ಬಾಯ್‌ಫ್ರೆಂಡ್‌ ಮತ್ತು ಮಗು ಜೊತೆಗಿರುವ ಫೋಟೋ ವೈರಲ್: 'ಜೋಡಿ ಹಕ್ಕಿ' ನಟಿ ಪಲ್ಲವಿ ಗೌಡ ಗುಟ್ಟು ರಟ್ಟು

First Published | Nov 16, 2024, 3:42 PM IST

ಕನ್ನಡ ಕಿರುತೆರೆಯ ಖ್ಯಾತ ನಟಿಯ ಬಗ್ಗೆ ಹಲವು ವರ್ಷಗಳ ಹಿಂದೆ ಹರಿದಾಡುತ್ತಿದ್ದ ಗಾಸಿಪ್‌ ಈಗ ಮತ್ತೆ ಸುದ್ದಿ ಆಗುತ್ತಿದೆ. ನಟಿ ಕೊಟ್ಟ ಕ್ಲಾರಿಟಿ ಇಲ್ಲಿದೆ..........

ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟಿ ಪಲ್ಲವಿ ಗೌಡ ಇದೀಗ ತೆಲುಗು ಧಾರಾವಾಹಿಗಳಲ್ಲಿ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಹೀಗಾಗಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಕೊಂಚ ಜಾಸ್ತಿ ಆಗಿದೆ.

'ಜೋಡಿ ಹಕ್ಕಿ' ಧಾರಾವಾಹಿ ಮೂಲಕ ಕನ್ನಡಿಗರಿಗೆ ಪಲ್ಲವಿ ಗೌಡ ಹತ್ತಿರವಾಗಿಬಿಟ್ಟರು. ಟಿವಿಯಲ್ಲಿ ನಾಯಕಿ ಹಾಗೂ ಖಳನಾಯಕಿಯಾಗಿ ಕಾಣಿಸುವ ಪಲ್ಲವಿ ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಸ್ವೀಟ್ ವ್ಯಕ್ತಿ ಅಂತ ಸೋಷಿಯಲ್ ಮೀಡಿಯಾ ತುಂಬಾ ಪಾಸಿಟಿವ್ ಕಾಮೆಂಟ್‌ಗಳು.

Tap to resize

ಇನ್ನು ಹಲವು ವರ್ಷಗಳ ಹಿಂದೆ ಪಲ್ಲವಿ ಒಬ್ಬ ವ್ಯಕ್ತಿ ಜೊತೆಗೆ ನಿಂತುಕೊಂಡಿರುವ ಫೋಟೋ ವೈರಲ್ ಆಗಿತ್ತು. ಸ್ನೇಹಿತರು ಅಂದುಕೊಂಡು ಕೆಲವರು ಸುಮ್ಮನಾದರೂ ಆದರೆ ಕಿಡಿ ಹಚ್ಚಿದ್ದು ಅವರ ಕೈಯಲ್ಲಿ ಇದ್ದ ಪುಟ್ಟ ಕಂದಮ್ಮ. ಈ ವಿಚಾರವಾಗಿ ಕೆಲವು ತಿಂಗಳ ಹಿಂದೆ ಪಲ್ಲವಿ ಸ್ಪಷ್ಟನೆ ನೀಡಿದ್ದರಂತೆ.

'ನಾನು ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದು ಹೌದು. ನಾನು ಪ್ರೀತಿ ಮಾಡಿದ್ದೆ ಮದುವೆ ಆಗಬೇಕು ಎಂದುಕೊಂಡಿದ್ದೆ ಆದರೆ ಆಗಲಿಲ್ಲ. ನನಗೆ ಮಗು ಕೂಡ ಇಲ್ಲ' ಎಂದು ಸ್ಪಷ್ಟೆ ಕೊಟ್ಟಿರುವುದಾಗಿ ಖಾಸಗಿ ಕನ್ನಡ ವೆಬ್‌ ವರದಿ ಮಾಡಿತ್ತು.

'ನಾನು ಈಗ ಸಿಂಗಲ್ ಆಗಿದ್ದೇನೆ ಮಿಂಗಲ್ ಆಗೋಕೆ ನಾನು ರೆಡಿ ಇಲ್ಲ. ನಾನು ಸಿಂಗಲ್ ಆಗಿ ಖುಷಿ ಆಗಿದ್ದೇನೆ. ನಾನು ಸ್ವತಂತ್ರವಾದ ಹುಡುಗಿ, ಸಿಂಗಲ್ ಆಗಿದ್ದಾಗ ನನ್ನ ಇಷ್ಟದಂತೆ ಬದುಕಬಹುದು. ಇದ್ದಕ್ಕಿದ್ದಂತೆ ಅದೃಷ್ಟ ಇನ್ನೇನಿದೆ' ಎಂದು ಪಲ್ಲವಿ ಹೇಳಿದ್ದರು. 

ಗಾಳಿಪಟ, ಸೇವಂತಿ, ಮನೆಯೊಂದು ಮೂರು ಬಾಗಿಲು, ಪರಿಣಯ, ಚಂದ್ರ ಚಕೋರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪಲ್ಲವಿ ಅಭಿನಯಿಸಿದ್ದಾರೆ. 

Latest Videos

click me!