ಸ್ಟಾರ್‌ ಸುವರ್ಣದಲ್ಲಿ ಸಿಹಿಕಹಿ ಚಂದ್ರು ಬೊಂಬಾಟ್‌ ಭೋಜನ ಸೀಸನ್‌ 3 ಶುರು

Published : Jan 28, 2023, 11:32 AM IST

ವೆರೈಟಿ ವೆರೈಟಿ ಅಡುಗೆ ಇಷ್ಟ ಪಡುವವರಿಗೆ ಶುರುವಾಯ್ತು ಬೊಂಬಾಟ್ ಭೋಜನ ಸೀಸನ್ 3. ಪ್ರೆಸ್‌ಮೀಟ್ ಮಾಡುವ ಮೂಲಕ ಕಾರ್ಯಕ್ರಮದಕ್ಕೆ ಚಾಲನೆ ಕೊಟ್ಟ ತಂಡ....   

PREV
16
ಸ್ಟಾರ್‌ ಸುವರ್ಣದಲ್ಲಿ ಸಿಹಿಕಹಿ ಚಂದ್ರು ಬೊಂಬಾಟ್‌ ಭೋಜನ ಸೀಸನ್‌ 3 ಶುರು

ಸ್ಟಾರ್‌ ಸುವರ್ಣದಲ್ಲಿ ಸಿಹಿಕಹಿ ಚಂದ್ರು (Sihi Haki Chandru) ಸಾರಥ್ಯದಲ್ಲಿ ‘ಬೊಂಬಾಟ್‌ ಭೋಜನ ಸೀಸನ್‌ 3’ (Bombat Bhojana) ಆರಂಭವಾಗುತ್ತಿದೆ. ಸೋಮವಾರದಿಂದ ಶನಿವಾರ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. 

26

ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಹಿಕಹಿ ಚಂದ್ರು, ‘ಈ ಸೀಸನ್‌ನಲ್ಲಿ ಬಯಲೂಟ, ಸವಿಯೂಟ, ಮನೆ ಊಟ, ಅಂದ ಚಂದ, ಅಂಗೈಯಲ್ಲಿ ಆರೋಗ್ಯ, ಟಿಪ್‌ ಟಿಪ್‌ ಟಿಪ್‌ ಹಾಗೂ ಅತಿಥಿ ದೇವೋಭವ ಎಂಬ ಏಳು ಬಗೆಯ ವಿಶೇಷಗಳಿವೆ. ಪರಿಣಿತರು ಮಾಹಿತಿ ನೀಡುತ್ತಾರೆ.

36

ಕಾರ್ಯಕ್ರಮದ ಕೊನೆಯಲ್ಲಿ ಡುಂಡಿರಾಜ್‌ ಹನಿಗವನ ಹೇಳುತ್ತೇನೆ’ ಎಂದು ಮಾಹಿತಿ ನೀಡಿದರು. ‘ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿದೆ. 

46

ಆ ಬಗ್ಗೆ ಕಾರ್ಯಕ್ರಮದಲ್ಲಿ ಹೇಳುತ್ತೇವೆ’ ಎಂದು ಡಾ ಗೌರಿ ಸುಬ್ರಹ್ಮಣ್ಯ ಹೇಳಿದರು. ಸಾಹಿತಿ ಡುಂಡಿರಾಜ್‌, ಸಿಹಿಕಹಿ ಗೀತಾ, ಖುಷಿ, ಶ್ರೀಪಾದ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

56

ಆರಂಭದಿಂದಲ್ಲೂ ಚಂದ್ರು ಅವರು ಪ್ರತಿ ಏರಿಯಾದ ಜನಪ್ರಿಯ ಹೋಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರ ಸವಿದು ಸೂಪರ್ ಡೂಪರ್ ಎನ್ನುವ ಸರ್ಟಿಫಿಕೇಟ್ ನೀಡುತ್ತಾರೆ. ಹಲವು ಹೋಟೆಲ್‌ಗಳಲ್ಲಿ ಅದನ್ನು ಕಾಣಬಹುದು.

66

ಸಾಮಾನ್ಯರು ಮತ್ತು ಸೆಲೆಬ್ರಿಟಿಗಳಿಗೂ ಅವಕಾಶ ನೀಡಿ ಅವರ ಹುಟ್ಟೂರು ಅಥವಾ ತಮ್ಮ ತಮ್ಮ ಮನೆಯ ಸ್ಪೆಷಲ್ ಅಡುಗೆಯನ್ನು ಮಾಡಿಸುತ್ತಾರೆ. ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ ಈ ಕಾರ್ಯಕ್ರಮ. 

Read more Photos on
click me!

Recommended Stories