ಬಿಗ್ ಬಾಸ್‌ ಸೀಸನ್‌ 10ಕ್ಕೆ ಪ್ರಶಾಂತ್ ಸಂಬರಗಿ ತಾಯಿ ಸ್ಪರ್ಧಿ?; ಸುದೀಪ್‌ ಜೊತೆ ಫೋಟೋ ವೈರಲ್

Published : Jan 29, 2023, 12:29 PM IST

ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಮತ್ತು ತಾಯಿ ಪುಷ್ಪ ಫೋಟೋ ಹಂಚಿಕೊಂಡ ಪ್ರಶಾಂತ್ ಸಂಬರಗಿ. ಬಿಬಿಗೆ ಎಂಟ್ರಿ ಕೊಡ್ಸಿ ಎಂದ ನೆಟ್ಟಿಗರು...

PREV
16
ಬಿಗ್ ಬಾಸ್‌ ಸೀಸನ್‌ 10ಕ್ಕೆ  ಪ್ರಶಾಂತ್ ಸಂಬರಗಿ ತಾಯಿ ಸ್ಪರ್ಧಿ?; ಸುದೀಪ್‌ ಜೊತೆ ಫೋಟೋ ವೈರಲ್

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಕಿಚ್ಚ ಸುದೀಪ್ ಮತ್ತು ತಾಯಿ ಪುಷ್ಪ ಫೋಟೋ ಹಂಚಿಕೊಂಡಿದ್ದಾರೆ. 

26

'ಜೀವನದಲ್ಲಿ ಈಗ ನಾನು ಏನಾಗಿರುವೆ, ಏನಾಗಿರಲು ಇಷ್ಟ ಪಡುವೆ ಅದೆಲ್ಲವೂ ನನ್ನ ತಾಯಿ ದೇವತೆಗೆ ಕ್ರೆಡಿಟ್‌ ಕೊಡುವೆ. ಈ ಪೋಸ್ಟ್‌ ನನ್ನ ತಾಯಿ ಬಗ್ಗೆ' ಎಂದು ಬರೆದುಕೊಂಡಿದ್ದಾರೆ. 

36

'ನನ್ನ ತಾಯಿ ಪುಷ್ಪ  ಸಂಬರಗಿ ಮತ್ತು ಕಿಚ್ಚ ಸುದೀಪ್ ಒಟ್ಟಿಗಿರುವ ಫೋಟೋ ಇದು. ಕಳೆದ ವಾರ ಸುದೀಪ್ ಸರ್ ಕೊಟ್ಟ ಆತಿಥ್ಯ ಎಂದೂ ಮರೆಯುವುದಿಲ್ಲ'

46

 'ಸುದೀಪ್‌ ಕಂಡ್ರೆ ನನ್ನ ತಾಯಿಗೆ ತುಂಬಾನೇ ಇಷ್ಟ. 1999ರಲ್ಲಿ ಮೊದಲು ಸುದೀಪ್‌ನ ನನ್ನ ತಾಯಿ ಭೇಟಿ ಮಾಡಿದ್ದು ಅಲ್ಲಿಂದ ಆ ಪ್ರೀತಿ ಮತ್ತು ಗೌರವ ಹುಟ್ಟಿದ್ದು'

56

'ಅಂದಿನಿಂದ ಈ ದಿನದವರೆಗೂ ಸುದೀಪ್ ಅವರಿಗೆ ನನ್ನ ತಾಯಿ ಮೇಲೆ ಅಷ್ಟೇ ಪ್ರೀತಿ ಇದೆ.' ಎಂದು ಪ್ರಶಾಂತ್ ಹೇಳಿದ್ದಾರೆ. ಯಾವ ಕಾರಣಕ್ಕೆ ಭೇಟಿ ಆಗಿದ್ದರು ಎನ್ನುವ ವಿಚಾರ ತಿಳಿದಿಲ್ಲ.

66

'ಬಿಗ್ ಬಾಸ್ ಸೀಸನ್ 10ಕ್ಕೆ ಮೇಡಂ ಪುಷ್ಪ ಸಂಬರಗಿ ಅವರನ್ನು ಕಳುಹಿಸಿದ. ಒಳ್ಳೆ ಮನಸ್ಸಿನ ವ್ಯಕ್ತಿ ಅವರು. ಆಕೆಯನ್ನು ಸೀಸನ್ 9ರಲ್ಲಿ ನೋಡಿ ಮೆಚ್ಚಿಕೊಂಡಿದ್ದೀವಿ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Read more Photos on
click me!

Recommended Stories