Published : Nov 16, 2024, 06:51 PM ISTUpdated : Nov 16, 2024, 06:56 PM IST
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋನು ಶ್ರೀನಿವಾಸ್ ಗೌಡ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋನು ಶ್ರೀನಿವಾಸ್ ಗೌಡ ಶುಕ್ರವಾರ ತಮ್ಮ ಅಭಿಮಾನಿಗಳಿಗೆ ಸಖತ್ ಶಾಕ್ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
27
ಇದರಲ್ಲಿ ಎರಡು ಚಿತ್ರಗಳು ಸಖತ್ ಗಮನ ಸೆಳೆದವು. ಅದಕ್ಕೆ ಕಾರಣ, ಈ ಫೋಟೋಗಳಲ್ಲಿ ಸೋನು ಶ್ರೀನಿವಾಸ್ ಗೌಡ ಅವರೊಂದಿಗೆ ಕರ್ನಾಟಕ ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಇದ್ದರು.
37
ಬಿಎಸ್ ಯಡಿಯೂರಪ್ಪ ಅವರೊಂದಿಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ ಸೋನು ಶ್ರೀನಿವಾಸ್ ಗೌಡ ಅದರ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ.
'ನನ್ನ ಜೀವನದಲ್ಲಿ ಕಂಡಂತ ಮೊದಲ ಮುಗ್ಧ ಮನಸಿನ ಮನುಷ್ಯ ಇವರೆ..' ಎಂದು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಪ್ರಯಾಣ ಮಾಡಿದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೇರುವ ಮುನ್ನ ಒಂದೇ ಬಸ್‌ನಲ್ಲಿ ವಿಮಾನದ ಬಳಿ ಹೋಗುವಾಗ ಯಡಿಯೂರಪ್ಪ ಅವರೊಂದಿಗೆ ಸೋನು ಗೌಡ ಫೋಟೋ ತೆಗೆಸಿಕೊಂಡಿದ್ದಾಳೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುವ ವೇಳೆ ಒಂದೇ ವಿಮಾನದಲ್ಲಿ ಬಿಎಸ್‌ವೈ ಹಾಗೂ ಸೋನು ಗೌಡ ಪ್ರಯಾಣ ಮಾಡಿದ್ದಾರೆ. ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ತಮ್ಮ ಹೊಸ ಮನೆ ಗೃಹಪ್ರವೇಶ ಮಾಡಿಸಿಕೊಂಡಿದ್ದರು. ಅದರ ಖುಷಿಯಲ್ಲಿಯೇ ಮತ್ತೊಂದು ಪ್ರವಾಸಕ್ಕೆ ಸಜ್ಜಾಗಿದ್ದಾರೆ.