Bigg Boss 12ಕ್ಕೆ ಡಾ.ಬ್ರೋ ಹೋಗದ ಕಾರಣ ಕೊನೆಗೂ ರಿವೀಲ್! ಗಗನ್​ ಹೇಳಿದ್ದೇನು ಕೇಳಿ

Published : Oct 01, 2025, 05:43 PM IST

ಯುಟ್ಯೂಬರ್ ಡಾ.ಬ್ರೋ ಖ್ಯಾತಿಯ ಗಗನ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ತಾವೇಕೆ ಈ ಶೋಗೆ ಹೋಗುವುದಿಲ್ಲ ಎಂಬುದನ್ನು ಸ್ವತಃ ಗಗನ್ ಅವರೇ ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. ಬ್ರೋ ಹೇಳಿದ್ದೇನು? 

PREV
16
ಬಿಗ್​ಬಾಸ್​ನಲ್ಲಿ ಡಾ.ಬ್ರೋ ಏಕಿಲ್ಲ?

ಈ ಬಾರಿಯ ಬಿಗ್​ಬಾಸ್​ (Bigg Boss) ಘೋಷಣೆ ಆಗ್ತಿದ್ದಂತೆಯೇ ಅವರು ಹೋಗ್ತಾರೆ, ಇವರು ಹೋಗ್ತಾರೆ ಎನ್ನುವ ಸುದ್ದಿಗಳು ಸದ್ದು ಮಾಡಿದ್ದೇ ಮಾಡಿದ್ದು. ಅವರ ಪೈಕಿ ಬಹುತೇಕ ಮಂದಿ ಬಿಗ್​ಬಾಸ್​ಗೆ ಈ ಬಾರಿ ಹೋಗಿಲ್ಲ. ಎಲ್ಲಿಯೂ ಹೆಸರು ಕೇಳಿಯೇ ಬರದವರೇ ಹೋದದ್ದು ಹೆಚ್ಚು. ಅತಿ ಹೆಚ್ಚು ಸದ್ದು ಮಾಡಿದ್ದ ಹೆಸರುಗಳ ಪೈಕಿ ಡಾ.ಬ್ರೋ (Dr. Bro) ಖ್ಯಾತಿಯ ಯುಟ್ಯೂಬರ್​ ಗಗನ್​ ಅವರೂ ಒಬ್ಬರು. ಇವರು ಹೋಗುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು.

26
ಬಿಗ್​ಬಾಸ್​ಗೆ ಹೋಗಬೇಡಿ ಎಂದಿದ್ದರು ಅಭಿಮಾನಿಗಳು

ಇವರು ಹೋಗುತ್ತಿದ್ದಾರೆ ಎನ್ನುವುದು ಸುದ್ದಿಯಾಗುತ್ತಲೇ ಕೆಲವರು ಖುಷಿ ಹಂಚಿಕೊಂಡಿದ್ದರೆ, ಮತ್ತೆ ಹಲವು ಅಭಿಮಾನಿಗಳು ಈ ಷೋ ನಿಮ್ಮಂಥವರಿಗೆ ಅಲ್ಲ, ತುಂಬಾ ಒಳ್ಳೆಯ ಹೆಸರು ಮಾಡಿದ್ದೀರಿ, ಕೆಡಿಸಿಕೊಳ್ಳಬೇಡಿ, ಈ ಷೋ ಒಪ್ಪಿಕೊಳ್ಳಬೇಡಿ ಎಂದು ಬುದ್ಧಿಮಾತನ್ನೂ ಹೇಳಿದ್ದುಂಟು. ಅದರ ಹೊರತಾಗಿಯೂ ಕೊನೆಯ ಘಳಿಗೆಯವರೆಗೂ ಗಗನ್​ ಅವರು ಹೋಗ್ತಾರೋ ಇಲ್ಲವೋ ಎನ್ನುವ ಕನ್​ಫ್ಯೂಷನ್ನೇ ಇತ್ತು.

36
ಡಾ.ಬ್ರೋ ಹೇಳಿದ್ದೇನು?

