ಪುಟ್ಟ ಗೌರಿ ಮದುವೆ, ಡ್ಯಾನ್ಸಿಂಗ್ ಚಾಂಪಿಯನ್ಸ್ ಮತ್ತು ಬಿಗ್ ಬಾಸ್ ಸೀಸನ್ 9 ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ಸಾನ್ಯಾ ಪದವಿ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸಾನ್ಯಾ 'ಗ್ರ್ಯಾಜುಯೇಷನ್ ಗುರು' ಎಂದು ಬರೆದುಕೊಂಡು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಮಾಸ್ ಮೀಡಿಯಾ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ ಸಾನ್ಯಾ ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿದ್ದಾರೆ. ನಿನ್ನ ಬಗ್ಗೆ ಹೆಮ್ಮೆ ಇದೆ ಮಗಳೆ ಎಂದು ತಾಯಿ ರೂಪಾ ಅಯ್ಯರ್ ಬರೆದುಕೊಂಡಿದ್ದಾರೆ.
'ತುಂಬಾ ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಲೇಜ್‌ಗೆ ಹೋಗಿಲ್ಲ ಎಂದು. ಜೂನ್ ತಿಂಗಳಿನಲ್ಲಿ ಸಾನ್ಯಾ ಪರೀಕ್ಷೆ ಬರೆದಿದ್ದು. ಗ್ರ್ಯಾಜುಯೇಷನ್‌ನ ಜನವರಿಯಲ್ಲಿ ಮಾಡಿದ್ದಾರೆ ಅಷ್ಟೆ' ಎಂದು ರೂಪಾ ಸ್ಪಷ್ಟನೆ ಕೊಟ್ಟಿದ್ದಾರೆ.
'ಇವತ್ತು ಪರೀಕ್ಷೆ ಬರೆದು ನಾಳೆನೇ ಸರ್ಟಿಫಿಕೇಟ್ ಕೊಡೋ ಕಾಲೇಜ್ ಯಾವುದು ಇದೆ. ಅವಳು ಚಿಕ್ಕ ವಯಸ್ಸಿನಿಂದನು ಶೂಟಿಂಗ್ ಹೋಗಿ ಸ್ಕೂಲ್‌ನಲ್ಲಿ ಕೂಡ ಫಸ್ಟ್ ಬರ್ತಾ ಇದ್ಲು. ಈಗ್ಲೂ ಹಾಗೆ. ಆಕೆ ತುಂಬಾನೇ ಟ್ಯಾಲೆಂಟ್ ಹುಡುಗಿ' ಎಂದು ಬರೆದುಕೊಂಡಿದ್ದಾರೆ.
ರೂಪೇಶ್ ಶೆಟ್ಟಿ, ಅನುಪಮಾ ಗೌಡ, ದಿವ್ಯಾ ಉರುಡುಗ ಸೇರಿದಂತೆ ಅನೇಕರು ಕಾಮೆಂಟ್‌ನಲ್ಲಿ ವಿಶ್ ಮಾಡಿದ್ದಾರೆ. ಬಿಬಿ 9 ನಂತರ ಸಾನ್ಯಾ ಒಳ್ಳೆ ಸಿನಿಮಾ ಕಥೆಗೆ ಹುಡುಕುತ್ತಿದ್ದಾರೆ.