ರಾಘವೇಂದ್ರ ಸ್ವಾಮಿಗಳ ಪವಾಡವನ್ನು ತಿಳಿಸುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ರಾಯರ ಪಾತ್ರವನ್ನು ಮಾಡುತ್ತಿರುವ ನಟ ಪರೀಕ್ಷಿತ್, ತೆರೆ ಮೇಲೆ ಅದ್ಭುತವಾಗಿ ಕಾಣಿಸುತ್ತಾರೆ ನಿಜಾ, ಆದರೆ ತೆರೆಯ ಹಿಂದೆ ಆ ಪಾತ್ರಕ್ಕಾಗಿ ಅವರು ಏನೆಲ್ಲಾ ಅನುಭವಿಸಬೇಕಾಗಿ ಬರುತ್ತದೆ ನೋಡಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಯರ ಪವಾಡಗಳನ್ನು ತಿಳಿಸುವಂತಹ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ಇದೀಗ ರಾಘವೇಂದ್ರ ಸ್ವಾಮಿಗಳಾಗಿ ನಟ ಪರೀಕ್ಷಿತ್ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟ, ತಾವು ತೆರೆ ಹಿಂದೆ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ ಎನ್ನುವುದನ್ನು ತೋರಿಸಿದ್ದಾರೆ.
26
ಪರೀಕ್ಷೀತ್ ಶೇರ್ ಮಾಡಿರೋ ವಿಡೀಯೋದಲ್ಲಿ ಏನಿದೆ?
ರಾಯರ ಪಾತ್ರದಲ್ಲಿ ಪರೀಕ್ಷಿತ್ ಅದ್ಭುತವಾಗಿ ಮಿಂಚುತ್ತಿದ್ದಾರೆ. ಅವರನ್ನು ನೋಡಿದರೆ ಸ್ವತಃ ರಾಯರನ್ನೇ ನೋಡಿದ ಹಾಗಾಗುತ್ತದೆ ಎಂದು ವೀಕ್ಷಕರು ಹೇಳಿದ್ದಾರೆ. ಆದರೆ ಆ ಪಾತ್ರಕ್ಕಾಗಿ ತಾವು ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ ಎನ್ನುವುದನ್ನು ಪುಟ್ಟದಾಗಿ ವಿಡೀಯೋ ಮಾಡಿ ನಟ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.
36
ಪಿತೃ ತರ್ಪಣ ಸೀನ್ ಗಾಗಿ ನೀರಿಗಿಳಿದಿದ್ದ ಪರೀಕ್ಷಿತ್
ಪರೀಕ್ಷಿತ್ ರಾಯರ ಪಾತ್ರದಲ್ಲಿ ನಟಿಸಲು ಆರಂಭಿಸಿದ ಮೇಲೆ ಮೊದಲ ದೃಶ್ಯದಲ್ಲಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ, ಕೇಶ ಮುಂಡನ ಮಾಡಿ, ಪಿತೃಗಳಿಗೆ ತರ್ಪಣ ಬಿಡುವಂತಹ ದೃಶ್ಯವನ್ನು ದೃಶ್ಯೀಕರಿಸಿದ್ದಾರೆ. ತೆರೆ ಮೇಲೆ ನೀರಲ್ಲಿ ಮುಳುಗಿ ಏಳುವ ದೃಶ್ಯ ಸೆಕೆಂಡುಗಳ ಕಾಲ ಬಂದರೂ ಸಹ ಆ ದೃಶ್ಯವನ್ನು ಶೂಟ್ ಮಾಡಲು ಹೆಚ್ಚು ಸಮಯಗಳ ಕಾಲ ಪರೀಕ್ಷಿನಲ್ಲಿ ನೀರಿನಲ್ಲಿ ಮುಳುಗಿ ಕುಳಿತುಕೊಳ್ಳಬೇಕಾಗಿತ್ತು.
