ಶೂಟಿಂಗ್‌ಗೆ ಬ್ರೇಕ್: ಸೋನು ಗೌಡ, ನೇಹಾ ಗೌಡ ಧಾರ್ಮಿಕ ಯಾತ್ರೆ

Published : Mar 20, 2024, 03:04 PM IST

ಕನ್ನಡದ ಫೇವರಿಟ್ ಅಕ್ಕ ತಂಗಿಯರಾಗಿರುವ ನೇಹಾ ಗೌಡ ಮತ್ತು ಸೋನು ಗೌಡ ಉಜ್ಜಯಿನಿ ಮತ್ತು ಓಂಕಾರೇಶ್ವರಕ್ಕೆ ಧಾರ್ಮಿಕ ಯಾತ್ರೆ ಕೈಗೊಂಡಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

PREV
17
ಶೂಟಿಂಗ್‌ಗೆ ಬ್ರೇಕ್: ಸೋನು ಗೌಡ, ನೇಹಾ ಗೌಡ ಧಾರ್ಮಿಕ ಯಾತ್ರೆ

ಕನ್ನಡ ಕಿರುತೆರೆ ಮತ್ತು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ಫೇವರಿಟ್ ಅಕ್ಕತಂಗಿ ಜೋಡಿ ಇದೀಗ ಮತ್ತೊಮ್ಮೆ ಜೊತೆಯಾಗಿ ಟ್ರಾವೆಲ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇಬ್ಬರು ಜೊತೆಯಾಗಿ ಈ ಬಾರಿ ಮಧ್ಯಪ್ರದೇಶಕ್ಕೆ ಟ್ರಾವೆಲ್ ಮಾಡಿದ್ದಾರೆ. 
 

27

ಹೌದು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನೇಹಾ ಗೌಡ (Neha Gowda) ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ಅಕ್ಕ ಸೋನು ಗೌಡ (Sonu Gowda), ಇಬ್ಬರೂ ಜೊತೆಯಾಗಿ ಸೇರಿ ಹೆಚ್ಚಾಗಿ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ದೇಶ, ವಿದೇಶ, ಸ್ಪಿರಿಚುವಲ್ ಜರ್ನಿ (Spiritual Joureny) ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಈ ಅಕ್ಕ ತಂಗಿ ಜೋಡಿ. 
 

37

ಇದೀಗ ನೇಹಾ ಮತ್ತು ಸೋನು ತಮ್ಮ ಫ್ಯಾಮಿಲಿ ಫ್ರೆಂಡ್ಸ್ (Family Friends) ಜೊತೆ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳ ದೇವಸ್ಥಾನ ಮತ್ತು ಓಂಕಾರೇಶ್ವರ ದೇಗುಲಕ್ಕೆ ಧಾರ್ಮಿಕ ಯಾತ್ರೆ ಕೈಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡಿದ್ದಾರೆ.
 

47

ಓಂಕಾರೇಶ್ವರ (Omkareshwara Temple) ಮತ್ತು ಮಹಾಕಾಳನ ಸನ್ನಿಧಿಯಲ್ಲಿ ತೆಗೆದಂತಹ ಫೋಟೋ, ನರ್ಮದಾ ನದಿಯ ತಟದಲ್ಲಿ ತೆಗೆದಂತಹ ಫೋಟೋ ಹಾಗೂ ಹಲವು ವಿಡಿಯೋಗಳನ್ನು ತಮ್ಮ ಸೊಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸೋನು ಗೌಡ, ಭರವಸೆ, ನಂಬಿಕೆ (Trust), ಶಾಂತಿ (Peace), ವಿಶ್ವಾಸ (Confidence) ಎಂದು ಬರೆದುಕೊಂಡಿದ್ದಾರೆ. 
 

57

ಓಂಕಾರೇಶ್ವರನ ಆರತಿ, ಮಹಾಕಾಳನ ಭಸ್ಮಾರತಿ, ಲಿಂಗ ಪೂಜೆ ಮಾಡುವಂತಹ ಫೋಟೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಉಜ್ಜಯಿನಿ ಮತ್ತು ಓಂಕಾರೇಶ್ವರಕ್ಕೆ ನಮ್ಮ ಧಾರ್ಮಿಕ ಯಾತ್ರೆ ಎಂದು ಬರೆದುಕೊಂಡಿದ್ದಾರೆ. 
 

67

ಜೊತೆಗೆ ಮಾಹಾಕಾಳೇಶ್ವರ ದಕ್ಷಿಣಕ್ಕೆ ಮುಖ ಮಾಡಿರುವ (ದಕ್ಷಿಣಮುಖಿ) ಏಕೈಕ ಜ್ಯೋತಿರ್ಲಿಂಗ ಇದಾಗಿದ್ದು, ಉಳಿದೆಲ್ಲಾ ಜ್ಯೋತಿರ್ಲಿಂಗಗಳು ಪೂರ್ವಕ್ಕೆ ಮುಖ ಮಾಡಿದೆ ಎಂದು, ಓಂಕಾರೇಶ್ವರದಲ್ಲಿ ನರ್ಮದಾ ನದಿ ಹರಿಯುತ್ತದೆ, ಇಲ್ಲಿನ ಪರ್ವತಗಳು ಓಂ ಆಕಾರದಲ್ಲಿವೆ ಎಂದು, ಇಲ್ಲಿಗೆ ಭೇಟಿ ನೀಡಿ ಪಾವನರಾದೆವು ಎಂದೂ ಸೋನು ಗೌಡ ಬರೆದಿದ್ದಾರೆ. 
 

77

ಕರಿಯರ್ (Career) ವಿಷ್ಯಕ್ಕೆ ಬಂದ್ರೆ ಸೋನು ಗೌಡ ಕನ್ನಡ ಸಿನಿಮಾಗಳ ಜೊತೆಗೆ ಮಲಯಾಳಂ, ತಮಿಳು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದು, ಕೊನೆಯದಾಗಿ ಕನ್ನಡದ ಮಾರೀಚಿ ಸಿನಿಮಾದಲ್ಲಿ, ತಮಿಳಿನ ಅಘೋರಿ ಸಿನಿಮಾದಲ್ಲಿ ನಟಿಸಿದ್ದರು. ಇವರ ತಂಗಿ ನೇಹಾ ಗೌಡ,  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories