ಬಿಗ್ ಬಾಸ್ ಸೀಸನ್ 12ಗೆ ಎಂಟ್ರಿ ಕೊಡ್ತಾರ ಕರಿಮಣಿ ನಾಯಕಿ ಸ್ಪಂದನಾ ಸೋಮಣ್ಣ?

Published : Sep 27, 2025, 08:35 AM IST

ಬಿಗ್ ಬಾಸ್ ಸೀಸನ್ 12  ಇನ್ನೇನು ಶುರುವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಸ್ಪಂದನಾ ಸೋಮಣ್ಣ, ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

PREV
16
ಬಿಗ್ ಬಾಸ್ ಸೀಸನ್ 12

ಬಿಗ್ ಬಾಸ್ ಸೀಸನ್ 12 (Bigg Boss Season 12) ಇನ್ನೇನು ಶುರುವಾಗಲಿದೆ. ಸುದೀಪ್ ಇರುವ ಪ್ರೊಮೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಜನರು ಕುತೂಹಲದಿಂದ ಬಿಗ್ ಬಾಸ್ ಆರಂಭ ಕಾಯುವಂತೆ ಮಾಡಿದೆ. ಸೆಪ್ಟೆಂಬರ್ 26ರಿಂದ್ ಬಿಗ್ ಬಾಸ್ ಆರಂಭವಾಗಲಿದೆ.

26
ಸ್ಪರ್ಧಿಗಳ ಬಗ್ಗೆ ಕುತೂಹಲ

ವೀಕ್ಷಕರಿಗಂತೂ ಇದೀಗ ಯಾವ ಸ್ಪರ್ಧಿಗಳು ಬರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಹಲವು ಸಾಂಭವ್ಯ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಿದ್ದು, ಸೀರಿಯಲ್, ಕಾಮಿಡಿ ಶೋ, ಸಿನಿಮಾ ನಟರು, ಸೋಶಿಯಲ್ ಮೀಡಿಯಾ ಸೆನ್ಸೇಶನ್ ಗಳು ಕೂಡ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

36
ಸ್ಪಂದನ ಸೋಮಣ್ಣ

ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಸೀರಿಯಲ್ ನಲ್ಲಿ (Karimani serial)ಸಾಹಿತ್ಯ ಪಾತ್ರದ ಮೂಲಕ ಮಿಂಚಿದ ನಟಿ ಸ್ಪಂದನ ಸೋಮಣ್ಣ ಕೂಡ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

46
ಕರಿಮಣಿಯ ಸಾಹಿತ್ಯ

ಕರಿಮಣಿ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರಕ್ಕೆ ಸ್ಪಂದನಾ ಸೋಮಣ್ಣ (Spandana Somanna) ಜೀವ ತುಂಬಿದ್ದರು. ಸಾಹಿತ್ಯ ಮತ್ತು ಕರ್ಣನ ಜೋಡಿಯನ್ನು ಜನರು ಇಷ್ಟಪಟ್ಟಿದ್ದರು. ಆದರೆ ಈ ಸೀರಿಯಲ್ ಬೇಗನೆ ಮುಗಿಸುವ ಮೂಲಕ ಜನರಿಗೆ ನಿರಾಸೆ ಕಾದಿತ್ತು.

56
ದೊಡ್ಮನೆಗೆ ಎಂಟ್ರಿ ಕೊಡ್ತಾರ

ಇದೀಗ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ನಟಿ ನಿಜವಾಗಿಯೂ ಬಿಗ್ ಬಾಸ್ ಗೆ ಹೋಗ್ತಿದ್ದಾರ ಅನ್ನೋದು ಗೊತ್ತಿಲ್ಲ.

66
ನಟನೆ ಜರ್ನಿ

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಸ್ಪಂದನಾ. ಇವರು 'ನಾನು ನನ್ನ ಕನಸು' ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು., ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ 'ನಚ್ಚಾವೆ' ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ಹಾಗೂ ಕನ್ನಡ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

Read more Photos on
click me!

Recommended Stories