Kipi Keerthi ಖಾಸಗಿ ವಿಡಿಯೋ ಲೀಕ್​: ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​ ಮಾಡಿ ಕೊಟ್ರು ಎಂದು ಘಟನೆ ನೆನೆದು ಕಣ್ಣೀರು

Published : Sep 26, 2025, 06:43 PM IST

'ಹೇಳಿ ಜನರೇ' ಮೂಲಕ ಖ್ಯಾತರಾದ ಸೋಷಿಯಲ್ ಮೀಡಿಯಾ ತಾರೆ ಕಿಪ್ಪಿ ಕೀರ್ತಿ, ತಮ್ಮ ಗೆಳೆಯ ಮುತ್ತು ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಂಪು ಪಾನೀಯದಲ್ಲಿ ಮತ್ತೇನನ್ನೋ ಬೆರೆಸಿ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.  

PREV
18
ಹೇಳಿ ಜನರೇ.. ಮೂಲಕ ಫೇಮಸ್​

ಹೇಳಿ ಜನರೇ ಎನ್ನುತ್ತಲೇ ಸೋಷಿಯಲ್​​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸ್ತಿರೋ ಯುವತಿ ಕಿಪ್ಪಿ ಕೀರ್ತಿ (Kipi Keerthi). ಬಾಲ್ಯದಿಂದಲೂ ತಮ್ಮ ನೋಟದ ಕಾರಣದಿಂದ ಸಾಕಷ್ಟು ನೋವನ್ನು ಎದುರಿಸುತ್ತಲೇ ಬಂದಿದ್ದರೂ, ಬಾಡಿ ಶೇಮಿಂಗ್​ನಿಂದ ತತ್ತರಿಸಿ ಹೋಗಿದ್ದರೂ, ಅದನ್ನೆಲ್ಲಾ ಹಿಮ್ಮೆಟ್ಟಿ ಜನರನ್ನು ನಗಿಸುತ್ತಾ ರೀಲ್ಸ್​ ಮಾಡುತ್ತಿದ್ದ ಯುವತಿ ಈಕೆ.

28
ಕೆಟ್ಟ ಕಮೆಂಟ್ಸ್​ ಸುರಿಮಳೆ

ಸೌಂದರ್ಯದಿಂದಲೇ ಎಲ್ಲವನ್ನೂ ಅಳೆಯುವ ಈ ಕಾಲಘಟ್ಟದಲ್ಲಿ ಈಕೆ ರೀಲ್ಸ್​ ಮಾಡಿದಾಗಲೆಲ್ಲ ಕೆಟ್ಟ ಕಮೆಂಟ್​ ಹಾಕುವವರಿಗೇನೂ ಕೊರತೆ ಇಲ್ಲ. ಒಂದು ಹೆಣ್ಣುಮಗಳ ಮನಸ್ಸಿಗೆ ಯಾವ ರೀತಿಯ ಆಘಾತ ಆಗಬಲ್ಲುದು, ಬಾಲ್ಯದಿಂದಲೂ ಆ ನೋವಿನಲ್ಲಿಯೇ ಬೆಳೆದ ಜೀವವೊಂದಕ್ಕೆ ಅದ್ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ಸ್ವಲ್ಪ ವಿವೇಚನೆ ಇಲ್ಲದೇ, ಅಪಹಾಸ್ಯ ಮಾಡುವ ದೊಡ್ಡ ವರ್ಗವೇ ಇದೆ.

38
ಯೂಟರ್ನ್ ​ಪಡೆದ ಬದುಕು...

ಇದೇ ರೀತಿಯ ವಿಕೃತಿ ತೋರಿಸುವರ ನಡುವೆಯೇ ಏನೋ ಒಂದಿಷ್ಟು ರೀಲ್ಸ್​ ಮಾಡಿಕೊಂಡು ಇದ್ದ ಕಿಪಿ ಕೀರ್ತಿಗೆ ರಿಯಾಲಿಟಿ ಷೋನಲ್ಲಿ ಯಾವಾಗ ಅವಕಾಶ ಸಿಕ್ಕಿತೋ ಅಲ್ಲಿಂದ ಬದುಕು ಬೇರೆಯದ್ದೇ ಟರ್ನ್​ ಪಡೆದುಕೊಂಡಿದ್ದರೂ, ಈಕೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವವರ ಸಂಖ್ಯೆಯೂ ಅಷ್ಟೇ ಏರತೊಡಗಿತು. 

