ಆಫ್ ಶೋಲ್ಡರ್ ಟಾಪ್, ತುಂಡು ಜೀನ್ಸ್…. ಇವರೇನಾ ಬೃಂದಾವನದ ಪುಷ್ಫಾ

Published : Mar 20, 2024, 01:06 PM IST

ಅಮೂಲ್ಯ ಭಾರಧ್ವಜ್ ಹೊಸ ಫೋಟೋಗಳನ್ನು ನೋಡಿದ್ರೆ ಇವರೇನಾ ಬೃಂದಾವನ ಸೀರಿಯಲ್ ನಲ್ಲಿ ಸೀರೆಯುಟ್ಟು, ಮುಗ್ಧೆಯಾಗಿರುವ ಪುಷ್ಪಾ ಅಂತ ನೀವು ಕೇಳಬಹುದು.   

PREV
17
ಆಫ್ ಶೋಲ್ಡರ್ ಟಾಪ್, ತುಂಡು ಜೀನ್ಸ್…. ಇವರೇನಾ ಬೃಂದಾವನದ ಪುಷ್ಫಾ

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್ ನಲ್ಲಿ ತುಂಬಾನೆ ಮುಗ್ಧೆಯ ಪಾತ್ರದಲ್ಲಿ ದೊಡ್ಡ ಕೂಡು ಕುಟುಂಬದ ಸೊಸೆಯಾಗಿ, ಆಕಾಶ್ ನ ಪತ್ನಿಯಾಗಿ, ಸದಾ ಸೀರೆಯಲ್ಲೆ ಕಾಣಿಸುವ ಹುಡುಗಿ ಪುಷ್ಪಾ. 
 

27

ಧಾರಾವಾಹಿ (Serial) ಆರಂಭದಿಂದಲೂ ಪುಷ್ಪಾಳ ಮುಗ್ಧ ಪಾತ್ರವನ್ನು ಹೆಚ್ಚಿನ ಜನರು ಇಷ್ಟಪಟ್ಟಿದ್ದರು. ಸಿಕ್ಕಿದ್ರೆ ಇಂಥದ್ದೆ ಹುಡುಗಿ ಸಿಗಬೇಕು, ತುಂಬಾನೆ ಮುದ್ದಾಗಿ ನಟಿಸುತ್ತಿದ್ದಾರೆ. ಇಂತದ್ದೇ ಹುಡುಗಿ ನಮಗೂ ಬೇಕು ಎಂದು ಹೇಳಿದವರೇ ಹೆಚ್ಚು. 
 

37

ಆದರೆ ರೀಲ್ ಲೈಫಲ್ಲಿ ತುಂಬಾನೆ ಡಿಸೆಂಟ್ ಆಗಿ ಕಾಣಿಸಿಕೊಳ್ಳುವ ಪುಷ್ಪಾ ಪಾತ್ರಧಾರಿ ಅಮೂಲ್ಯ ಭಾರಧ್ವಜ್ (Amulya Bharadwaj) ನಿಜಜೀವನದಲ್ಲಿ ತುಂಬಾನೆ ಸ್ಟೈಲಿಶ್ ಆಗಿದ್ದಾರೆ. ಇವರ ಹೊಸ ಶೂಟ್ ನೋಡಿದವರು ಇವರೇನಾ ಪುಷ್ಪಾ ಅಂತಿದ್ದಾರೆ. 
 

47

ಹೌದು, ಸದ್ಯ ಸೀರಿಯಲ್ ನಿಂದ ಬ್ರೇಕ್ ಪಡೆದು, ಟ್ರಾವೆಲ್ ಮಾಡುತ್ತಿರುವ ಅಮೂಲ್ಯ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ವಿವಿಧ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ತುಂಬಾನೆ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಬೃಂದಾವನದ ಪುಷ್ಪಾ. 
 

57

ಕಪ್ಪು ಬಣ್ಣದ ಆಫ್ ಶೋಲ್ಡರ್ ಕ್ರಾಪ್ ಟಾಪ್, ಡೆನಿಮ್ ಬಮ್ ಶಾರ್ಟ್ ಧರಿಸಿರುವ ಅಮೂಲ್ಯ ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದಾರೆ. ಬೃಂದಾವನದ (Brundavana) ಪುಷ್ಪಾಗೂ, ರಿಯಲ್ ಲೈಫ್ ಅಮೂಲ್ಯಗೂ ತುಂಬಾನೆ ವ್ಯತ್ಯಾಸ ಇದೆ. 
 

67

ಆಕೆಯನ್ನು ನಕ್ಷತ್ರ, ಕಲೆಗಳು, ತಪ್ಪುಗಳು ಮತ್ತು ಹೂವುಗಳಿಂದ ಮಾಡಲಾಗಿದೆ ಎಂದು ಬೀಚ್ ಸೈಡ್ ನಲ್ಲಿ ನಡೆದಾಡುವ ಸಮುದ್ರದ ಅಂದವನ್ನು ನೋಡುವ ಹಲವಾರು ಫೋಟೊಗಳನ್ನು ಅಮೂಲ್ಯ ಶೇರ್ ಮಾಡಿದ್ದಾರೆ. ಅಮೂಲ್ಯ ಕಾಲಿನ ಮೇಲೆ ಟ್ಯಾಟೂ ಕೂಡ ಹಾಕಿರೋದನ್ನು ಕಾಣಬಹುದು. 
 

77

ಸೀರಿಯಲ್ ವಿಚಾರಕ್ಕೆ ಬಂದ್ರೆ, ಸದ್ಯ ಪುಷ್ಪಾಳನ್ನು ಕಂಡರೇನೆ ಆಗದಿದ್ದ ಆಕಾಶ್ ಗೆ ಈಗ ಪುಷ್ಪಾಳ ಒಳ್ಳೆಯ ಗುಣ, ಆಕೆಯ ಬುದ್ಧಿವಂತಿಗೆ ಬಗ್ಗೆ ತಿಳಿದು, ಆಕೆಯ ಮೇಲೆ ಪ್ರೀತಿ ಹುಟ್ಟಿದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಕಾದು ನೋಡಬೇಕು. 
 

Read more Photos on
click me!

Recommended Stories