ಇದೀಗ ಅವರು ಆ ಬಗ್ಗೆ ಬಹಿರಂಗಪಡಿಸಿದ್ದಾರೆ. ಫೇಸ್​ಬುಕ್​ ಲೈವ್​ಗೆ ಬಿಗ್​ಬಾಸ್​​ ಆರಂಭಕ್ಕೂ ಮುನ್ನ ಬಂದ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆ ಕೇಳಲಾಗಿತ್ತು. ಬಿಗ್​ಬಾಸ್​​ಗೆ ಹೋಗ್ತೀರಾ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಗಗನ್​ ಅವರು, ಇಲ್ಲ, ಹೋಗುವುದಿಲ್ಲ. ಮೂರು ತಿಂಗಳು ಒಂದೇ ಕಡೆ ಇರುವುದು ಕಷ್ಟವಾಗುತ್ತದೆ. ಮೂರು ತಿಂಗಳಿನಲ್ಲಿ ಐದು ದೇಶ ಸುತ್ತಬಹುದು ಎಂದು ಹೇಳಿದ್ದರು. ಅದರ ವಿಡಿಯೋ ಈಗ ವೈರಲ್​ ಆಗಿದೆ.

46
ಅಭಿಮಾನಿಗಳ ಆತಂಕ

ಅಷ್ಟಕ್ಕೂ ಡಾ.ಬ್ರೋ ಸದ್ಯ ಕೆಲವು ತಿಂಗಳುಗಳಿಂದ ಸೈಲೆಂಟ್​ ಆಗಿದ್ದಾರೆ. ಇವರ ವಿದೇಶಗಳ ವಿಡಿಯೋ ಯಾವಾಗ ಬರುತ್ತೆ ಎಂದು ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಲೇ ಇರುತ್ತಾರೆ. ಅತ್ಯಂತ ಕ್ಲಿಷ್ಟಕರ ಜಾಗದಲ್ಲಿ, ಅಪಾಯ ಎನ್ನಿಸುವ ಮುಸ್ಲಿಂ ದೇಶಗಳಿಗೂ ಹೋಗಿ ಬಂದ ಖ್ಯಾತಿ ಈ ಯುವ ಯುಟ್ಯೂಬರ್​ದು.

56
ಜೀವಕ್ಕೆ ಅಪಾಯದ ಕೆಲಸ

ಎಷ್ಟೋ ಬಾರಿ ಗುರೂ, ಇಂಥ ಅಪಾಯ ಎಲ್ಲಾ ಮಾಡ್ಕೋಬೇಡಿ ಎಂದು ಅಭಿಮಾನಿಗಳು ಆತಂಕ ಪಟ್ಟುಕೊಂಡಿರುವುದು ಇದೆ. ಇರೋ ಒಂದು ಹೃದಯನ ಎಷ್ಟೂ ಅಂತ ಗೆಲ್ತೀಯಾ ಗುರು ಎಂದೂ ಹಲವರು ಪದೇಪದೇ ಹೇಳುತ್ತಲೇ ಇರುತ್ತಾರೆ.

66
ಗೋ ಪ್ರವಾಸ ಕಂಪೆನಿ

ಆದರೆ, ಕೆಲವು ತಿಂಗಳುಗಳಿಂದ ಗಗನ್​ ಅವರು ಗೋ ಪ್ರವಾಸ ಎನ್ನುವ ಕಂಪೆನಿಯಲ್ಲಿ ಉದ್ಯಮ ಶುರು ಮಾಡಿಕೊಂಡಿರೋ ಕಾರಣ, ವಿಡಿಯೋ ಹಾಕುವುದು ಕಡಿಮೆಯಾಗಿದೆ. ಈ ಉದ್ಯಮದ ಮೂಲಕ ಪ್ರವಾಸಿಗರಿಗೆ ದೇಶ-ವಿದೇಶ ಸುತ್ತಿಸುತ್ತಿದ್ದಾರೆ ಡಾ.ಬ್ರೋ.

ಇದನ್ನೂ ಓದಿ: ಶೈನ್ ಶೆಟ್ಟಿ ಡ್ರೀಮ್​ ಗರ್ಲ್​ ಈಕೆ: ಕನಸಿನ ಕನ್ಯೆಯ ಬಗ್ಗೆ Bigg Boss ವಿನ್ನರ್​ ಓಪನ್​ ಮಾತು

Read more Photos on
click me!

Recommended Stories