48
ಸುತ್ತವರಿದ ಜನ...

ಈಕೆ ಫೇಮಸ್​ ಆಗುತ್ತಿದ್ದಂತೆಯೇ ಒಂದಿಷ್ಟು ಮಂದಿ ಈಕೆಯ ಸುತ್ತುವರಿದರು. ಅವೆಲ್ಲವೂ ಪ್ರಚಾರದ ಹಪಾಹಪಿಯೇ. ಆದರೆ, ಎಲ್ಲೆಡೆಯೂ ಅಸಡ್ಡೆಯಿಂದಲೇ ಕಾಣುತ್ತಿದ್ದ ಕಿಪಿ ಕೀರ್ತಿಗೆ ಈ ಮಟ್ಟಿನ ಫೇಮಸ್​ ಸಹಜವಾಗಿ ಬೇರೆ ರೀತಿಯಲ್ಲಿಯೇ ಕೊಂಡೊಯ್ದಿದೆ. ಇದೇ ಆಕೆಗೆ ಮುಳುವಾಗಿದೆ.

58
ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​

ಇವಳ ಜೊತೆ ಫ್ರೆಂಡ್​ಷಿಪ್​ಗೂ ಮೀರಿದ ಸ್ನೇಹ ಮಾಡಲು ಬಂದವರೂ ಇದ್ದಾರೆ. ಆ ಬಗ್ಗೆ ಸಾಕಷ್ಟು ಪ್ರಚಾರವೂ ಆಗಿ ಫೇಮಸ್ಸೂ ಆಗಿದ್ದಾರೆ. ಇದಾದ ಬಳಿಕ, ಈಗ ಕಿಪಿ ಕೀರ್ತಿ ಗೆಳೆಯನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತನ್ನ ಆಕೆಯ ಖಾಸಗಿ ಫೋಟೋಗಳನ್ನಿಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ್ದಾನೆ ಎನ್ನುವುದು ಅವರ ಮಾತು.

68
ಖಾಸಗಿ ಫೋಟೋ ಕ್ಲಿಕ್​

ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಕಿಪಿ ಕೀರ್ತಿ, ನನಗೆ ಆತ ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​ ಮಾಡಿದ್ದು, ಆ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಹೀಗೆ ಅಂತ ಬೇರೆ ಬೇರೆಯವರು ಹೇಳಿದ್ರು, ಆಮೇಲೆ ಅದು ನನಗೂ ನಿಜ ಅನ್ನಿಸ್ತಿದೆ ಎಂದು ಕಿಪಿ ಹೇಳಿದ್ದಾರೆ.

78
ಸ್ನೇಹಿತರ ವಿರುದ್ಧ ಕೇಸ್​

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದರ್ಶನ್​ ಎಂಬಾತನ ವಿರುದ್ಧ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಾರೆ. ಕಿಪಿ ಕೀರ್ತಿ ದಾಖಲು ಮಾಡಿರುವ ಕೇಸ್​ ಇನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

88
ಲವ್​ ಬ್ರೇಕಪ್​ ಸುದ್ದಿ

ಅಷ್ಟಕ್ಕೂ, ಈಕೆಯ ಲವ್ ಬ್ರೇಕಪ್‌ಗಳ ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು ಇದೆ. ಮುತ್ತು ಜೊತೆಯಲ್ಲಿ ಬ್ರೇಕಪ್ ಮಾಡಿಕೊಂಡದ್ದೇನೆ. ನನ್ನ ಮತ್ತು ಮುತ್ತು ಜೊತೆ ಎಲ್ಲವೂ ಚೆನ್ನಾಗಿಯೇ ಇತ್ತು. ಸುನೀಲ್ ನನ್ನ ಒಳ್ಳೆಯ ಫ್ರೆಂಡ್. ಸ್ನೇಹ ಹೊರತುಪಡಿಸಿ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ. ಸುನೀಲ್ ಜೊತೆಗಿನ ಸ್ನೇಹವನ್ನು ಮುತ್ತು ಅನುಮಾನದಿಂದ ನೋಡಿದ್ದನು ಎಂದು ಕಿಪಿ ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಹೇಳಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories