ಮನೆಯವರ‌ ಪ್ರಾಣ ಉಳಿಸಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಭೂಮಿಕಾ ?..ಜೈದೇವ್ ಕೈವಾಡ ಇದೆಯಾ?

First Published | Nov 16, 2024, 4:05 PM IST

ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಗೌತಮ್ ದಿವಾನ್ ಮನೆಯಲ್ಲಿ ಬಾಂಬ್ ಸ್ಪೋಟಿಸೋದಕ್ಕೆ ಯಾರೋ ಪ್ಲ್ಯಾನ್ ಮಾಡಿದ್ದು, ಭೂಮಿಕಾ ಪ್ರಾಣಾಪಾಯಕ್ಕೆ ತುತ್ತಾಗಿದ್ದಾಳೆ. 
 

ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಎರಡು ದಿನಗಳ ಹಿಂದೆ ಅಪೇಕ್ಷಾ ತಂದೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಭೂಮಿಕಾ ಆಕೆಯ ಕೆನ್ನೆಗೆ ಭಾರಿಸಿದ್ದಳು. ಆ ಮೂಲಕ ಅಪೇಕ್ಷಾ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು. 
 

ಇದೀಗ ಗೌತಮ್ ಮೊಬೈಲ್ ಗೆ ಆಗಂತುಕರೊಬ್ಬರು ಕರೆ ಮಾಡಿ, ನಿಮ್ಮ ಮನೆಯಲ್ಲಿ ಎಲ್ಲರಿಗೂ ಅಪಾಯವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಇದನ್ನು ಕೇಳಿ ಗಾಬರಿಯಾಗಿರುವ ಆನಂದ್, ಭೂಮಿಕಾಗೆ ಕರೆ ಮಾಡಿ ಎಲ್ಲರೂ ಅಲರ್ಟ್ ಆಗಿರುವಂತೆ , ಯಾವುದೋ ಅಪಾಯ ಇದೆ ಎನ್ನುತ್ತಾನೆ. ಭೂಮಿಕಾ ಈ ವಿಷ್ಯವನ್ನು ಮನೆಮಂದಿಯನ್ನೆಲ್ಲಾ ಕರೆದು ಹೇಳುತ್ತಾಳೆ. ಆದ್ರೆ ಯಾರೋ ಕಾಲ್ ಮಾಡಿ ಹೆದರಿಸಿದ್ರೂ ಅಂತ, ಅದನ್ನ ನೆನಪಿಸಿಕೊಂಡು ಹೆದರಿಕೊಂಡು ಕೂರೋಕೆ ಯಾರೂ ರೆಡಿ ಇಲ್ಲ. ಇದು ಯಾರೋ ಸುಮ್ನೆ ಕರೆ ಮಾಡಿರಬಹುದು ಅಂತ ಶಕುಂತಲಾ ಹೇಳುತ್ತಾಳೆ. 
 

Tap to resize

ಗೌತಮ್ ಗೆ ಒಂದು ಕಡೆ ಆತಂಕ ಇದ್ದರೂ ಅದನ್ನ ತೋರಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಇನ್ನು ಆನಂದ್, ಜೈದೇವ್ ಗೂ ಕರೆ ಮಾಡಿ, ಕರೆಯ ಬಗ್ಗೆ ಹೇಳುತ್ತಾ, ಮನೆಯ ಸುತ್ತಮುತ್ತಲೂ ಯಾರದ್ರೂ ಆಗಂತುಕರು ಸಂಶಾಯಸ್ಪದವಾಗಿ ಓಡಾಡ್ತಿದ್ದಾರ ಅಂತ ವಿಚಾರಿಸ್ತಾನೆ. ಜೈದೇವ್ ಇದನ್ನ ಯಾರು ಮಾಡಿರಬಹುದು ಎಂದು ಯೋಚಿಸುತ್ತಿರೋವಾಗ್ಲೇ ಮನೆಯ ಕೆಲಸದವನೊಬ್ಬ ಮನೆಯಿಂದ ಹೊರಗೆ ಹೋಗೋದನ್ನ ನೋಡಿ ಆತನನ್ನು ಕರೆಯುತ್ತಾನೆ. 
 

ಆತನ ಜೊತೆ ಮಾತನಾಡಿದಾಗ ಸಂಶಾಯಾಸ್ಪದವಾಗಿ ವರ್ತಿಸೋದನ್ನ ನೋಡಿದ ಜೈದೇವ್, ಆತನ ಬ್ಯಾಗ್ ಚೆಕ್ ಮಾಡಿದಾಗ, ಮನೆಯ ಲ್ಯಾಂಡ್ ಲೈನ್ ಫೋನ್ ಆತನ ಬ್ಯಾಗ್ ನಲ್ಲಿ ಇರೋದನ್ನ ನೋಡಿ ವಿಚಾರಿಸಿದಾಗ, ಮನೆಯ ಫೋನ್ ನಲ್ಲಿ ಬಾಂಬ್ ಫಿಕ್ಸ್ ಮಾಡಿರೋದು ತಿಳಿಯುತ್ತೆ, ಯಾರು ಫೋನ್ ರಿಸೀವ್ ಮಾಡಿ ಮತ್ತೆ ಇಡ್ತಾರೋ ಆವಾಗ ಫೋನ್ ಬ್ಲಾಸ್ಟ್ ಆಗುತ್ತೆ ಅನ್ನೋದು ತಿಳಿಯುತ್ತೆ. 
 

ಅಷ್ಟರಲ್ಲಿ ಮನೆಯ ಲ್ಯಾಂಡ್ ಲೈನ್ ರಿಂಗ್ ಆಗುತ್ತೆ, ಭೂಮಿಕಾ ಫೋನ್ ಎತ್ತಿಕೊಂಡು ಮಾತನಾಡಿದಾಗ ಅತ್ತ ಕಡೆಯಿಂದ ಮನೆಯವರಿಗೆ ಅಪಾಯ ಅನ್ನೋ ಮಾಹಿತಿ ಸಿಗುತ್ತೆ, ಭೂಮಿಕಾ ಇನ್ನೇನು ಫೋನ್ ಇಡೋದಕ್ಕೆ ಹೋಗೋವಾಗ, ಓಡಿ ಬರುವ ಜೈದೇವ್, ಅತ್ತಿಗೆ ಫೋನ್ ಕಟ್ ಮಾಡ್ಬೇಡಿ, ಬ್ಲಾಸ್ಟ್ ಆಗುತ್ತೆ ಎನ್ನುವ ಬಗ್ಗೆ ಹೇಳ್ತಾನೆ. ನಂತ್ರ ಇಬ್ಬರು ಫೋನ್ ಹಿಡಿದು, ಅದನ್ನ ದೂರಕ್ಕೆ ಎಸೆಯೋದಕ್ಕೆ ಹೋಗ್ತಾರೆ. 
 

ಫೋನ್ ಏನೋ ಮನೆಯಿಂದ ಹೊರಗೆ ತೆಗೆದುಕೊಂಡು ಬಂದು ಬಿಸಾಕಿದ ನಂತರ ಬ್ಲಾಸ್ಟ್ ಆಯ್ತು. ಆದರೆ ಬಿಸಾಕುವ ಭರದಲ್ಲಿ ಆಯಾತಪ್ಪಿ ಕಲ್ಲಿನ ಮೇಲೆ ಬೀಳುವ ಭೂಮಿಕಾಗೆ ಪ್ರಾಣಾಪಾಯ ಉಂಟಾಗಿದೆ. ಮನೆಯವರ ಪ್ರಾಣ ಉಳಿಸಿ ತಾನೇ ಅಪಾಯದಲ್ಲಿ ಸಿಲುಕಿದ್ಲಾ ಭೂಮಿ? ಅನ್ನೋದು ತಿಳಿಯಬೇಕಾಗಿದೆ. 
 

ಆದ್ರೆ ವಿಕ್ಷಕರಿಗೆ ಮಾತ್ರ ಜೈದೇವ್ (Jaidev) ಮೇಲೆ ಅನುಮಾನ ಶುರುವಾಗಿದೆ. ಜೈ ಒಳ್ಳೆಯವನಾಗೋಕೆ ಭೂಮಿನಾ ಟಾರ್ಗೆಟ್ ಮಾಡಿ ಡುಮ್ಮ ಸರ್ ಕಣ್ಣಲ್ಲಿ ಹೀರೋ ಆಗ್ತಾನೆ ಅಷ್ಟೆ, ಜೈದೇವ್ ದೇವರಂತ ಮನುಷ್ಯ ಆಗಿದ್ದಾನೆ ಅನ್ಕೋಬೇಡಿ ಅವನು ರಣರಾಕ್ಷಸ ಅಂತಾನು ಹೇಳ್ತಿದ್ದಾರೆ ವೀಕ್ಷಕರು. ಇದನ್ನೆಲ್ಲ ಯಾರ್ ಮಾಡಿಸ್ತಿರೋದು ತಿಳಿಯೋಕೆ ಇನ್ನೊಂದಿಷ್ಟು ದಿನ ಕಾಯಬೇಕು. 
 

Latest Videos

click me!