ಹೆಚ್ಚು ಸಮಯ ನೀರಲ್ಲಿ, ಬಿಸಿಲಿನಲ್ಲಿ ಇದ್ದ ಪರಿಣಾಮ ಮೂರು ದಿನಗಳ ಬಳಿಕ ಪರೀಕ್ಷಿತ್ ಮೈಯೆಲ್ಲಾ ಕೆಂಪಾಗಿ, ಚರ್ಮ ಎದ್ದು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೈ ಪೂರ್ತಿಯಾಗಿ ಈ ರೀತಿಯಾಗಿದೆ. ಸ್ಕಿನ್ ಬರ್ನಿಂಗ್ ಅಥವಾ ನೀರಿನಿಂದಾದ ಅಲರ್ಜಿಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಆದರೆ ನಟ ಆರಾಮವಾಗಿದ್ದಾರೆ. ಯಾವುದೂ ಫ್ರೀ ಆಗಿ ಬರೋದಿಲ್ಲ ಕಮೀಟ್ ಮೆಂಟ್ ಮುಖ್ಯ (Nothing comes free it demands commitment) ಎಂದು ನಟ ವಿಡಿಯೋ ಶೇರ್ ಮಾಡಿದ್ದಾರೆ.
56
ಡೆಡಿಕೇಶನ್ ಗೆ ವೀಕ್ಷಕರ ಸೆಲ್ಯೂಟ್
ನಿಮ್ಮ ಶ್ರಮಕ್ಕೆ ರಾಯರು ಕಾಪಾಡುತ್ತಾರೆ, ರಾಯರು ಒಳ್ಳೆದ್ ಮಾಡ್ತರೇ Hats Off To Your Dedication Sir. ರಾಯರನ್ನೇ ನೋಡ್ದಂಗ್ ಆಗುತ್ತೆ. ಗುರು ರಾಘವೇಂದ್ರ ಸ್ವಾಮಿ ಒಳ್ಳೆದು ಮಾಡುತ್ತಾರೆ. ನಿಮಗೆ.ಶ್ರೀ ಗುರು ರಾಯರ ಪಾತ್ರಕ್ಕೆ ನೀವೇ ತುಂಬಾ ಅಚ್ಚುಕಟ್ಟು..ಸರ್ ನಿಮಗೆ ಹ್ಯಾಟ್ಸ್ ಆಫ್ ಸರ್..ನೀವು ಮತ್ತೆ ಗುರು ರಾಯರ ಪಾತ್ರ ಮಾಡ್ತಿರೋದು ನನಗಂತೂ ತುಂಬಾ ಇಷ್ಟ ಆಯ್ತು. ರಾಯರ ಆಶೀರ್ವಾದ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ನೂರಾರು ಕಾಲ ಇರ್ಲಿ ಒಳ್ಳೇದು ಆಗ್ಲಿ ಸರ್ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
66
14 ವರ್ಷಗಳ ಬಳಿಕ ಎರಡನೇ ಬಾರಿ ರಾಯರ ಪಾತ್ರದಲ್ಲಿ ಪರೀಕ್ಷಿತ್
ಪರೀಕ್ಷಿತ್ ಬರೋಬ್ಬರಿ 14 ವರ್ಷಗಳ ಬಳಿಕ ಮತ್ತೆ ರಾಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪರೀಕ್ಷಿತ್ ಸ್ಟಾರ್ ಸುವರ್ಣ ವಾಹಿನಿಯ ‘ರಾಘವೇಂದ್ರ ವೈಭವ’ ಧಾರಾವಾಹಿಯಲ್ಲಿ ರಾಯರ ಪಾತ್ರದಲ್ಲಿ ನಟಿಸಿದ್ದರು. ಈ ನಟನಲ್ಲಿ ಜನ ರಾಘವೇಂದ್ರ ಸ್ವಾಮಿಗಳನ್ನೇ ಕಂಡಿದ್ದರು. ಇದೀಗ ಮತ್ತೆ ತಮ್ಮ ಡೆಡಿಕೇಶನ್ ಮೂಲಕ ರಾಯರ ಪಾತ್ರದಲ್ಲಿ ಜೀವಿಸುತ್ತಿದ್ದಾರೆ ಪರೀಕ್ಷಿತ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.