Jai Lalitha Serial: ಸರ್ವೇ ಜನಾಃ ಸುಖಿನೋ ಭವಂತು ಎಂದವ್ರಿಗೆ ನಿಜವಾದ ಲೋಕ ಕಲ್ಯಾಣದ ಪಾಠ ಮಾಡ್ತಾಳಾ ಲಲಿತಾ?

Published : Dec 03, 2025, 03:03 PM IST

Jai Lalitha Serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ 'ಜೈ ಲಲಿತಾ' ಧಾರಾವಾಹಿ ಪ್ರಸಾರ ಆಗುತ್ತಿದೆ. ಶ್ರೀ ಭ್ರಮರೀ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀನಿಧಿ ಡಿ ಎಸ್ ನಿರ್ಮಾಣ ಮಾಡುತ್ತಿದ್ದು‌, ದರ್ಶಿತ್ ಭಟ್‌ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ 8ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

PREV
15
ಕಥೆ ಏನು?

ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರುವ ಲಲಿತಾ, ಅಪ್ಪನಿಗೆ ಮುದ್ದಿನ ಮಗಳು, ಊರಿನವರಿಗೆ ಮನೆ ಮಗಳು. ಇವಳಿಗೆ ರಾಕಿಂಗ್‌ ಸ್ಟಾರ್‌ ಯಶ್‌ ಅಂದರೆ ತುಂಬ ಇಷ್ಟ. ಯಶ್‌ ರೀತಿ ಹುಡುಗನನ್ನು ಮದುವೆ ಆಗೋ ಆಸೆ ಅವಳಿಗೆ.

25
ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆ

ಅದೇ ಊರಿನಲ್ಲಿರುವ ರಾಜಕಾರಣಿ ದೇವರಾಜ್ ಚಕ್ರವರ್ತಿ ಅವರ ಎರಡನೇ ಮಗ ಜೈರಾಜ್ ತನಗನಿಸಿದನ್ನೇ ಮಾಡುತ್ತಾನೆ, ತಾನು ಹೇಳಬೇಕಾಗಿದ್ದನ್ನೇ ಹೇಳುತ್ತಾನೆ. ಆಮೇಲೆ ಅಪ್ಪನ ಆಸೆಯಂತೆ ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗುತ್ತಾಳೆ.

35
ಲಲಿತಾ ಜೀವನ ಏನಾಗಲಿದೆ?

ಮಗನಿಗೆ ಇಷ್ಟವಿಲ್ಲದಿದ್ದರೂ ಮುಂದೆ ದೇವರಾಜ್ ಚಕ್ರವರ್ತಿ ಸ್ವಾರ್ಥಕ್ಕಾಗಿ ಲಲಿತಾಳನ್ನು ಸೊಸೆಯನ್ನಾಗಿ ಮಾಡಿಕೊಳ್ತಾನೆ. ನಂತರ ಆಕೆಯ ನಡೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ. ಮದುವೆಯೇ ಕನಸು ಇಟ್ಟುಕೊಂಡಿರುವವರಿಗೆ, ಮದುವೆಯ ಜೀವನ ಮುಳ್ಳಿನಂತಾಗುತ್ತಾ?

45
ಕಥೆ ಏನು?

ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಸ್ಥಾನವನ್ನು ಪಡೆದುಕೊಳ್ತಾಳ? ಆಕೆಯ ಮುಗ್ದತೆಗೆ ಕರಗಿ ಜೈರಾಜ್ ಮನಸೋಲ್ತಾನಾ? ಅಲ್ಲಿದ್ದವರ ಸಮಸ್ಯೆ ಸರಿ ಹೋಗುತ್ತದಾ ಎಂದು ಕಾದು ನೋಡಬೇಕಿದೆ.

55
ಪಾತ್ರಧಾರಿಗಳು ಯಾರು?

ಜೈರಾಜ್ ಆಗಿ ಶಿವಾಂಕ್ ಹೀರೋ ಆಗಿದ್ದಾರೆ. ಲಲಿತಾ ಪಾತ್ರದಲ್ಲಿ ಮನಸ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಾವನಾಗಿ ಸುನಿಲ್‌ ಪುರಾಣಿಕ್, ಅತ್ತೆಯಾಗಿ ಸ್ಪಂದನಾ ನಟಿಸುತ್ತಿದ್ದಾರೆ. ಉಳಿದಂತೆ ರೋಹಿತ್, ನಿರಂಜನ್, ರಶ್ಮಿತಾ, ಶ್ವೇತಾರಾವ್ ಸೇರಿದಂತೆ ಅನೇಕ ಕಲಾವಿದರು ನಟಿತ್ತಿದ್ದಾರೆ. ’ಸ್ಟಾರ್ ಸುವರ್ಣ’ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಸೋಮವಾರದಿಂದ (ಡಿಸೆಂಬರ್ 8) ’ಜೈ ಲಲಿತಾ’ ಧಾರಾವಾಹಿ ಪ್ರಸಾರವಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories