BiggBoss ಗೆ ಕರೆದಿಲ್ವಾ ಕೇಳಿದ್ರೆ ನಾಯಿ ಉದಾಹರಣೆ ಕೊಟ್ಟ ಲಾಯರ್​ ಜಗದೀಶ್​! ಹೊಸ ಷೋ ಮೂಲಕ ಬಿಗ್​ಬಾಸ್​ಗೇ ಠಕ್ಕರ್?

Published : Dec 03, 2025, 03:00 PM IST

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರನ್ನು ಮತ್ತೆ ಮನೆಗೆ ಆಹ್ವಾನಿಸಿಲ್ಲ. ಈ ಬಗ್ಗೆ ಮಾತನಾಡಿದ ಅವರು, ತಾವೇ ಖುದ್ದಾಗಿ ಹೊಸ ರಿಯಾಲಿಟಿ ಷೋ ಆರಂಭಿಸುವುದಾಗಿ ತಿಳಿಸಿದ್ದಾರೆ.

PREV
16
ಸೀಸನ್ 11ರ ಸೆನ್ಸೇಷನ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಸೆನ್ಸೇಷನ್ ಆಗಿದ್ದ ಲಾಯರ್ ಜಗದೀಶ್ ಮೂರನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದರು. ಆದರೆ, ಇದ್ದ ಮೂರು ವಾರಗಳಲ್ಲಿಯೇ ಅಭಿಮಾನಿಗಳ ಮನರಂಜಿಸಿದ್ದರು.

26
12ನೇ ಸೀಸನ್​ಗೆ ಆಹ್ವಾನವಿಲ್ಲ?

ಇದೀಗ ಇದೇ ಸೀಸನ್​ನ ಕೆಲವು ಸ್ಪರ್ಧಿಗಳನ್ನು ಬಿಗ್​ಬಾಸ್​ ಮನೆಯೊಳಕ್ಕೆ ಆಹ್ವಾನಿಸಿದರೂ ಲಾಯರ್ ಜಗದೀಶ್​ (Bigg Boss Lawyer Jagadish) ಅವರು ಮನೆಗೆ ಹೋಗಿಲ್ಲ. ಆದರೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಿದೇ ಒಳಗೆ ಹೋದವರು ಚೆನ್ನಾಗಿ ಆಡಲಿ, ಹೋದಾ ಪುಟ್ಟಾ, ಬಂದಾ ಪುಟ್ಟಾ ಆಗದೇ ಇರಲಿ ಎಂದಿದ್ದಾರೆ.

36
ನಾಯಿಯ ಉದಾಹರಣೆ

ಬಿಗ್​ಬಾಸ್​ಗೆ ನಿಮಗೆ ಕರೆದಿಲ್ವಾ ಎನ್ನುವ ಪ್ರಶ್ನೆಗೆ ಕೆಲವು ನಾಯಿಗಳಿಗೆ ಬಿಸ್ಕೆಟ್​ ಹಾಕಿದ್ರೆ ತಿನ್ನುತ್ತೆ, ಕೆಲವು ಬಾಲ ಅಲ್ಲಾಡಿಸತ್ತೆ, ಕೆಲವು ನಾಯಿಗಳು ಬಿಸ್ಕೆಟೂ ತಿನ್ನಲ್ಲ, ಬಾಲನೂ ಅಲ್ಲಾಡಿಸಲ್ಲ ಎನ್ನುತ್ತಲೇ ಮನುಷ್ಯನ ಸ್ವಭಾವವೂ ಹಾಗೆ. ಕೆಲವರು ಕರೆದ ತಕ್ಷಣ ಒಪ್ಪಿಕೊಳ್ತಾರೆ, ಕೆಲವರು ಇಲ್ಲ. ಹೋದವರು ಚೆನ್ನಾಗಿ ಎಲ್ಲರನ್ನೂ ರಂಜಿಸಿ ಬರಲಿ ಎಂದಷ್ಟೇ ಹೇಳಬಲ್ಲೆ ಎಂದು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ.

46
ಬಿಗ್​ಬಾಸ್​ಗೆ ಠಕ್ಕರ್​?

ಯಾವ ಷೋನಲ್ಲಿ ಛಾನ್ಸ್​ ಸಿಗದಿದ್ದರೆ ಏನಂತೆ ಎನ್ನುತ್ತಲೇ ಖುದ್ದು ಹೊಸದೊಂದು ರಿಯಾಲಿಟಿ ಷೋಗೆ ತಾವು ಸಜ್ಜಾಗಿರುವುದಾಗಿ ಅವರು ತಿಳಿಸಿದ್ದಾರೆ. ನಾನೇ ಖುದ್ದಾಗಿ ಒಂದು ಷೋ ಮಾಡುತ್ತಿದ್ದೇನೆ. ಇದೇನು ಬಿಗ್​ಬಾಸ್​ಗೆ ಕಾಂಪಿಟೀಷನ್​ ಅಂತೇನೂ ಅಲ್ಲ. ಆದರೂ ಯಾವುದೋ ಒಂದು ಬಾಸ್​ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಲಾಯರ್​ ಜಗದೀಶ್​.

56
ಸದ್ದು ಮಾಡ್ತಿರೋ ಲಾಯರ್​

ಅಷ್ಟಕ್ಕೂ, ವಿವಾದಗಳಿಗೂ, ಲಾಯರ್ ಜಗದೀಶ್​ಗೂ ಎಲ್ಲಿಲ್ಲದ ನಂಟು ಎಂದೇ ಹೇಳಲಾಗುತ್ತದೆ. ಯಾವಾಗಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಅವರು ಸದ್ದು ಮಾಡುತ್ತಾರೆ.

66
ಜಾತಿ ನಿಂದನೆ

ಕೆಲ ತಿಂಗಳ ಹಿಂದೆ ಇವರ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿತ್ತು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್​ಐಆರ್​ (FIR) ದಾಖಲು ಮಾಡಲಾಗಿತ್ತು. ಆಗಸ್ಟ್​ನಲ್ಲಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಬಳಿಕ ಅವರು, ‘ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ’ ಎಂದು ಪೋಸ್ಟ್ ಮಾಡಿದ್ದರು.

Read more Photos on
click me!

Recommended Stories