮಾರ್ ಅವರ ಸಿನಿಮಾವನ್ನು ಹೋಲುತ್ತಿದೆ. ಗೆಳೆಯನ ಪ್ರೇಯಸಿ ಎಂದು ಭಾವಿಸಿ ಮದುವೆ ಮಂಟಪದಿಂದ ಕಾವ್ಯಾಳನ್ನು ಕಾರ್ತಿಕ್ ತಪ್ಪಾಗಿ ಕರೆತರುವ ದೃಶ್ಯವು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಸೋಮವಾರದಿಂದ ಜೀ ಕನ್ನಡ ಸೀರಿಯಲ್‌ಗಳ ಸಾಲಿಗೆ ಗೌರಿಪುತ್ರ ಸೇರ್ಪಡೆಯಾಗಿದೆ. ಅತ್ಯಂತ ಅದ್ಧೂರಿತನದಿಂದ ಗೌರಿಪುತ್ರ ಕಥೆಯನ್ನು ಪರದೆ ಮೇಲೆ ತೆಗೆದುಕೊಂಡು ಬರಲಾಗುತ್ತಿದೆ. ಆದರೆ ಸೀರಿಯಲ್ ಮೂರನೇ ಸಂಚಿಕೆಯಲ್ಲಿ ಗೌರಿಪುತ್ರನ ಕಥೆಯನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾ ಜೊತೆ ವೀಕ್ಷಕರು ಹೋಲಿಕೆ ಮಾಡುತ್ತಿದ್ದಾರೆ.
25
ವಧು ಕಾವ್ಯಾ
ಹೌದು, ಬುಧವಾರದ ಸಂಚಿಕೆಯಲ್ಲಿ ಮದುವೆ ಮನೆಯಿಂದ ನಾಯಕಿ ಕಾವ್ಯಾ ಓಡಿ ಹೋಗುತ್ತಿರುತ್ತಾಳೆ. ಕಾವ್ಯಾಳನ್ನು ಬೆನ್ನತ್ತಿದ್ದವರಿಗೆ ಕಾರ್ತಿಕ್ ಸಹಾಯ ಮಾಡುತ್ತಾನೆ. ಇಲ್ಲಿಂದ ಕಾರ್ತಿಕ್ ಗೆಳೆಯನ ಮದುವೆಗೆ ಹೋಗುತ್ತಾನೆ. ಆದ್ರೆ ಅಲ್ಲಿ ತನ್ನ ಪ್ರೇಯಸಿಗೆ ಬಲವಂತವಾಗಿ ಬೇರೊಂದು ಮದುವೆ ಮಾಡಿಸಲಾಗುತ್ತಿದೆ ಎಂದು ಕಾರ್ತಿಕ್ ಗೆಳೆಯ ಹೇಳುತ್ತಾನೆ.
35
ಗೆಳೆಯನ ಪ್ರೇಯಸಿ ಯಾರು?
ಗೆಳೆಯನ ಪ್ರೇಯಸಿ ಯಾರು? ಆಕೆ ಹೆಸರು ಏನು ಎಂದು ತಿಳಿದುಕೊಳ್ಳದೇ ಇಲ್ಲಿ ಕಾರ್ತಿಕ್ ಎಡವುತ್ತಾನೆ. ಮಾರ್ಗಮಧ್ಯೆ ನೋಡಿದ ವಧುವೇ ಗೆಳೆಯನ ಪ್ರೇಯಸಿ ಎಂದು ತಿಳಿದು, ಕಲ್ಯಾಣಮಂಟಪಕ್ಕೆ ಹೋಗಿ ಆಕೆಯನ್ನು ಕರೆದುಕೊಂಡು ಬರುತ್ತಾನೆ. ಆದ್ರೆ ಇಲ್ಲಿ ಬರುತ್ತಿದ್ದಂತೆ ಆಕೆ ತನ್ನ ಪ್ರೇಯಸಿ ಅಲ್ಲ ಎಂದು ಗೆಳೆಯ ಹೇಳಿದ್ದನ್ನು ಕೇಳಿ ಕಾರ್ತಿಕ್ ಶಾಕ್ ಆಗುತ್ತಾನೆ. ಇತ್ತ ಬೇಡದ ಮದುವೆಯಿಂದ ತಪ್ಪಿಸಿಕೊಂಡ ಖುಷಿ ಕಾವ್ಯಾಳಲ್ಲಿ ಕಾಣಿಸುತ್ತದೆ. ಮುಂದೆ ಈ ಕಾವ್ಯಾಳನ್ನೇ ಕಾರ್ತಿಕ್ ಮದುವೆಯಾಗ್ತಾನೆ.
ಈ ಎಲ್ಲಾ ದೃಶ್ಯಗಳನ್ನು ನೋಡಿದ ವೀಕ್ಷಕರು, ಇದನ್ನು ಪುನೀತ್ ರಾಜ್‌ಕುಮಾರ್ ನಟನೆಯ 'ರಾಮ್' ಸಿನಿಮಾಗೆ ಹೋಲಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಮಂಟಪದ ಹೆಸರು ತಿಳಿದುಕೊಳ್ಳದ ಪುನೀತ್, ವಧು ಪ್ರಿಯಾಮಣಿಯನ್ನು ಅಪಹರಿಸಿಕೊಂಡು ಬರುತ್ತಾನೆ. ಪ್ರಿಯಾಮಣಿ ಇಲ್ಲಿ ನನಗೆ ಆ ಮದುವೆ ಇಷ್ಟವಿರಲಿಲ್ಲ ಎಂದು ಹೇಳುತ್ತಾನೆ. ಮುಂದೆ ರಾಮ್ ಸಿನಿಮಾದಲ್ಲಿ ನಾಯಕ-ನಾಯಕಿಗೆ ಪ್ರೇಮಾಂಕುರವಾಗುತ್ತದೆ.
55
ಪ್ರತಿದಿನ ಸಂಜೆ ಏಳು ಗಂಟೆಗೆ ಪ್ರಸಾರ
ತಾಯಿ ಗೌರಿಗೆ ತವರು ಕೊಡಿಸಲು ಹೋದ ಮಗ ಕಾರ್ತಿಕ್, ಹೊಸ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ಸೋದರಮಾವನ ಮಗಳನ್ನು ಮದುವೆಯಾಗಲು ಒಪ್ಪುವ ಕಾರ್ತಿಕ್, ಕೊನೆ ಕ್ಷಣದಲ್ಲಿ ಬೇರೆ ಯುವತಿಯನ್ನು ಮದುವೆಯಾಗುತ್ತಾನೆ. ಇಲ್ಲಿಂದ ಕಥೆ ಹೇಗೆ ಸಾಗಲಿದೆ ಎಂಬುವುದು ಸದ್ಯದ ಸಸ್ಪೆನ್ಸ್ ಆಗಿದೆ. ಅಮೃತಧಾರೆ ಸೀರಿಯಲ್ ಸ್ಥಾನಕ್ಕೆ ಗೌರಿಪುತ್ರ ಬಂದಿದ್ದು, ಇದು ಪ್ರತಿದಿನ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.